ರಾಷ್ಟ್ರಗೀತೆ ಕಡ್ಡಾಯ

0
304

ನವದೆಹಲಿ ಪ್ರತಿನಿಧಿ ವರದಿ
ದೇಶಾದ್ಯಂತ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ದೇಶದ ಎಲ್ಲ ಚಿತ್ರಮಂದಿರಗಳು ಮತ್ತು ಸಿನಿಮಾ ಹಾಲ್‍ಗಳಲ್ಲಿ ಚಿತ್ರ ಪ್ರದರ್ಶನಕ್ಕೂ ಮೊದಲು ರಾಷ್ಟ್ರಗೀತೆ ಪ್ರಸಾರ ಕಡ್ಡಾಯವಾಗಿದೆ.
 
 
 
ಸುಪ್ರೀಂಕೋರ್ಟ್ ನ್ಯಾ.ದೀಪಕ್ ಮಿಶ್ರ ನೇತೃತ್ವದ ಪೀಠ ಆದೇಶಿಸಿದೆ. ರಾಷ್ಟ್ರಗೀತೆ ಬಿತ್ತರಿಸುವಾಗ ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿ ವಾಣಿಜ್ಯ ದುರ್ಲಾಭ ಪಡೆದುಕೊಳ್ಳದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
 
 
ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಪ್ರಸಾರದ ಜತೆಗೆ, ಭಾರತದ ತ್ರಿವರ್ಣ ರಾಷ್ಟ್ರಧ್ವಜವನ್ನು ತೆರೆ ಮೇಲೆ ಪ್ರದರ್ಶಿಸಬೇಕು. ರಾಷ್ಟ್ರಗೀತೆಗೆ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಗೌರವ ನೀಡಬೇಕು ಎಂದು ಸೂಚನೆ ನೀಡಿದರು.

LEAVE A REPLY

Please enter your comment!
Please enter your name here