ರಾಶಿ ಭವಿಷ್ಯ

0
229

ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… (ಡಿ.1ರಿಂದ ಡಿ. 7ರವರೆಗೆ)
ಮೇಷ
ಈ ವಾರ ಸ್ನೇಹಿತರೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತೀರಿ. ವಾಹನ ಯೋಗ. ನಿಮ್ಮ ಹಳೆಯ ಸಮಸ್ಯೆಗಳು ಎದುರಾಗಲಿವೆ. ಹಣಕಾಸಿನ ವಿಷಯದಲ್ಲಿ ಎಚ್ಚರವಾಗಿರಿ. ಮಹಿಳೆಯರು ತಮ್ಮ ವಾಕ್ಚಾತುರ್ಯದಿಂದ ಇತರರ ಗಮನ ಸೆಳೆಯುತ್ತಾರೆ.
ವೃಷಭ
ಈ ವಾರ ನಿಮಗೆ ವ್ಯಾಪಾರಿಗಳಿಗೆ ಉತ್ತಮಲಾಭವಿದೆ. ಸ್ತ್ರೀಯರಿಗೆ ಅಹ್ವಾನ ದೊರೆಯುವುದು. ಪರಿಸ್ಥಿತಿಗಳು ಇಂದು ನಿಮ್ಮ ಕಡೆ ವಾಲುತ್ತವೆ ಮತ್ತು ನಿಮ್ಮ ವೈಯಕ್ತಿಕ ಪ್ರಗತಿಗಾಗಿ ಹೊಸ ಮಾರ್ಗಗಳು ಗೋಚರಿಸಲಿವೆ.ಬಡ್ತಿ ದೊರೆಯುವ ಸಂಭವವಿದೆ. ಕೆಲವರು ನಿಮ್ಮಿಂದ ಧನಸಹಾಯವನ್ನು ಬಯಸುತ್ತಾರೆ.
ಮಿಥುನ
ಈ ವಾರ ನೀವು ಸ್ತ್ರೀಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ. ವಿದೇಶಿ ವಸ್ತುಗಳ ಖರೀದಿಗೆ ಸಿದ್ದತೆ.ದೂರದ ಸಂಬಂಧಿಗಳಿಂದ ನೆರವು. ನಿಮ್ಮ ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಕೌಟಂಬಿಕ ಕಲಹ ಅಂತ್ಯವಾಗಲಿದೆ.
ಕರ್ಕಾಟಕ
ಈ ವಾರ ನೀವು ನಿಮ್ಮ ಎಳಿಗೆಯತ್ತ ಗಮನಹರಿಸಿ. ನೀವು ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ನಿಮಗೆ ಗೌರವ ಪ್ರಾಪ್ತಿಯಾಗಲಿದೆ. ವಿದೇಶಿ ಪ್ರವಾಸ ಯೋಗವಿದೆ. ಹಣಕಾಸು ವಿಷಯಗಳ ಸಂಬಂಧದಲ್ಲಿ ನಿಧಾನಗತಿ ಪ್ರಕ್ರಿಯೆ. ಮಾನಸಿಕ ನೆಮ್ಮದಿ ದೊರೆಯಲಿದೆ.
ಸಿಂಹ
ಈ ನೀವು ಮುಖ್ಯವಾಗಿ ವಾಗ್ವಾದದಿಂದ ದೂರವಿರಿ. ಹಣಕಾಸಿನ ಬಗ್ಗೆ ಎಚ್ಚರವಿರಲಿ. ಮುಖ್ಯವಾದ ಕಾರ್ಯಗಳಲ್ಲಿ ಏಕಾಗ್ರತೆ ವಹಿಸದಿದ್ದಲ್ಲಿ ಇಕ್ಕಟ್ಟಿಗೆ ಸಿಲುಕುತ್ತೀರಿ. ಖರ್ಚುಗಳು ಹೆಚ್ಚಾದರು ಮಾನಸಿಕ ಶಾಂತಿ ದೊರೆಯುತ್ತದೆ. ನಿಮ್ಮ ಕಾರ್ಯಗಳಲ್ಲಿ ಜಯ ಲಭಿಸಲಿದೆ.
ಕನ್ಯಾ
ಈ ವಾರ ನಿಮಗೆ ಸಾಂಘಿಕ ಪ್ರಯತ್ನದಿಂದ ಯಶಸ್ಸು ಲಭ್ಯ. ದೈನಂದಿನ ವಿಷಯಕ್ಕೆ ಹೆಚ್ಚಿನ ಸಮಯ ವ್ಯಯಿಸುತ್ತೀರಿ. ಆರೋಗ್ಯ ಮತ್ತು ಮನೆ ವಾತಾವರಣದಲ್ಲಿ ಈಗ ಸಮಯ ನಿಮಗೆ ಸಾಧಕವಾಗಿದೆ. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.
ತುಲಾ
ಈ ವಾರ ಅವಿವಾಹಿತರಿಗೆ ವಿವಾಹ ಯೋಗ ಉತ್ತಮವಾಗಿರುತ್ತದೆ. ರೈತರು ಪಶುಗಳ ಕ್ಷೇಮಕ್ಕೆ ಆದ್ಯತೆ ನೀಡುವುದು ಸೂಕ್ತ. ಕೆಲವರಿಗೆ ವಾಹನ ಯೋಗವಿರುತ್ತದೆ. ನಿಮ್ಮ ಅದೃಷ್ಟದ ದೆಸೆಯಿಂದ ನಿಮ್ಮ ಅಭಿಲಾಶೆಗಳಿಗೆ ಸೂಕ್ತ ಪ್ರತಿಕ್ರಿಯೆ ದೊರೆಯುತ್ತದೆ.
ವೃಶ್ಚಿಕ
ಈ ವಾರ ನಿಮ್ಮ ಸುತ್ತಲ ವಾತಾವರಣವು ಸಂತಸದಾಯಕವಾಗಿರುತ್ತದೆ. ಕುಟುಂಬದವರ ನೆರವು ಪ್ರಾಪ್ತವಾಗುತ್ತದೆ. ಹೊಸ ವಾಹನ ಖರೀದಿಸಲು ನೀವು ಯೋಚಿಸಬಹುದು. ಕಚೇರಿಯಲ್ಲಿ ನಿಮಗೊಪ್ಪಿಸಿದ ಕೆಲಸ ಪೂರ್ಣಗೊಳಿಸಲು ನೀವು ಸ್ವಲ್ಪ ಹೆಚ್ಚು ಶ್ರಮಪಡಬೇಕಾಗಬಹುದು.ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸಿ.
ಧನು
ಈ ವಾರ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯಲ್ಲಿ ಸಂಭ್ರಮದ ವಾತಾವರಣ. ನಿಮ್ಮ ಅಗತ್ಯ ಮತ್ತು ಇಚ್ಛೆಗಳನ್ನು ವ್ಯಕ್ತಪಡಿಸಲು ಹಾಗೂ ನಿಮಗೆ ನಿಜವಾಗಿಯೂ ಏನು ಬೇಕು ಎಂಬುದನ್ನು ಇತರರಿಗೆ ತಿಳಿಸಲು ಇದು ಸೂಕ್ತ ಸಮಯ. ನೆರೆಹೊರೆಯವರಿಂದ ನೆರವು.
ಮಕರ
ಈ ವಾರ ನೀವು ಹಿರಿಯರ ಆರೋಗ್ಯದ ಕಾಳಜಿ ವಹಿಸಿ. ಎಲ್ಲರಿಗೂ ಆತ್ಮೀಯರಾಗಿ ಮತ್ತು ಉತ್ಸಾಹಕರಾಗಿರುವಂತಿರಲು ಪ್ರಯತ್ನಿಸಿ. ಒಂದು ಪ್ರಣಯದ ಸಂಜೆ ನಿಮಗೆ ಉತ್ಸಾಹ ಮತ್ತು ಆನಂದವನ್ನು ನೀಡಲಿದೆ. ನಿಗದಿತ ಅವಧಿಯಲ್ಲಿ ಕಾರ್ಯಗಳನ್ನು ಪೂರ್ಣಗೊಳಿಸಿ.
ಕುಂಭ
ಈ ವಾರ ರಾಜಕಾರಣಿಗಳಿಗೆ ಉತ್ತಮ ಯೋಗವಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ. ಅನಿರೀಕ್ಷಿತ ಧನಲಾಭ ದೊರೆಯುವ ಸಾಧ್ಯತೆ ಇದೆ.ನಿಮ್ಮ ವ್ಯವಹಾರಗಳಲ್ಲಿ ಸ್ನೇಹಿತರಿಂದ ನೆರವು ದೊರೆಯುತ್ತದೆ. ವಿವಾದಗಳಲ್ಲಿ ತಲೆಹಾಕಬೇಡಿ.
ಮೀನ
ಈ ವಾರ ನಿಮಗೆ ಮಾನಸಿಕ ಕ್ಲೇಶ ಉಂಟಾಗಲಿದೆ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಬಡ್ತಿ ಸಂಭವ. ಹುಷಾರಾಗಿ ಹೆಜ್ಜೆ ಇರಿಸಿ. ನಿಮ್ಮ ಕಠಿಣ ಶ್ರಮವನ್ನು ಮುಂದುವರಿಸಿ. ಇಂದು ನೀವು ಸಾಹಸಿ ಮನೋಭಾವ ಹೊಂದಿರುತ್ತೀರಿ. ವ್ಯಾಪಾರಿಗಳಿಗೆ ಉತ್ತಮಲಾಭ. ಸ್ತ್ರೀಯರಿಗೆ ಅಹ್ವಾನ ದೊರೆಯುವುದು.

LEAVE A REPLY

Please enter your comment!
Please enter your name here