ರೆಡ್ಡಿಗೆ ಐಟಿ ಭಯ

0
147

ಬಳ್ಳಾರಿ ಪ್ರತಿನಿಧಿ ವರದಿ
update: ಜನಾರ್ದನ ರೆಡ್ಡಿ ನಿವಾಸದ ಮೇಲೂ ಐಟಿ ದಾಳಿ ನಡೆಸಿದೆ. ಸಿರಗುಪ್ಪ ರಸ್ತೆಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದ ಮೇಲೆ ಮೂವರ ಐಟಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
 
ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಐಟಿ ಬಿಸಿ ಮುಟ್ಟಿಸಿದೆ. ಮಗಳ ಅದ್ಧೂರಿ ಮದುವೆ ಬೆನ್ನಲ್ಲೇ ರೆಡ್ಡಿಗೆ ಐಟಿ ಶಾಕ್ ನೀಡಿದೆ. ಇಂದು ಬಳ್ಳಾರಿಯ ಒಎಂಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
 
 
ಸಿರಗುಪ್ಪ ರಸ್ತೆಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದ ಬಳಿಯಿರುವ ರೆಡ್ಡಿ ಮಾಲೀಕತ್ವದ ಎರಡು ಕಂಪನಿಗೆ ಮೇಲೆ ದಾಳಿ ನಡೆದಿದೆ. ರೆಡ್ಡಿ ಒಡೆತನದ ಒಎಂಸಿ ಹಾಗೂ ಎಎಂಸಿ ಕಚೇರಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ ರೆಡ್ಡಿ ಮಗಳ ಮದುವೆ ಸೇವೆ, ಸೌಲಭ್ಯ ನೀಡಿದ ಹೈದ್ರಾಬಾದ್ ಮೂಲದ ಕಂಪನಿಗಳ ಮೇಲೂ ದಾಳಿ ನಡೆದಿದೆ. ದಾಳಿ ನಡೆಸಿದ ಅಧಿಕಾರಿಗಳು ಒಎಂಸಿ ಕಚೇರಿಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ. ಎರಡು ಇನ್ನೋವಾ ವಾಹನಗಳಲ್ಲಿ ಆಗಮಿಸಿದ 5 ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
 
 
ಮದುವೆಗೆ ಖರ್ಚು ಮಾಡಿದ ಹಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ರೆಡ್ಡಿಪುತ್ರಿಯ ಮದುವೆ ಕುರಿತ ಲೆಕ್ಕಮತ್ರಗಳ ಪರಿಶೀಲನೆ ನಡೆಸಲಾಗಿದೆ. ಅದ್ಧೂರಿ ಆಮಂತ್ರಣಪತ್ರದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ. ಮದುವೆಗೆ ಆಗಮಿಸಿದ ಅತಿಥಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ. ಇದರಿಂದ ಜನಾರ್ದನ ರೆಡ್ಡಿ ನಿವಾಸದ ಮೇಲೂ ಐಟಿ ದಾಳಿ ನಡೆಸುವ ಸಾಧ‍್ಯತೆ ಇದೆ.
 
 
ಇಂದು ಮಧ್ಯೆ ರಾತ್ರಿಯವರೆಗೆ ಅವಕಾಶ
ಸದ್ಯ ಜನಾರ್ದನ ರೆಡ್ಡಿ ಹೈದರಾಬಾದ್ ನಿಂದ ಬಳ್ಳಾರಿಗೆ ಆಗಮಿಸಿದ್ದಾರೆ. ಹೈದರಾಬಾದ್ ನಲ್ಲಿ ಪುತ್ರಿಯ ವಿವಾಹ ಆರತಕ್ಷತೆ ಮುಗಿಸಿ ಬಳ್ಳಾರಿ ನಗರದಲ್ಲಿರುವ ನಿವಾಸಕ್ಕೆ ಆಗಮಿಸಿದ್ದಾರೆ. ವಿಶೇಷ ವಿಮಾನದಲ್ಲಿ ಜಿಂದಾಲ್ ಗೆ ಆಗಮಿಸಿ ಬಳಿಗೆ ಬಳ್ಳಾರಿಗೆ ತೆರಳಿದ್ದಾರೆ. ಇಂದು ಮಧ್ಯರಾತ್ರಿ 12ರವರೆಗೆ ಮಾತ್ರ ರೆಡ್ಡಿಗೆ ಬಳ್ಳಾರಿಯಲ್ಲಿರಲು ಅವಕಾಶ ನೀಡಲಾಗಿದೆ. ಮಗಳ ಮದುವೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿರಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು.

LEAVE A REPLY

Please enter your comment!
Please enter your name here