ರೆಪೋ ದರದಲ್ಲಿ ಬದಲಾವಣೆ ಇಲ್ಲ

0
318

ರಾಷ್ಟ್ರೀಯ ಪ್ರತಿನಿಧಿ ವರದಿ
ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತವಾಗಿ ಪ್ರಕಟಿಸಿದೆ. ಈಗಿರುವ ಶೇ.6.25ರಷ್ಟು ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಅಲ್ಲದೆ ಆರ್ ಬಿಐಯಿಂದ ಬ್ಯಾಂಕ್ ಗಳಿಗೆ ನೀಡುವ ಸಾಲದ ಬಡ್ಡಿದರದಲ್ಲಿ ಬದಲಾವಣೆ ಮಾಡಲಿಲ್ಲ ಎಂದು ಆರ್ ಬಿಐ ಮೂಲಗಳು ಮಾಹಿತಿ ನೀಡಿದೆ.
 
ನೀತಿಯಲ್ಲಿ ಸಡಿಲತೆ:
ಆನ್ ಲೈನ್ ಹಣ ಪಾವತಿಯನ್ನು ಎರಡು ಸಾವಿರಕ್ಕೆ ಸೀಮಿತಗೊಳಿಸುವತ್ತ ಆರ್.ಬಿ.ಐ ಗಮನಹರಿಸಿದೆ. ಎ.ಎಕ್ಷ್.ಎ ಪಾವತಿಯನ್ನು ಎರಡು ಸಾವಿರ ರೂ.ಗೆ ಸೀಮಿತಗೊಳಿಸುವ ಮೂಲಕ ಸಣ್ಣಮಟ್ಟಿನ ಹಣ ಚಲವಣೆ ಪದ್ದತಿಗೆ ಇಂಬು ನೀಡಿದೆ.
ಸಿ.ಎನ್.ಪಿ ಕಾರ್ಡಿನಿಂದ ಎರಡು ಸಾವಿರ ರೂ.ವರೆಗೆ ಹಣ ಪಾವತಿ ಮಾಡಬಹುದಾಗಿದ್ದು, ಈ ಕಾರ್ಡ್ ಇನ್ನು ಬಳಕೆಗೆ ಬಂದಿಲ್ಲ. ಪ್ರಮುಖ ಬೆಳವಣಿಗೆಯೊಂದರಲ್ಲಿ ಆರ್.ಬಿ.ಐ ಕೆಲವರಿಗೆ ಮಾತ್ರ ಈ ಕಾರ್ಡ್ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದೆ.
ಕಾರ್ಡೇತರ ನಗದು ಚಲಾವಣೆ ಸಂದರ್ಭ ಸಿ.ಎನ್.ಪಿ ಕಾರ್ಡಿನ ಬಳಕೆ ಎಲ್ಲಾ ವ್ಯಾಪಾರಸ್ಥರಿಗೆ ಲಭ್ಯವಾಗಲಿದೆ. ಬ್ಯಾಂಕುಗಳು ಹಾಗೂ ಕಾರ್ಡ್ ಪೂರೈಕೆದಾರರು ಗ್ರಾಹಕರಿಗೆ ಈ ಸೇವೆ ನೀಡಬೇಕಾದರೆ, ಗ್ರಾಹಕರು ಒಂದು ಹಂತದ ನೋಂದಣಿ ಮಾಡಿಕೊಂಡು, ಅದರಲ್ಲಿ ಕಾರ್ಡ್ ವಿವರ ಮತ್ತು ಎ.ಎಫ್.ಎ ಯನ್ನು ನಮೂದಿಸಬೇಕು ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here