ರಿಕ್ತ ಪವರ್ ವ್ಯಾಕ್ಯುಮ್ ಕ್ಲೀನರ್ ಅವಿಷ್ಕಾರ

0
276

ವರದಿ: ಸುನೀಲ್ ಬೇಕಲ್
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಉಜಿರೆ ಇದರ ಆವಿಷ್ಕಾರಿ ಉಪನ್ಯಾಸಕರ ವೃಂದದಿಂದ RIKTHA” Power vacuum cleaner(ರಿಕ್ತ ಪವರ್ ವ್ಯಾಕ್ಯುಮ್ ಕ್ಲೀನರ್) ಎಂಬ ಯಂತ್ರವನ್ನು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಬಿ. ಯಶೋವರ್ಮರವರ ಮಾರ್ಗದರ್ಶನದಲ್ಲಿ ಅವಿಷ್ಕಾರಿಸಲಾಗಿದೆ.
 
ujire_hegde1
 
ಈ ಯಂತ್ರವುಗಿ enturi Effect(ವೆಂಚುರಿಇಫೆಕ್ಟ್) ಎಂಬ ಪರಿಕಲ್ಪನೆಯಿಂದ ತಯಾರಿಸಲಾಗಿದ್ದು, effective suction (ಇಫೆಕ್ಟಿವ್ ಸಕ್ಷನ್) ಮುಖಾಂತರ ಕಾರ್ಯನಿರ್ವಹಿಸುತ್ತದೆ. ಇದನ್ನು ಸ್ವಚ್ಛಧರ್ಮಸ್ಥಳ ಎಂಬ ಧ್ಯೇಯ ವಾಕ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ.
 
 
 
ಈ ಯಂತ್ರ Blower ( ಬ್ಲೋವರ್) Venturi (ವೆಂಚುರಿ ) Suction Pipes (ಸಕ್ಷನ್ ಪೈಪ್ಸ್) ಮುಂತಾದ ಪ್ರಾಥಮಿಕ ಭಾಗಗಳನ್ನು ಒಳಗೊಂಡಿದೆ. ಬ್ಲೋವರ್ ಮೂಲಕಚಲಿಸುವಗಾಳಿಯು ಸಕ್ಷನ್ ಪೈಪಿನಲ್ಲಿ ನಿರ್ವಾತವನ್ನು ಉಂಟುಮಾಡಿ ಸುತ್ತಮುತ್ತಲಿನ ಕಸಕಡ್ಡಿಗಳನ್ನು ಈ ಯಂತ್ರದ ಒಳಗಡೆ ಎಳೆದುಕೊಳ್ಳುವಂತೆ ಮಾಡುತ್ತದೆ.
 
 
 
ಈ ಯಂತ್ರವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಡೊಯ್ಯಬಹುದಾಗಿದ್ದು ಯಾರು ಬೇಕಾದರೂ ಸುಲಭವಾಗಿ ಉಪಯೋಗಿಸಬಹುದಾಗಿದೆ. ಈ ಯಂತ್ರವು ಸ್ವಚ್ಛ ಪರಿಸರ ನಿರ್ಮಾಣಕ್ಕೆ ತುಂಬಾ ಉಪಯುಕ್ತವಾಗಿದೆ. ಧರ್ಮಸ್ಥಳದಲ್ಲಿ ಈಗಾಗಲೇ ಅನೇಕ ಕಡೆ ಈ ಯಂತ್ರವನ್ನು ಉಪಯೋಗಿಸಿ ಆ ಪ್ರದೇಶಗಳನ್ನು ಯಶಸ್ವಿಯಾಗಿ ಶುಚಿಗೊಳಿಸಲಾಗಿದೆ. ಸ್ವಚ್ಛ ಭಾರತಕ್ಕೆ ಈ ಯಂತ್ರವು ಒಂದು ಉತ್ತಮ ಕೊಡುಗೆಯಾಗಬಹುದಾಗಿದೆ.

LEAVE A REPLY

Please enter your comment!
Please enter your name here