ರಿಯೋದಲ್ಲಿ ಅವಘಡ

0
395

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ರಿಯೋ ಒಲಿಂಪಿಕ್ಸ್‌ ಆರಂಭವಾದ ಮೊದಲ ದಿನವೇ ಅವಘಡವೊಂದು ಸಂಭವಿಸಿದೆ. ಫ್ರಾನ್ಸ್‌ನ ಜಿಮ್ನ್ಯಾಸ್ಟ್ ಒಬ್ಬರು ಅರ್ಹತಾ ಸುತ್ತಿನ ಸ್ಪರ್ಧೆಯ ವೇಳೆ ಕಾಲು ಮುರಿದುಕೊಂಡಿದ್ದಾರೆ.
 
 
ಫ್ರಾನ್ಸ್‌ನ ಜಿಮ್ನಾಸ್ಟ್‌ ಸಮೀರ್‌ ಐತ್‌ ಸಯಿದ್‌ ಅವರು ಪ್ರದರ್ಶನ ವೇಳೆ, ಕೆಲ ಮೀಟರ್‌ ಓಡಿಬಂದು ಟೇಕ್‌ ಅಪ್‌ ಪಡೆದು ಮೇಲಕ್ಕೆ ಜಿಗಿದು ಗಾಳಿಯಲ್ಲಿ ಎರಡು ಸುತ್ತು ಲಾಗ ಹಾಕಿ, ಮೂರನೇ ಸುತ್ತಿಗೆ ನೆಲದ ಮೇಲೆ ನಿಲ್ಲಬೇಕಿದ್ದ ಕ್ಷಣದಲ್ಲಿ ಅವರ ಎಡ ಕಾಲು ಮುರಿತಕ್ಕೊಳಗಾಗಿದೆ.
 
 
ತಕ್ಷಣ ಸ್ಥಳಕ್ಕೆ ಆಗಮಿಸಿದ ವೈದ್ಯರ ತಂಡ ಸ್ಪರ್ಧಾಳುವನ್ನು ಅಲ್ಲಿಂದ ಸ್ಟ್ರಚರ್‌ನಲ್ಲಿ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿದೆ.

LEAVE A REPLY

Please enter your comment!
Please enter your name here