ರಾಷ್ಟ್ರೀಯತೆಯ ಕಲ್ಪನೆಯನ್ನು ಉತ್ತೇಜಿಸಿದವರು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ-ಶಾಸಕ ಕೋಟ್ಯಾನ್

0
11656

ಮೂಡುಬಿದಿರೆ: ಭಾರತದಲ್ಲಿ ಸ್ವಾತಂತ್ರ ನಂತರ ರಾಷ್ಟ್ರೀಯತೆಯ ಕಲ್ಪನೆಯನ್ನು ಉತ್ತೇಜಿಸಿದವರು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರು ಎಂದು ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅಭಿಪ್ರಾಯಿಸಿದರು. ದೇಶದ ಏಕೀಕರಣಕ್ಕಾಗಿ ಸತತ ದುಡಿದವರು ಮತ್ತು ದೇಶದಲ್ಲಿ ಬಲಿಷ್ಠ ರಾಜಕೀಯದ ಬೀಜ ಬಿತ್ತಿದರಲ್ಲದೆ ಆದರ್ಶ ಸಿದ್ಧಾಂತಕಾರರಾಗಿ ಹೋರಾಟಗಾರರಾಗಿ ಸದಾ ಅನುಸರಣೀಯ ವ್ಯಕ್ತಿತ್ವ ರೂಪಿಸಿದ್ದರು ಎಂದರು.
ಭಾರತೀಯ ಜನತಾ ಪಾರ್ಟಿ ಮೂಲ್ಕಿ ಮೂಡುಬಿದಿರೆ ಮಂಡಲ, ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿರವರ ಜನ್ಮದಿನಾಚರಣೆ ಕಾರ್ಯಕ್ರಮದಂಗವಾಗಿ ವ್ರಕ್ಷಾರೋಹಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಸಿನೆಟ್ಟು ಮಾತನಾಡಿದ ಶಾಸಕರು ಜಮ್ಮು ಕಾಶ್ಮೀರದ ಸಮಸ್ಯೆಯನ್ನು ಎಲ್ಲರಿಗಿಂತ ಮೊದಲೇ ಅರ್ಥೈಸಿಕೊಂಡ ಮುಖರ್ಜಿಯವರು ಅದರ ವಿಮೋಚನೆಗಾಗಿ ಬಲವಾಗಿ ಧ್ವನಿ ಎತ್ತಿದ್ದರು ಎಂದರು. ಬಂಗಾಳದ ವಿಭಜನೆ ಸಂದರ್ಭದಲ್ಲೂ ಭಾರತದ ಹಕ್ಕು ಮತ್ತು ಹಿತಾಸಕ್ತಿ ಪರ ಯಶಸ್ವಿ ಹೋರಾಟ ನಡೆಸಿದ್ದನ್ನು ಸ್ಮರಿಸಿದರು. ಭಾರತೀಯರ ಮೇಲೆ ಆಮದು ಸಿದ್ದಾಂತ ಮತ್ತು ತತ್ವಗಳನ್ನು ಹೇರುತ್ತಿದ್ದ ಕಾಂಗ್ರೆಸ್ ಪಕ್ಷಷವನ್ನು ವಿರೋಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತಿದ್ದುದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಎಂ, ಮಂಡಲ ಅಧ್ಯಕ್ಷರಾದ ಸುನಿಲ್ ಆಳ್ವ, ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಕೆ. ಆರ್. ಪಂಡಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಉಪಾಧ್ಯಕ್ಷರಾದ ಈಶ್ವರ್ ಕಟೀಲ್, ಮೂಡ ಅಧ್ಯಕ್ಷರಾದ ಮೇಘನಾಥ್ ಶೆಟ್ಟಿ, ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಎ.ಪಿ.ಎಂ.ಸಿ ಅಧ್ಯಕ್ಷರಾದ ಕೃಷ್ಣರಾಜ್ ಹೆಗ್ಡೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಚರಿತ ಶೆಟ್ಟಿ, ಪುರಸಭಾ ಉಪಾಧ್ಯಕ್ಷರಾದ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗರಾಜ್ ಪೂಜಾರಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರ ಹಾಗೂ ಮೂಡುಬಿದಿರೆ ನಗರ ಬಿಜೆಪಿ ಅಧ್ಯಕ್ಷರಾದ ಲಕ್ಷ್ಮಣ್ ಪೂಜಾರಿ, ಪುರಸಭಾ ಸದಸ್ಯರುಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here