ರಿಯೋ ಹಬ್ಬಕ್ಕೆ ವರ್ಣರಂಜಿತ ಮುಕ್ತಾಯ

0
267

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ  ನಡೆದ 16 ದಿನಗಳ ಕ್ರೀಡಾ ಹಬ್ಬ ಮುಕ್ತಾಯವಾಗಿದ್ದು, ಒಲಿಂಪಿಕ್ಸ್​​​​ಗೆ ಅದ್ದೂರಿ ತೆರೆ ಬಿದ್ದಿದೆ.
 
 
ಮರಕಾನಾ ಸ್ಟೇಡಿಯಂನಲ್ಲಿ ನಡೆದ ಈ ಮುಕ್ತಾಯ ಸಮರೋಪ ಸಮಾರಂಭಕ್ಕೆ 78 ಸಾವಿರಕ್ಕೂ ಹೆಚ್ಚು ಜನರು ಸಾಕ್ಷಿಯಾದರು. ಲೇಜರ್​​ ಲೈಟ್​​ನ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಎಲ್ಲಾ ದೇಶದ ಅಥ್ಲಿಟ್​​ಗಳು ರಾಷ್ಟ್ರ ಧ್ವಜ ಹಾಗೂ ತಾವು ಗೆದ್ದ ಪದಕದೊಂದಿಗೆ ಕಾಣಿಸಿಕೊಂಡರು.
 
 
ತುಂತುರು ಮಳೆ ಸರಿಯುತ್ತಿದ್ದರು ಸಂಭ್ರಮ ಸಡಗರಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. 31ನೇ ಒಲಿಂಪಿಕ್ಸ್​​​ ಮುಕ್ತಾಯ ಸಮರಂಭದಲ್ಲಿ ಕೊನೆ ಪದಕದ ಗೌರವ ಪುರುಷರ ಮ್ಯಾರಥಾನ್​​​​​ನಲ್ಲಿ ಚಿನ್ನ ಗೆದ್ದ ಕೀನ್ಯಾದ ಕಿಪ್ಚುಗೊಗೆ ನೀಡಲಾಯ್ತು.
 
 
ಆ ಬಳಿಕ ಮುಂದಿನ ಒಲಿಂಪಿಕ್ಸ್​​ ಆಯೋಜನೆ ಮಾಡುವ ಜಪಾನ್​​ನ ಟೋಕಿಯೋಗೆ ಧ್ವಜವನ್ನು ಹಸ್ತಾಂತರಿಸಲಾಯ್ತು. ಇದಕ್ಕೂ ಮೊದಲು ಬ್ರೆಜಿಲ್​​ ಸಂಪ್ರದಾಯವನ್ನು ಸೂಚಿಸುವ ಹಲವು ನೃತ್ಯ ಸಂಗೀತ ಕಾರ್ಯಕ್ರಮಗಳು ನಡೆದವು. 2020ರಲ್ಲಿ ಮುಂದಿನ ಒಲಿಂಪಿಕ್ಸ್ ಟೋಕಿಯೋದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here