ರಾಶಿ ಫಲ…

0
622

 
ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… (ಮೇ.17ರಿಂದ ಮೇ.23 ರವರೆಗೆ)
ಮೇಷ
ನಿಮ್ಮ ಏಕಾಗ್ರತಾ ಶಕ್ತಿಗಳ ಮೂಲಕ ಕಲಿಯುತ್ತೀರಿ. ಮಹಿಳೆಯರಿಗೆ ನೆಮ್ಮದಿಯ ಕಾಲವಾಗಿದೆ. ಅವಿವಾಹಿತರಿಗೆ ನೂತನ ವಿಚಾರಗಳು ಹಾನಿಯನ್ನು ತರಲಿವೆ. ನಿಮ್ಮ ಯತ್ನಗಳಿಗೆ ಅಡೆತಡೆ ತರಲು ಕೆಲವರು ಪ್ರಯತ್ನಿಸುತ್ತಾರೆ. ವ್ಯಾಪಾರಿಗಳಿಗೆ ಉತ್ತಮ ಲಾಭ. ಕಷ್ಟಗಳು ದೂರವಾಗಲಿವೆ.
 
ವೃಷಭ
ಅವಿವಾಹಿತರಿಗೆ ವಿವಾಹ ಯೋಗ ಉತ್ತಮವಾಗಿರುತ್ತದೆ. ಹಣದ ವಿಚಾರದಲ್ಲಿ ಜಾಗೃತರಾಗಿರಬೇಕು, ಎಲ್ಲರೊಂದಿಗೆ ನಿಷ್ಠುರ ಹೊಂದುತ್ತೀರಿ. ಪ್ರಯಾಣದಿಂದ ಲಾಭ, ಸಾಲ ಮರುಪಾವತಿಗೆ ಸೌಲಭ್ಯಗಳು, ಏಜೆನ್ಸಿಯವರಿಗೆ ಕಂಟ್ರಾಕ್ಟದಾರರಿಗೆ ಒಳ್ಳೆಯ ಅವಕಾಶ. ಸುಬ್ರಹ್ಮಣ್ಯ ಪ್ರಾರ್ಥನೆ.
 
 
 
ಮಿಥುನ
ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಕೂಡ ಪೂರ್ಣಗೊಳ್ಳಲಿದೆ. ಹಿರಿಯರ ಸಲಹೆ ಪಡೆಯಿರಿ. ನಿಮ್ಮ ಕಾರ್ಯಸ್ಥಳಗಳಲ್ಲಿ ಸಹೋದ್ಯೋಗಿಗಳೊಂದಿಗೆ ಜಗಳಕ್ಕಿಳಿಯಬೇಡಿ.
 
 
ಕರ್ಕಾಟಕ
ಕಚೇರಿಗಿಂತ ಮನೆಯಲ್ಲಿ ಕೆಲಸಗಳನ್ನು ಮುಗಿಸಲು ಹೆಚ್ಚು ಶ್ರಮ ಪಡುತ್ತೀರಿ. ದೇವರ ದರ್ಶನದಿಂದ ಮನಶ್ಶಾಂತಿ ಹೊಸ ಐಡಿಯಾಗಳು ದೊರೆಯುತ್ತವೆ. ಧನ ಲಾಭ ಹೊಸ ಹೊಸ ಐಡಿಯಾಗಳು ದೊರೆಯುತ್ತವೆ.ಸಹಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಉತ್ತಮ ಧನಲಾಭವಾಗಲಿದೆ.
 
ಸಿಂಹ
ನಿಮ್ಮ ಹಣಕಾಸು ವಿಷಯಗಳಲ್ಲಿ ಮುಂದುವರಿಯುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ವಿರೋಧಿಗಳಿಗೆ ಸೋಲು ಕಾದಿದೆ.ನೆಮ್ಮದಿ ದೊರೆಯಲಿದೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ರಾಜಕೀಯ ವ್ಯಕ್ತಿಗಳು ಬಹು ನಿರೀಕ್ಷಿತ ಅವಕಾಶವೊಂದನ್ನು ಪಡೆಯುತ್ತಾರೆ.ಪುಣ್ಯ ಕ್ಷೇತ್ರಗಳಿಗೆ ಭೇಟಿ.
 
ಕನ್ಯಾ
ದುಷ್ಟರಿಗೆ ಉಪಕಾರ ಮಾಡಲು ಹೋಗಬೇಡಿ ಇದರಿಂದ ನಿಮಗೆ ಅಪಾಯ ತರುವ ಸಾಧ್ಯತೆಗಳು ಹೆಚ್ಚು. ನೆಮ್ಮದಿ ದೊರೆಯಲಿದೆ. ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ಮನಸ್ಸಿನಲ್ಲಿರುವ ಹೊಸ ಯೋಜನೆಗಳ ಬಗ್ಗೆ ಈಗಾಗಲೇ ನೀವು ಉತ್ತೇಜಿತರಾಗಿದ್ದೀರಿ.ಸಂತೋಷದಿಂದ ಕಾಲ ಕಳೆಯಿರಿ.
 
ತುಲಾ
ಮಾನಸಿಕ ನೆಮ್ಮದಿ ದೊರೆಯಲಿದೆ. ನಿಮ್ಮ ಮನಸ್ಸಿನಲ್ಲಿ ಹಲವಾರು ವಿಚಾರಗಳು ಮುತ್ತಿಕೊಂಡಿರುವುದರಿಂದ ಇಂದಿನ ರಾತ್ರಿಯನ್ನು ಸಾಮಾಜಿಕ ಕೂಟವಾಗಿಸುವ ನಿಮ್ಮ ಯತ್ನಕ್ಕೆ ಅಡಚಣೆಯಾಗುತ್ತದೆ. ನಿಮಗೆ ಹಣಕಾಸಿನ ನೆರವು ದೊರೆಯಲಿದೆ.
 
ವೃಶ್ಚಿಕ
ನಿಮ್ಮ ಗುರಿಯನ್ನು ತಲುಪಲು ತಾಳ್ಮೆಯಿಂದ ಮತ್ತು ಸ್ಥಿರವಾಗಿ ಪ್ರಯತ್ನಿಸುತ್ತಿರಿ. ಮಹಿಳೆಯರಿಂದ ಆರ್ಥಿಕ ಸಹಾಯ. ನಿಮ್ಮ ಒಳ್ಳೆಯತನವನ್ನು ಕೆಲವರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಎದುರಾಗಲಿವೆ. ಪ್ರಯಾಣ ಸಾಧ್ಯತೆ ಹೆಚ್ಚು.ಅಧ್ಯಾತ್ಮಿಕ ವಿಷಯಗಳತ್ತ ಒಲವು.
ಧನು
ನಿಮಗೆ ಶುಭ ಯೋಗವಿರುವುದರಿಂದ ನಿಮ್ಮ ಕಾರ್ಯಗಳು ಸಫಲವಾಗಲಿವೆ. ಕೌಟುಂಬಿಕ ಶಾಂತಿ ಮತ್ತು ಉತ್ತಮ ಆರೋಗ್ಯ ನಿಮ್ಮನ್ನು ಉತ್ಸಾಹಿತರನ್ನಾಗಿ ಮಾಡುತ್ತದೆ. ಆರ್ಥಿಕ ಸಹಾಯ ದೊರೆಯಲಿದೆ. ದೂರಪ್ರಯಾಣದಲ್ಲಿ ಎಚ್ಚರವಿರಲಿ. ಗೆಳೆಯರಿಂದ ಕಷ್ಟದಲ್ಲಿ ನೆರವು.
 
ಮಕರ
ಖಾಸಗಿ ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಸುಖ ಶಾಂತಿ ನಿಮ್ಮದಾಗಲಿದೆ. ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
 
ಕುಂಭ
ವೈವಾಹಿಕ ಜೀವನವು ಇಂದು ಸಿಹಿ ಅನುಭವ ನೀಡುತ್ತದೆ. ಸ್ತ್ರೀಯೊಬ್ಬರಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ನೆಮ್ಮದಿಯ ಸಮಯವಾಗಿದೆ. ನಿಮಗೆ ಇ-ಮೇಲ್ ಅಥವಾ ಪತ್ರವೊಂದು ಬರಬಹುದು. ಸ್ತ್ರೀಯೊಬ್ಬರಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ.ಕೆಲಸದಲ್ಲಿ ಬಡ್ತಿ ದೊರೆಯಲಿದೆ.
 
ಮೀನ
ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತಿರಿ. ಮನಸ್ಸಿಗೆ ಹೆಚ್ಚಿನ ಶಾಂತಿ ದೊರೆಯಲಿದೆ. ಪ್ರಮುಖ ಕೆಲಸಗಳಲ್ಲಿ ಇಂದು ನೀವು ಯಶಸ್ವಿಯಾಗುತ್ತೀರಿ. ಹೊಸ ಜವಾಬ್ದಾರಿಗಳು ದೊರೆಯುವ ಸಾಧ್ಯತೆ ಇದೆ.ಖಾಸಗಿ ನೌಕರರಿಗೆ ಬಡ್ತಿ ಸಾಧ್ಯತೆ.

LEAVE A REPLY

Please enter your comment!
Please enter your name here