ರಿಯೋ ಒಲಂಪಿಕ್ಸ್ ಗೆ ಮತ್ತೆ ಮೂವರಿಗೆ ಅರ್ಹತೆ

0
315

ವರದಿ: ಲೇಖಾ
ರಿಯೋ ಒಲಿಂಪಿಕ್ಸ್‌ಗೆ ಕೊನೆಯ ಅರ್ಹತಾ ಕೂಟವಾದ ಇಂಡಿಯನ್‌ ಗ್ರ್ಯಾನ್‌ ಪ್ರೀ ಆ್ಯತ್ಲೆಟಿಕ್‌ ಕೂಟ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿದ್ದು, ಬೆಂಗಳೂರಿನಲ್ಲಿ ನಡೆದ ಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೂರು ಮಂದಿ ಮತ್ತು 4×400 ಮೀ. ಪುರುಷರ ಮತ್ತು ಮಹಿಳೆಯರ ರಿಲೇ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ.
 
 
ಪುರುಷರ 200 ಮೀ. ಓಟದಲ್ಲಿ ಹರ್ಯಾಣದ ಧರ್ಮ ವೀರ್‌ ಸಿಂಗ್‌ 20.45 ಸೆಕೆಂಡ್ಸ್‌ನಲ್ಲಿ ಓಡಿ ನೂತನ ರಾಷ್ಟ್ರೀಯ ಕೂಟ ದಾಖಲೆ ನಿರ್ಮಿಸಿದರು. ಧರ್ಮವೀರ್ ಮೊದಲ ಸ್ಥಾನಿಯಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.
 
 
ಲಂಡನ್‌ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಕೇರಳದ ಟ್ರಿಪಲ್‌ಜಂಪ್‌ ಸ್ಪರ್ಧಿ ರಂಜಿತ್‌ ಮಹೇಶ್ವರಿ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡರು. ರಂಜಿತ್‌ ಅವರು 17.30 ಮೀ. ಜಿಗಿದು ಒಲಿಂಪಿಕ್ಸ್‌ ಪ್ರವೇಶ ಪಡೆದರು.
 
 
ಕೇರಳದ ಇನ್ನೋರ್ವ ಅತ್ಲೀಟ್‌ ಜಿನ್ಸನ್‌ ಜಾನ್ಸನ್‌ ಪುರುಷರ 800 ಮೀ.ನಲ್ಲಿ 1:45.98 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.
ವಿಶ್ವದಾದ್ಯಂತ ನಡೆಯುತ್ತಿದ್ದ ಒಲಿಂಪಿಕ್ಸ್‌ ಅರ್ಹತಾ ಕೂಟಗಳಿಗೆ ಅಧಿಕೃತ ತೆರೆಬಿದ್ದಿದೆ. ಇನ್ನೇನಿದ್ದರೂ ರಿಯೋ ಒಲಿಂಪಿಕ್ಸ್‌ಗೆ ಸಜ್ಜಾಗಬೇಕಿದೆಯಷ್ಟೇ.

LEAVE A REPLY

Please enter your comment!
Please enter your name here