ರೀ ಎಂಟ್ರಿಯಾದ ಜಾರ್ಜ್

0
369

ಬೆಂಗಳೂರು ಪ್ರತಿನಿಧಿ ವರದಿ
ಮತ್ತೆ ಸಚಿವರಾಗಿ ಕೆ ಜೆ.ಜಾರ್ಜ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾರು ಜಾರ್ಜ್ ಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
 
 
ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಸಂಸದ ಕೆ.ಹೆಚ್.ಮುನಿಯಪ್ಪ, ಸಚಿವರಾದ ಡಾ.ಜಿ.ಪರಮೇಶ್ವರ್, ಡಿ.ಕೆ. ಶಿವಕುಮಾರ್, ಹೆಚ್ ಎಸ್ ಮಹದೇವ ಪ್ರಸಾದ್, ರಾಮಲಿಂಗಾ ರೆಡ್ಡಿ, ರಾಜ್ಯಸಭಾ ಸದ್ಯ ಕುಪೇಂದ್ರ ರೆಡ್ಡಿ, ಶಾಸಕರು ಉಪಸ್ಥಿತರಿದ್ದರು. ರಾಜಭವನದ ಬಳಿ ಜಾರ್ಜ್ ಬೆಂಬಲಿಗರ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
 
 
ಡಿವೈಎಸ್ ಪಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಜೆ. ಜಾರ್ಜ್​ ಮತ್ತೆ ಸಚಿವರಾಗಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೂರು ತಿಂಗಳು ಕಳೆಯುವ ಮುನ್ನವೇ ಕೆ.ಜೆ. ಜಾರ್ಜ್​ ಮತ್ತೆ ಸಿದ್ದು ಸಂಪುಟ ಸೇರಿದ್ದಾರೆ. ಸಿಐಡಿ ತನಿಖೆ ನಡೆಸಿ ಮೂರೇ ತಿಂಗಳೊಳಗೆ ಜಾರ್ಜ್​ ಅವರಿಗೆ ಕ್ಲೀನ್​ ಚಿಟ್​ ನೀಡಿ ಬಿ-ರಿಪೋರ್ಟ್​ ಕೋರ್ಟ್​ಗೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here