ರಾಷ್ಟ್ರಧ್ವಜ ಬೆಳೆದು ಬಂದ ದಾರಿ

0
1005

ವಿಶೇಷ ಲೇಖನ
1. ಮೊದಲ ರಾಷ್ಟ್ರಧ್ವಜ ಹಾರಿದ್ದು ಆಗಸ್ಟ್ 7, 1906ರಲ್ಲಿ. ಆಗಸ್ಟ್ 1906ರಲ್ಲಿ ರಾಷ್ಟ್ರಧ್ವಜವನ್ನು ಮೊದಲ ಬಾರಿಗೆ ಕೋಲ್ಕತ್ತಾದ ಪಾರ್ಸಿ ಬಗನ್ ಸ್ಕ್ವೇರ್ (ಗ್ರೀನ್ ಪಾರ್ಕ್) ನಲ್ಲಿ ಹಾರಿಸಲಾಗಿತ್ತು.
 

ಆಗಸ್ಟ್ 7, 1906
ಆಗಸ್ಟ್ 7, 1906

2. ಎರಡನೇ ರಾಷ್ಟ್ರಧ್ವಜವನ್ನು ಸ್ವಾತಂತ್ರ್ಯ ಹೋರಾಟಗಾರ್ತಿ ಮೇಡಮ್ ಭಿಕಾಜಿಯವರ ತಂಡ 1907ರಲ್ಲಿ ಪ್ಯಾರಿಸ್ ನಲ್ಲಿ ಹಾರಿಸಿತ್ತು.
 
flag2
3. ಮೂರನೇ ಬಾರಿ ರಾಷ್ಟ್ರಧ್ವಜವನ್ನು ಹೋಮ್ ರೂಲ್ ಚಳುವಳಿ ಸಮಯದಲ್ಲಿ ಡಾ.ಅನಿಬೆಸೆಂಟ್ ಮತ್ತು ಲೋಕಮಾನ್ಯ ತಿಲಕ್ 1917ರಲ್ಲಿ ಹಾರಿಸಿದರು. ಆಗ ಭಾರತದ ಸ್ವಾತಂತ್ರ್ಯ ಚಳುವಳಿಗೆ ತಿರುವು ಪಡೆದುಕೊಂಡಿತ್ತು.
 
1917ರಲ್ಲಿ
1917ರಲ್ಲಿ

4. ಈಗಿನ ರಾಷ್ಟ್ರಧ್ವಜವನ್ನು ರೈತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ಅವರು ರೂಪಿಸಿದ್ದರು. 1921ರಲ್ಲಿ ಕಾಂಗ್ರೆಸ್ ಸಮಿತಿ ಬೆಜವಾಡದಲ್ಲಿ(ಆಂಧ್ರದ ವಿಜಯವಾಡ) ಭೇಟಿಯಾದಾಗ ಪಿಂಗಳಿ ವೆಂಕಯ್ಯ ರೂಪಿಸಿದ ರಾಷ್ಟ್ರಧ್ವಜವನ್ನು ಗಾಂಧೀಜಿಯವರು ತೆಗೆದುಕೊಂಡರು. ಹಿಂದು ಮತ್ತು ಮುಸ್ಲಿಂರನ್ನು ಪ್ರತಿನಿಧಿಸುವಂತೆ ಕೆಂಪು ಮತ್ತು ಹಸಿರು ಎರರು ಬಣ್ಣಗಳಿಂದ ಮಾಡಲಾಗಿತ್ತು. ಬಿಳಿ ಬಣ್ಣ ಭಾರತದ ಉಳಿದ ಸಮುದಾಯಗಳನ್ನು ಸೂಚಿಸುವಂತಿರಲಿ ಎಂದು ಗಾಂಧೀಜಿ ಸಲಹೆ ನೀಡಿದ್ದರು. ತಿರುಗುತ್ತಿರುವ ಚಕ್ರ ದೇಶದ ಪ್ರಗತಿಯ ಸಂಕೇತವನ್ನು ಸೂಚಿಸುತ್ತಿತ್ತು.
 
ರಾಷ್ಟ್ರಧ್ವಜ ಪಿತಾಮಹ- ಪಿಂಗಳಿ ವೆಂಕಯ್ಯ
ರಾಷ್ಟ್ರಧ್ವಜ ಪಿತಾಮಹ- ಪಿಂಗಳಿ ವೆಂಕಯ್ಯ

5. 1931ರಲ್ಲಿ ಭಾರತದ ರಾಷ್ಟ್ರಧ್ವಜದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು. ಕೇಸರಿ, ಬಿಳಿ ಮತ್ತು ಹಸಿರುವ ಬಣ್ಣಗಳ ನಡುವೆ ನೀಲಿ ಬಣ್ಣದ ಗಾಂಧಿಯವರ ಚರಕ ಒಳಗೊಂಡ ಮೂರು ಬಣ್ಣಗಳಿಂದ ಕೂಡಿದ ಈ ಬಾವುಟ ಭಾರತದ ರಾಷ್ಟ್ರಧ್ವಜ ಎಂದು ತೀರ್ಮಾನಿಸಲಾಯಿತು.
 
ರಾಷ್ಟ್ರಧ್ವಜದ ಬಗ್ಗೆ ಗಾಂಧೀಜಿ ಮತ್ತು ಪಿಂಗಳಿ ವೆಂಕಯ್ಯ ಸಮಾಲೋಚನೆ
ರಾಷ್ಟ್ರಧ್ವಜದ ಬಗ್ಗೆ ಗಾಂಧೀಜಿ ಮತ್ತು ಪಿಂಗಳಿ ವೆಂಕಯ್ಯ ಸಮಾಲೋಚನೆ

ತಿರುಗುತ್ತಿರುವ ಚರಕ ಹೊಂದಿದ ರಾಷ್ಟ್ರಧ್ವಜ
ತಿರುಗುತ್ತಿರುವ ಚರಕ ಹೊಂದಿದ ರಾಷ್ಟ್ರಧ್ವಜ

 
6. ಜುಲೈ 22, 1947ರಲ್ಲಿ ತ್ರಿವರ್ಣ ಧ್ವಜವನ್ನು ನಮ್ಮ ಸಂವಿಧಾನ ರಾಷ್ಟ್ರಧ್ವಜವಾಗಿ ಅಂಗೀಕರಿಸಿತು. ಸ್ವಾತಂತ್ರ್ಯ ನಂತರ ರಾಷ್ಟ್ರಧ್ವಜದಲ್ಲಿರುವ ಮೂರು ಬಣ್ಣಗಳನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು. ಆದರೆ ಮಧ್ಯದಲ್ಲಿರುವ ಚರಕಕ್ಕೆ ಬದಲಾಗಿ ಸಾಮ್ರಾಟ್ ಅಶೋಕನ ಧರ್ಮ ಚಕ್ರವನ್ನು ಬಳಸಿಕೊಳ್ಳಲಾಯಿತು. ಕಾಂಗ್ರೆಸ್ ಪಕ್ಷದ ಈ ತ್ರಿವರ್ಣ ಧ್ವಜ ಸ್ವತಂತ್ರ್ಯ ಭಾರತದ ರಾಷ್ಟ್ರಧ್ವಜವಾಯಿತು.
 
ಈಗಿನ ಅಶೋಕ ಚಕ್ರ ಹೊಂದಿದ ರಾಷ್ಟ್ರಧ‍್ವಜ
ಈಗಿನ ಅಶೋಕ ಚಕ್ರ ಹೊಂದಿದ ರಾಷ್ಟ್ರಧ‍್ವಜ

 
ರಾಷ್ಟ್ರಧ್ವಜ ರೆಡಿಯಾಗುವುದು ಕರ್ನಾಟಕದಲ್ಲಿ…
ಭಾರತದ ಹೆಮ್ಮೆಯ ರಾಷ್ಟ್ರಧ್ವಜ ತಯಾರಾಗೋದು ಕರ್ನಾಟದಲ್ಲಿ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ರಾಷ್ಟ್ರಧ್ವಜವನ್ನು ತಯಾರಿಸಲು ಲೈಸೆನ್ಸ್ ಇರೋ ಭಾರತದ ಏಕೈಕ ಸಂಸ್ಥೆ ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವಾಗಿದೆ. ರಾಷ್ಟ್ರಧ್ವಜ ತಯಾರಿಸಲು ಬೇಕಾಗುವ ಕಚ್ಚಾವಸ್ತುಗಳನ್ನು ಧಾರವಾಡ ಮತ್ತು ಬಾಗಲಕೋಟೆಯ 2 ಕೈಮಗ್ಗ ಘಟಕಗಳು ರವಾನಿಸುತ್ತಿದೆ.
ರಾಷ್ಟ್ರಧ್ವಜ ನಿರ್ಮಾಣದಲ್ಲಿ ಕನ್ನಡದ ಮಹಿಳೆಯರು
ರಾಷ್ಟ್ರಧ್ವಜ ನಿರ್ಮಾಣದಲ್ಲಿ ಕನ್ನಡದ ಮಹಿಳೆಯರು

 
ಭಾರತದ ನಿಯಮಗಳ ಪ್ರಕಾರ ರಾಷ್ಟ್ರಧ್ವಜ ಎರಡನೇ ಮೂರರಷ್ಟು ಪ್ರಮಾಣದಲ್ಲಿರುತ್ತದೆ. ಅಂದ್ರೆ ಬಾವುಟ ಅಗಲಕ್ಕಿಂತ ಉದ್ದ 1.5ರಷ್ಟು ಹೆಚ್ಚಾಗಿರಬೇಕು. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಉದ್ದ ಮತ್ತು ಅಗಲ ಸಮವಾಗಿರಬೇಕು.

LEAVE A REPLY

Please enter your comment!
Please enter your name here