ರಿಸ್ಕಿ ನಿರ್ಧಾರ ಕೈಗೊಳ್ಳಲು ಸಿದ್ಧ: ಜೇಟ್ಲಿ

0
313

ನವದೆಹಲಿ ಪ್ರತಿನಿಧಿ ವರದಿ
500, 1000 ರೂಪಾಯಿ ನೋಟುಗಳ ಬ್ಯಾನ್ ಅನಿವಾರ್ಯವಾಗಿದೆ. ಕಪ್ಪುಜಣ ತಡೆಗೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಕೇಂದ್ರ ಹಣಕಾಸು ಖಾಚೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
 
 
ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈಗಾಗಲೇ ಕೇಂದ್ರ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಕಠಿಣ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ದೇಶದ ಹಿತದೃಷ್ಠಿಯಿಂದ ಕಠಿಣ ನಿರ್ಧಾರ ಅನಿವಾರ್ಯವಾಗಿದೆ. ಯುಪಿಎ ಸರ್ಕಾರ ಅನುಭವದಿಂದ ತುಂಬಾ ಕಲಿತಿದ್ದೇವೆ. ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಪರಿಣಾಮಗಳ ಬಗ್ಗೆ ಮೊದಲೇ ನಾವು ಚಿಂತನೆ ಮಾಡಿದ್ದೆವು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
 
 
ಇಂದಿನಿಂದ 500, 2000 ರೂಪಾಯಿ ಹೊಸ ನೋಟು ಬಿಡುಗಡೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಟ್ಯಾಕ್ಸ್ ರೂಪವನ್ನು ನಾವು ಸರಳೀಕರಣಗೊಳಿಸಿದ್ದೇವೆ. ಸರ್ಕಾರ ಉತ್ತಮ ಕಾರ್ಯವನ್ನು ನಿರ್ವಹಿಸಿದೆ. ನಮ್ಮ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ಬದ್ಧವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here