ರಾಷ್ಟ್ರೀಯ ಕ್ರೀಡಾ ದಿನಾಚರಣೆ

0
271

ಬೆಂಗಳೂರು ಪ್ರತಿನಿಧಿ ವರದಿ
ಗೀತಂ ವಿವಿಯಲ್ಲಿ ಏಕಲವ್ಯ ಪ್ರಶಸ್ತಿ ವಿಜೇತೆ ಅಂತರಾಷ್ಟ್ರೀಯ ಕ್ರೀಡಾಪಟು- ಪ್ರಮೀಳಾ ಅಯ್ಯಪ್ಪ
ಗೀತಂ ವಿಶ್ವವಿದ್ಯಾಲಯ, ಬೆಂಗಳೂರು ಕ್ಯಾಂಪಸ್ ನಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು. ಏಕಲವ್ಯ ಪ್ರಶಸ್ತಿ ವಿಜೇತರಾದ ಖ್ಯಾತ ಕ್ರೀಡಾ ಪಟು ಪ್ರಮೀಳಾ ಅಯ್ಯಪ್ಪ ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಹಾಜರಿದ್ದರು. ವಿಜೇತ ಕ್ರೀಡಾ ಪಟುಗಳಿಗೆ ಪ್ರಮೀಳಾ ಅಯ್ಯಪ್ಪ ಪ್ರಶಸ್ತಿ ವಿತರಿಸಿದರು.
 
 
ಬಳಿಕ ಮಾತನಾಡಿದ ಅವರು ಕ್ರೀಡೆಗೆ ಆಸಕ್ತಿಯ ಜೊತೆಗೆ ಲಭಿಸಬೇಕಾದ ಪ್ರೋತ್ಸಾಹದ ಬಗ್ಗೆ ಒತ್ತಿ ಹೇಳಿದರು. ಸಂಪೂರ್ಣವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಬಯಸದ ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ದೃಷ್ಠಿಯಿಂದ ದಿನದ ಕೆಲ ಸಮಯವಾದರೂ ವ್ಯಾಯಾಮ ಹಾಗೂ ಕ್ರೀಡೆಗೆ ಸಮಯಾವಕಾಶ ನೀಡುವ ಅಗತ್ಯವನ್ನು ತಿಳಿ ಹೇಳಿದರು. ಇದೇ ಸಂದರ್ಭದಲ್ಲಿ ತಾನು ಕ್ರೀಡೆಯಲ್ಲಿ ಸಾಧನೆ ಮಾಡಲು ತನ್ನ ಪತಿ ಯಿಂದ ದೊರೆತ ಪ್ರೋತ್ಸಾಹವನ್ನು ಸ್ಮರಿಸಿದರು. ತನ್ನ ಮಗಳನ್ನೂ ಉತ್ತಮ ಕ್ರೀಡಾ ಪಟುವಾಗಿಸುವಲ್ಲಿ ಸತತ ಪರಿಶ್ರಮ ನಡೆಸಲಾಗುತ್ತಿದೆ ಎಂದರು. ಜೀವನದಲ್ಲಿ ಸತತ ಪರಿಶ್ರಮವಿದ್ದರೆ ಗುರಿ ತಲುಪಲು ಸಾಧ್ಯ ಎಂದರು.
 
 
 
ಗೀತಂ ವಿವಿ ಈ ಪ್ರಯುಕ್ತ ಫುಟ್ಬಾಲ್, ಕ್ರಿಕೆಟ್, ಶಟಲ್, ಟೇಬಲ್ ಟೆನಿಸ್ ವಾಲಿಬಾಲ್, ತ್ರೋ ಬಾಲ್ ಸೇರಿದಂತೆ ಹಲವಾರು ಕ್ರೀಡಾ ಕೂಟಗಳನ್ನು ನಡೆಸಿದೆ. ವಿವಿ ಸಹಾಯಕ ಉಪಕುಲಪತಿ ಪ್ರೊ ಶಿವಪುಲ್ಲಯ್ಯ, ಸ್ಕೂಲ್ ಆಫ್ ಟೆಕ್ನಾಲಜಿಯ ನಿರ್ದೇಶಕರಾದ ಪ್ರೊ. ಕೆ. ವಿಜಯ ಭಾಸ್ಕರ ರಾಜು, ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನ ನಿರ್ದೇಶಕರಾದ ಪ್ರೊ. ರಾಮ್ ಪ್ರಸಾದ್, ಸಹಾಯಕ ಪ್ರಿನ್ಸಿಪಾಲ್ ಪ್ರೊ ಕೃಷ್ಣ ಪ್ರಸಾದ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿದ್ದರು.
ಸಭಾ ಕಾರ್ಯಕ್ರಮದಲ್ಲಿ ಗೀತಂ ವಿವಿ ಬೆಂಗಳೂರು ಕ್ಯಾಂಪಸ್ ನ ಸಹಾಯಕ ಉಪಕುಲಪತಿ ಪ್ರೊ ಶಿವಪುಲ್ಲಯ್ಯ,ಸ್ಕೂಲ್ ಆಫ್ ಟಕ್ನೋಲೊಜಿಯ ಪ್ರೊ. ಕೆ ವಿಜಯ ಭಾಸ್ಕರ ರಾಜು, ಎಂಬಿಎ ನಿರ್ದೇಶಕರಾದ ಪ್ರೊ ರಾಮ್ ಪ್ರಸಾದ್, ಸಹಾಯಕ ಪ್ರಾಂಶುಪಾಲರಾದ ಪ್ರೊ ಕ್ರಷ್ಣಪ್ರಸಾದ್ ಭೋದಕ ಮತ್ತು ಭೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here