ರಾಷ್ಟ್ರಪತಿ ಆಡಳಿತಕ್ಕೆ ಬ್ರೇಕ್

0
415

 
ರಾಷ್ಟ್ರೀಯ ಪ್ರತಿನಿಧಿ ವರದಿ
ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಡಳಿತ ರದ್ದಾಗಿದೆ.
ನೈನಿತಾಲ್ ಹೈಕೊರ್ಟ್ ನಿಂದ ಈ ಮಹತ್ವದ ತೀರ್ಪು ಹೊರಬಿದ್ದಿದ್ದು, ರಾಷ್ಟ್ರಪತಿ ಆಳ್ವಿಕೆ ಸಂಬಂಧ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪಿನಿಂದ ಮೋದಿ ನೇತೃತ್ವದ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.
 
 
ಮಾಜಿ ಸಿಎಂ ಹರೀಶ್ ರಾವತ್ ಸಲ್ಲಿಸಿದ್ದ ಅರ್ಜಿಗೆ ಜಯ ದೊರೆತ್ತಿದೆ. ಅಲ್ಲದೆ ಕೋರ್ಟ್ ರಾವತ್ ಗೆ ಏ.29ಕ್ಕೆ ಬಹುಮತ ಸಾಬೀತು ಮಾಡಲು ಅವಕಾಶ ನೀಡಲಾಗಿದೆ. ಬಂಡಾಯ ಎದ್ದಿರುವ 9 ಶಾಸಕರ ಸದಸ್ಯತ್ವ ಕೂಡ ರದ್ದಾಗಿದೆ.
 
 
 
ಸಾಂವಿಧಾನಿಕ ಪಾಪ ಮಾಡಿದ್ದಾರೆ ಎಂದು ಹೈಕೋರ್ಟ್ ಬಂಡಾಯ ಎದ್ದಿರುವ ಕಾಂಗ್ರೆಸ್ ನ 9 ಶಾಸಕರ ವಿರುದ್ಧ ಕಿಡಿಕಾರಿದೆ.
ಹೈಕೋರ್ಟ್ ತೀರ್ಪಿನಿಂದ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.
 
 
ಇದು ಪ್ರಜಾಪ್ರಭುತ್ವದ ಜಯ
ಪ್ರಜಾಪ್ರಭುತ್ವಕ್ಕೆ ಜಯ ಸಿಕ್ಕಿದೆ ಎಂದು ಹರೀಶ್ ರಾವತ್ ಡೆಹ್ರಾಡೂಡ್ ನಲ್ಲಿ ಹೇಳಿದ್ದಾರೆ. ಕೋರ್ಟ್ ತೀರ್ಪಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾವತ್, ನಮ್ಮ ಜೊತೆ ನಿಂತ ಉತ್ತರಾಖಂಡ್ ಜನತೆಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ಬಿಜೆಪಿ ಬಜೆಟ್ ಗೆ ಅನುಮೋದನೆ ನೀಡಲು ಅವಕಾಶ ನೀಡಲಿಲ್ಲ. ನಾನು ಬಹುಮತ ಸಾಬೀತು ಪಡಿಸಲು ಸಿದ್ಧರಿದ್ದೇವೆ. ಕೇಂದ್ರದ ನಿರ್ಧಾರದಿಂದಾಗಿ ಉತ್ತರಾಖಂಡ್ ಗೆ ಅವಮಾನವಾಗಿದೆ. ಆರು ಜನ ಪಕ್ಷೇತರ ಶಾಸಕರು ನಮ್ಮ ಜೊತೆ ಇದ್ದಾರೆ. ಉತ್ತರಾಖಂಡ್ ನಲ್ಲಿ ಪಕ್ಷಾಂತರ ಮಾಡಸಲಾಯಿತು.

LEAVE A REPLY

Please enter your comment!
Please enter your name here