ರಾಜ್ಯವಾರ್ತೆ

ರಾಷ್ಟ್ರೀಯ ಸೇವಾ ಯೋಜನೋತ್ಸವ

ಉಜಿರೆ ಪ್ರತಿನಿಧಿ ವರದಿ
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎನ್.ಎಸ್.ಎಸ್. ಘಟಕದ ಆತಿಥ್ಯದಲ್ಲಿ ಸುವರ್ಣ ಮಹೋತ್ಸವದ ಪ್ರಯುಕ್ತ ಕಾಲೇಜಿನಲ್ಲಿ ಮೊಟ್ಟಮೊದಲ ಬಾರಿಗೆ ಎಪ್ರಿಲ್ 9 ರಿಂದ 13ರವರೆಗೆ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸವ ನಡೆಯಲಿದೆ.
 
ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ರಾಷ್ಟ್ರೀಯ ಸೇವಾ ಯೋಜನಾ ಕೋಶ ಬೆಂಗಳೂರು, ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಒಟ್ಟು 250 ಸ್ವಯಂಸೇವಕರು ಹಾಗೂ 20 ಯೋಜನಾಧಿಕಾರಿಗಳು ಭಾಗವಹಿಸಲಿದ್ದಾರೆ. ಒಟ್ಟುಐದು ದಿನಗಳ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಶ್ರಮದಾನ, ಶೈಕ್ಷಣಿಕ, ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
 
ಎರಡನೆಯ ದಿನ ಉಜಿರೆಯ ಶ್ರೀ ಜನಾರ್ಧನಸ್ವಾಮಿ ದೇವಸ್ಥಾನದಿಂದ ಎಸ್ ಡಿ ಎಂ ಕಾಲೇಜಿನ ಆವರಣದವರೆಗೆ ಸ್ವಯಂಸೇವಕರ ಮೆರವಣಿಗೆ ನಡೆಯಲಿದೆ. ಸ್ಥಳೀಯ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಈ ಮೆರವಣಿಗೆ ಪ್ರತಿಬಿಂಬಿಸಲಿದೆ.
 
ಈ ರಾಷ್ಟ್ರೀಯ ಯೋಜನೋತ್ಸವದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆಗಳಾದ ಪ್ರಬಂಧ, ಪ್ರಹಸನ, ರಸಪ್ರಶ್ನೆ, ವೈಯಕ್ತಿಕ ಗೀತಾ ಗಾಯನ, ಸಮೂಹ ಗಾಯನ, ವೈಯಕ್ತಿಕ ನೃತ್ಯ, ಸಮೂಹ ನೃತ್ಯ, ಚಿತ್ರಕಲೆ, ವಸ್ತುಪ್ರದರ್ಶನ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
 
ರಾಷ್ಟ್ರೀಯ ಭಾವೈಕ್ಯತೆ, ಮಾದಕ ವ್ಯಸನದಿಂದ ಮುಕ್ತಗೊಳ್ಳಲು ಪೂರಕವಾಗುವ ಸಂದೇಶ ಮತ್ತು ಕ್ಯಾನ್ಸರ್ ಕುರಿತು ಜಾಗೃತ ಪ್ರಜ್ಞೆ ಮೂಡಿಸುವ ಉದ್ದೇಶ ಈ ಯೋಜನೋತ್ಸವಕ್ಕಿದೆ.
 
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ವಯಂಸೇವಕ – ಸೇವಕಿಯರಿಗೆ, ಯೋಜನಾಧಿಕಾರಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲರಾದ ಪ್ರೊ. ಕೆ.ಎಸ್. ಮೋಹನ ನಾರಾಯಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here