ರಾಶಿ ಫಲ…

0
640

 
ಈ ವಾರದ ನಿಮ್ಮ 12 ರಾಶಿಗಳ  ಭವಿಷ್ಯ ತಿಳಿಯಬೇಕೇ…(ಮಾ.28ರಿಂದ ಎ.4ರವರೆಗೆ)
ಮೇಷ
ಹಣಕಾಸಿನ ವಿಷಯದಲ್ಲಿ ನಿಮಗೆ ಸಹಾಯ ದೊರೆಯುತ್ತದೆ.ನಿಮ್ಮ ಗುರಿ ಸಾಧನೆಗೆ ಕೆಲ ವಿರೋಧಗಳು ಅಡ್ಡಬರುತ್ತಿವೆ. ವ್ಯಾಪಾರಸ್ಥರಿಗೆ,ಫ್ಯಾಶನ್, ಅಡ್ಡಿ ಆತಂಕಗಳು ದೂರವಾಗಲಿವೆ. ದೀರ್ಘ ಪ್ರಯಾಣವೊಂದರ ಸಾಧ್ಯತೆ ಇದೆ. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.
 
 
ವೃಷಭ
ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಸನ್ನಿವೇಶಗಳು ನಿಮ್ಮ ವಿಶ್ವಾಸವನ್ನು ವೃದ್ಧಿಸುತ್ತವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಪ್ರೇಮಾನುಬಂಧಗಳು ಬಲವಾಗುತ್ತವೆ. ರಾಜಕೀಯದಲ್ಲಿದ್ದರೆ ಮೊಕದ್ದಮೆ ಎದುರಿಸಬೇಕಾಗುವುದು.
 
ಮಿಥುನ
ಈ ವಾರ ಸಂತಸದ ಕ್ಷಣಗಳು ನಿಮ್ಮದಾಗುತ್ತವೆ. ಆರೋಗ್ಯ ಮತ್ತು ಮನೆ ವಾತಾವರಣದಲ್ಲಿ ಈಗ ಸಮಯ ನಿಮಗೆ ಸಾಧಕವಾಗಲಿದೆ.ಸರಕಾರಿ ನೌಕರರಿಗೆ ಸಂತಸದ ಸಮಯ. ಗೃಹ ನಿರ್ಮಾಣಕ್ಕೆ ಸೂಕ್ತ ಕಾಲವಾಗಿದೆ.
 
 
ಕರ್ಕಾಟಕ
ಪಾಲುದಾರಿಕೆಯಲ್ಲಿ ವ್ಯಾಪಾರಸ್ಥರಿಗೆ ಹಾನಿಯಾಗಬಹುದು.ವಾಹನ ಖರೀದಿ ಪ್ರಯತ್ನ ಕೈಗೂಡುತ್ತದೆ. ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಲಾಭ. ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಪೂರ್ಣಗೊಳ್ಳಲಿದೆ.
 
ಸಿಂಹ
ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ. ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಗಳಿಸುತ್ತೀರಿ. ಪ್ರೇಮಿಗಳಿಗೆ ಪ್ರವಾಸಯೋಗ, ನಿಮ್ಮ ವ್ಯವಹಾರಗಳಿಗೆ ಶುಭಯೋಗ, ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂಭವ, ಅವಿವಾಹಿತರಿಗೆ ವಿವಾಹಯೋಗ.
 
 
ಕನ್ಯಾ
ನಿಮ್ಮ ಹಣಕಾಸು ವಿಷಯಗಳಲ್ಲಿ ಮುಂದುವರಿಯುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ಪತ್ನಿಯ ಆರೋಗ್ಯದ ಬಗ್ಗೆ ಲಕ್ಷವಿರಲಿ. ನಿಮ್ಮ ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಓರ್ವ ಸ್ನೇಹಿತ ದುರುದ್ದೇಶಿತನಾಗಿರುವ ಸಾಧ್ಯತೆ ಇದೆ.
 
 
ತುಲಾ
ದೈವಿ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಏಜೆಂಟರು ಮತ್ತು ಬ್ರೋಕರ್‌ಗಳಿಗೆ ಹೆಚ್ಚಿನ ಲಾಭವಾಗದು. ಕೆಲ ಮಹತ್ವದ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಹಲವು ವರ್ಷಗಳ ನಿರೀಕ್ಷೆ ಸಫಲವಾಗಲಿದೆ.
 
 
ವೃಶ್ಚಿಕ
ಕೃಷಿ ಕ್ಷೇತ್ರದವರಿಗೆ ಉತ್ತಮ ಲಾಭವಾಗಲಿದೆ. ಹಣಕಾಸಿನ ತೊಂದರೆಯಿರುವುದಿಲ್ಲ.ಹಿರಿಯ ಅಧಿಕಾರಿಗಳಿಗೆ ಬಡ್ತಿ ಯೋಗ. ಕಲೆಗೆ ಸಂಬಂಧಿಸಿದವರಿಗೆ ಇದು ಶುಭ ಕಾಲ. ಆರೋಗ್ಯ ಸಂತುಲಿತವಾಗಿರುತ್ತದೆ.ಪ್ರೇಮ ವಿವಾಹ ಸಾಧ್ಯತೆ.
 
ಧನು
ಈ ವಾರ ಹಲವು ಶುಭ ಫಲಗಳನ್ನು ಪಡೆಯುವಿರಿ. ಕುಟುಂಬದಲ್ಲಿ ಮಂಗಳ ಕಾರ್ಯ.ನೆರೆಯವರಿಂದ ಆರ್ಥಿಕ ನೆರವು. ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಆಹಾರ ವಿಷಯಗಳಲ್ಲಿ ಜಾಗ್ರತೆಯಿಂದಿರಿ. ವಿವಾದಗಳಿಂದ ದೂರವಿರಲು ಪ್ರಯತ್ನಿಸಿ.
 
 
ಮಕರ
ಸಮಸ್ಯೆಯನ್ನು ವಿನೂತನ ರೀತಿಯಲ್ಲಿ ಪರಿಹರಿಸುವ ಕುರಿತ ನಿಮ್ಮ ಆಕಾಂಕ್ಷೆ ಮತ್ತು ಆತ್ಮವಿಶ್ವಾಸಕ್ಕೆ ಪೂರಕವಾಗಿ ಪ್ರತಿಕ್ರಿಯಿಸುತ್ತಾರೆ. ಹಿಂದುಳಿದಿದ್ದ ಎಲ್ಲ ಕಾರ್ಯಗಳಲ್ಲಿ ಆಸಕ್ತಿಯಿಂದ ಕಾರ್ಯನಿರ್ವಹಿಸುವಿರಿ, ಹಲವರು ಗೃಹ ನಿರ್ಮಾಣದಂತಹ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಗೃಹಸಂಬಂಧೀ ಹೊಣೆಗಾರಿಕೆಗಳ ಬೆಳವಣಿಗೆ ಬಗ್ಗೆ ಈ ವಾರದಲ್ಲಿ ನೀವು ಸಂತಸ ಹೊಂದುತ್ತೀರಿ.
 
ಕುಂಭ
ಹಣಕಾಸು ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕಾಗುತ್ತದೆ. ನೀವು ಪ್ರೀತಿಸಿದವರೊಂದಿಗೆ ನಿಮ್ಮ ವಿವಾಹವು ನಡೆಯುವುದು. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.ಕೆಲ ಮಂದಿ ನಿಮ್ಮನ್ನು ತಮ್ಮ ಪ್ರಯೋಜನಕ್ಕಾಗಿ ಉಪಯೋಗಿಸುತ್ತಾರೆ.
 
ಮೀನ
ವಿದ್ಯಾಸಂಸ್ಥೆಗಳ ನಿರ್ಮಾತೃರಿಗೆ ಹೊಸ ಆಲೋಚನೆಗಳು ಎದುರಾಗುತ್ತವೆ. ನಿಮ್ಮ ಏಳಿಗೆ ನೋಡಿ ಇತರರು ಹೊಟ್ಟೆ ಕಿಚ್ಚುಪಡುವ ಸಾಧ್ಯತೆಗಳಿವೆ. ನಿಮ್ಮ ಕಠಿಣ ಶ್ರಮವನ್ನು ಮುಂದುವರಿಸಿ. ಕೆಲಸದ ಒತ್ತಡ ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಪೂರ್ಣಗೊಳ್ಳಲಿದೆ.

LEAVE A REPLY

Please enter your comment!
Please enter your name here