ರಾಷ್ಟ್ರಪತಿಯವರಿಂದ ಧ್ವಜಾರೋಹಣ: ಅದ್ಧೂರಿ ಪಥಸಂಚಲನ

0
333

ನವದೆಹಲಿ ಪ್ರತಿನಿಧಿ ವರದಿ
ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆಯಲ್ಲಿ 68ನೇ ಗಣರಾಜ್ಯೋತ್ಸವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ಧಾರೆ. ಅಬುದಾಭಿ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮುಖ್ಯಅತಿಥಿಯಾಗಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರದಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ದೇವೇಗೌಡರು  ಸೇರಿ ಹಲವು ಗಣ್ಯರು ಭಾಗವಹಿಸಿದ್ದಾರೆ.
 
 
republic day_red1
ಅದ್ಧೂರಿ ಪರೇಡ್
ರಾಜ್ ಪಥ್ ನಲ್ಲಿ ಆಕರ್ಷಕ ಪಥಸಂಚಲನ ನಡೆದಿದೆ. ದೇಶದ ಸಾರ್ವ ಭೌಮತೆಯನ್ನು ಬಿಂಬಿಸುವ ಪರೇಡ್ ನಡೆದಿದೆ. ಭಾರತೀಯ ಸೇನಾಶಕ್ತಿ ಅನಾವರಣವಾಗಿದೆ. ಕೇಂದ್ರ ಸರ್ಕಾರದ 6 ಇಲಾಖೆಗಳ ಸಾಧನೆಯ ಸ್ತಬ್ಧಚಿತ್ರ, ಮೊದಲ ಬಾರಿಗೆ ಎನ್ ಎಸ್ ಜಿ ಕಮಾಂಡೋ ಪಡೆ ಪರೇಡ್, ತೇಜಸ್ ಹೆಲಿಕಾಪ್ಟರ್ ನಿಂದ ಮೊದಲ ಬಾರಿ ಹಾರಾಟ, 17 ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನ, ಇನ್ ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್ ಪಥಸಂಚಲನ, 103 ಇನ್ ಫೆಂಟ್ರಿ ಬೆಟಾಲಿಯನ್, ಟಿ90 ಭೀಷ್ಮ ಹಂಟರ್ ಕಿಲ್ಲರ್ ಟ್ಯಾಂಕ್ ಪ್ರದರ್ಶನ, ಪೂರ್ವ ಸೈನಿಕರ ಸ್ತಬ್ಧ ಚಿತ್ರ ಸೇರಿ ಹಲವು ಸ್ತಬ್ಧ ಚಿತ್ರಗಳು ಪಥಸಂಚಲನದಲ್ಲಿ ಭಾಗವಹಿಸಿದೆ.
 
 
 
ಹುತಾತ್ಮ ಹವಾಲ್ದಾರ್ ಹಂಗಪನ್ ದಾದಾಗೆ ಅಶೋಕ ಚಕ್ರ:
ಹುತಾತ್ಮ ಹವಾಲ್ದಾರ್ ಹಂಗಪನ್ ದಾದಾಗೆ ಅಶೋಕ ಚಕ್ರ ನೀಡಲಾಗಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ದಾದಾ ಪತ್ನಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಹವಾಲ್ದಾರ್ ಹಂಗಪನ್ ದಾದಾ ಅವರು ಮೂರು ಉಗ್ರರನ್ನು ಹತ್ಯೆಗೈದಿದ್ದು, ಭಯೋತ್ಪಾದಕರ ವಿರುದ್ಧ ಹೋರಾಟದಲ್ಲಿ ಹುತಾತ್ಮರಾಗಿದ್ದರು.

LEAVE A REPLY

Please enter your comment!
Please enter your name here