ರಾಹುಲ್ ಗೆ ಪ್ರಧಾನಿ ತಿರುಗೇಟು

0
315

ರಾಷ್ಟ್ರೀಯ ಪ್ರತಿನಿಧಿ ವರದಿ
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿಯವರು ತಿರುಗೇಟು ನೀಡಿದ್ದಾರೆ. ಎಲ್ಲಿ ಭೂಕಂಪನವಾಗಿದೆ ಎಂದು ನನಗೆ ತಿಳಿಸಿ ಎಂದು ರಾಹುಲ್ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
 
 
 
ಯುವ ನಾಯಕ ಭಾಷಣ ಮಾಡಲು ಆರಂಭಿಸಿರುವುದು ಸಂತೋಷವಾಗಿದೆ ಅದರಲ್ಲೂ ರಾಹುಲ್ ನನ್ನ ಬಗ್ಗೆ ಮಾತನಾಡಿರುವುದೇ ಒಂದು ಖುಷಿಯ ವಿಚಾರವಾಗಿದೆ. ರಾಹುಲ್ ಗೆ ಹೆಚ್ಚಿನ ಜ್ಞಾನವಿಲ್ಲವೆಂದು ಅವರ ಮಾತಿನಿಂದ ತಿಳಿಯುತ್ತದೆ. ನಾನು ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ರಾಹುಲ್ ಹೇಳಿದ್ದರು. ಈಗ ನಾನು ರಾಹುಲ್ ರನ್ನು ಕೇಳಬೇಕು ಎಲ್ಲಿ ಭೂಕಂಪವಾಯ್ತೆಂದು ಎಂದು ಪ್ರಧಾನಿ ವ್ಯಂಗ್ಯವಾಡಿದ್ದಾರೆ.
 
 
 
ನಿನ್ನೆ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು, ಪ್ರಧಾನಿ ಮೋದಿ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಹರಾ ಮತ್ತು ಬಿರ್ಲಾ ಕಂಪನಿಯಿಂದ ಲಂಚ ಪಡೆದಿದ್ದಾಗಿ ರಾಹುಲ್ ಆರೋಪಿಸಿದ್ದರು. ಹೀಗಾಗಿ ಇಂದು ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ತಿರುಗೇಟು ನೀಡಿದ್ದಾರೆ.
 
 
 
ಕೆಲವು ರಾಜಕಾರಣಿಗಳು ಭ್ರಷ್ಟರಿಗೆ ಸಾಥ್ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಈಗ ಮಾತನಾಡುವುದನ್ನ ಕಲಿಯುತ್ತಿದ್ದಾರೆ. ಆದರೆ ನನ್ನ ವಿರುದ್ಧ ಮಾತನಾಡುವುದನ್ನು ಬಿಟ್ಟು ವಾಸ್ತವತೆಯ ಬಗ್ಗೆ ಮಾತನಾಡಲಿ ಎಂದು ಮೋದಿ ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here