ರುಡ್ ಸೆಟ್ ಸಂಸ್ಥೆಯ ತರಬೇತಿಯಿಂದ ಜೀವನದ ಮೌಲ್ಯಗಳನ್ನು ಅಳವಡಿಸಕೊಳ್ಳಬಹುದು

0
343


ವರದಿ: ಸುನೀಲ್ ಬೇಕಲ್
ರುಡ್ ಸೆಟ್ ಸಂಸ್ಥೆಯ ತರಬೇತಿಯಿಂದ ನಿರುದ್ಯೋಗ ನಿವಾರಣೆ ಮಾತ್ರವಲ್ಲದೇ ಬದುಕಿನಲ್ಲಿ ಅನೇಕ ಜೀವನ ಮೌಲ್ಯಗಳನ್ನು ಕೂಡ ಅಳವಡಿಸಕೊಳ್ಳಬಹುದು. ರುಡ್ಸಂಸ್ಥೆಯಲ್ಲಿ ತರಬೇತಿಯನ್ನು ಪಡೆಯಲು ದೊರೆತ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ನಾಗರೀಕ ಪ್ರಜೆಗಳಾಗಿ ಬದುಕಿರಿ ಎಂದು ಸಿಂಡಿಕೇಟ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್.ಎಸ್. ಮಲ್ಲಿಕಾರ್ಜುನ ರಾವ್ ರವರು ಅಭಿಪ್ರಾಯಪಟ್ಟರು.
 
 
 
 
ಅವರು ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದ ಶಿಬಿರಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕಿನ ಉಪ ಮಹಾಪ್ರಬಂಧಕರಾದ ಎಸ್.ಎಮ್. ದೇಸಾಯಿ ಮತ್ತು ಆರ್ ಸೆ ಟಿಗಳ ರಾಷ್ಟ್ರೀಯ ನಿದೇಶಕರಾದ ಕೆ.ಎನ್. ಜನಾರ್ಧನ್ ಉಪಸ್ಥಿತರಿದ್ದರು.
 
 
 
ರುಡ್ ಸೆಟ್ ಸಂಸ್ಥೆಯ ಕೇಂದ್ರ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅರುಣ್ ವಿ.ಜೆ ರವರು ಅತಿಥಿಗಳನ್ನು ಸ್ವಾಗತಿಸಿದರೆ, ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅನಸೂಯ ಕಾರ್ಯಕ್ರಮ ನಿರೂಪಿಸಿ ಸಂಸ್ಥೆಯ ನಿರ್ದೇಶಕರಾದ ಅಜಿತ್ ಕೆ. ರಾಜಣ್ಣವರ್ ವಂದಿಸಿದರು. ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಸಹಕರಿಸಿದರು.

LEAVE A REPLY

Please enter your comment!
Please enter your name here