ರಾಹುಲ್ ಟ್ವಿಟ್ಟರ್ ಅಕೌಂಟ್ ಮತ್ತೆ ಹ್ಯಾಕ್

0
162

ರಾಷ್ಟ್ರೀಯ ಪ್ರತಿನಿಧಿ ವರದಿ
ಖದೀಮರು ಕಾಂಗ್ರೆಸ್ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿದ್ದಾರೆ. ‘INC INDIA’ ಹೆಸರಿನ ಕಾಂಗ್ರೆಸ್ ಅಧಿಕರತ ಖಾತೆ ಹ್ಯಾಕ್ ಆಗಿದೆ. ಇಂದು ಮತ್ತೆ ಅಖಿಲ ಭಾರತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದೆ.
 
 
 
ನಿನ್ನೆಯೂ ಖದೀಮರು ರಾಹುಲ್ ಖಾತೆ ಹ್ಯಾಕ್ ಮಾಡಿದ್ದರು. 24 ಗಂಟೆಗಳಲ್ಲಿ 2ನೇ ಬಾರಿಗೆ ರಾಹುಲ್ ಅಕೌಂಟ್ ಹ್ಯಾಕ್ ಆಗಿದೆ. ಕಾಂಗ್ರೆಸ್ ನ ಟ್ವಿಟ್ಟರ್ ಅಕೌಂಟ್ ನಲ್ಲಿ ಹ್ಯಾಕರ್ಸ್ ಗಳು ಆಕ್ಷೇಪಾರ್ಹ ಟ್ವೀಟ್ ಪೋಸ್ಟ್ ಮಾಡಿದ್ದಾರೆ.
 
 
ಕಾಂಗ್ರೆಸ್ ಘಟಕ ದೆಹಲಿಯ ತುಘಲಕ್ ರಸ್ತೆಯಲ್ಲಿರುವ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here