ರಾಶಿ ಫಲ…

0
446

 
ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… (ಏ.12ರಿಂದ ಏ.18ರವರೆಗೆ)
ಮೇಷ
ನಿಮ್ಮ ಯೋಚನೆಗಳನ್ನು ಚಾಣಾಕ್ಷತೆ ಮತ್ತು ವ್ಯವಹಾರ ನೈಪುಣ್ಯದಿಂದ ಮಾತಿಗಿಳಿಸಬೇಕು. ಸರಕು ಸಾಗಾಣಿಕೆದಾರರಿಗೆ, ಟ್ರಾವೇಲ್ಸ್ ಮಾಲೀಕರಿಗೆ ಉತ್ತಮ ಲಾಭವಾಗಲಿದೆ. ಬಂಧು ಮಿತ್ರರಿಂದ ವಿಮರ್ಶೆ ಟೀಕೆಗಳು ವ್ಯಾಪಕವಾಗುತ್ತವೆ. ಪಟ್ಟುಬಿಡದೇ ನೀವು ನಿರ್ಣಯಿಸಿದ ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ.
 
 
ವೃಷಭ
ರಾಜಕೀಯ ವಿಷಯಗಳಲ್ಲಿ ನಿಮಗೆ ಪೂರಕ ವಾತಾವರಣವಿರುತ್ತದೆ. ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಮಿತ್ರರು ಸಹಕರಿಸಲಿದ್ದಾರೆ. ಆರೋಗ್ಯವು ಚಿಂತೆಯ ವಿಷಯವಾಗದು. ನಿಮ್ಮ ಬಾಳಿಗೆ ಸಂತೋಷ ತುಂಬುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ.
 
 
ಮಿಥುನ
ಭರವಸೆಯ ವ್ಯವಹಾರ ಅವಕಾಶವೊಂದರಿಂದ ನೀವು ಉತ್ತೇಜಿತರಾಗುತ್ತೀರಿ. ಪತ್ರಿಕೆ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಮನೆಯಲ್ಲಿ ಸಡಗರದ ವಾತಾವರಣ ಅವಿವಾಹಿತರಿಗೆ ವಿವಾಹಯೋಗ, ಅಸಾಮಾನ್ಯ ವ್ಯಕ್ತಿಗಳು ನಿಮ್ಮಲ್ಲಿಗೆ ಬಂದು ಸಲಹೆ ಕೇಳುವರು.
 
 
ಕರ್ಕಾಟಕ
ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಎಲ್ಲ ಕಡೆಗಳಿಂದ ಹಣದ ಹರಿವು ಹೆಚ್ಚಾಗುವುದು. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ. ನೀವು ಕೆಲಸದಲ್ಲಿ ಉತ್ತುಂಗವನ್ನು ಸಾಧಿಸುತ್ತೀರಿ.ನೀವು ಉಹಿಸಿದ ಖರ್ಚುಗಳು ಇನ್ನಷ್ಟು ಹೆಚ್ಚಾಗಲಿವೆ. ಪ್ರಯಾಣಯೋಗವಿದೆ.
 
 
ಸಿಂಹ
ನಿಮ್ಮ ಹಳೆಯ ಸಮಸ್ಯೆಗಳು ಆಸ್ತಿ ಪಾಸ್ತಿ ವಿವಾದಗಳು ಮುಂದಕ್ಕೆ ಹಾಕುವುದು ಸೂಕ್ತ. ನಿಮ್ಮ ಕಾರ್ಯಗಳು ಅರ್ಧಕ್ಕೆ ಸ್ಥಗಿತಗೊಳ್ಳಲಿವೆ. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ
 
 
 
ಕನ್ಯಾ
ನಿಮ್ಮ ಬಯಕೆಗಳು ಈಡೇರಲಿವೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳು ಲಭಿಸುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಗಮನ ನೀಡಬೇಕಾಗುತ್ತದೆ. ನಿಮ್ಮ ಪರಿಸ್ಥಿತಿಗಳು ಉತ್ತಮಗೊಳ್ಳುತ್ತವೆ. ಪ್ರೇಮ ಸಂಬಂಧಗಳು ಅರಳುತ್ತವೆ. ಮನೆಯಲ್ಲಿ ಸಂತೋಷದ ವಾತಾವರಣವಿದೆ.
 
 
ತುಲಾ
ಇತರರ ಆಂತರಿಕ ವಿಷಯಗಳಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ. ಉದ್ಯೋಗಿಗಳು ತಮ್ಮ ಅವಸರದ ವರ್ತನೆಯಿಂದಾಗಿ ಹಿರಿಯ ಅಧಿಕಾರಿಗಳಿಂದ ತರಾಟೆಗೆ ಒಳಗಾಗುತ್ತೀರಿ. ಕೃಷಿ ಕ್ಷೇತ್ರದವರಿಗೆ ಲಾಭ. ಹಣಕಾಸು. ಅನಗತ್ಯ ವಸ್ತುಗಳ ಖರೀದಿ ಬೇಡ.
 
 
ವೃಶ್ಚಿಕ
ಹೊಸ ವಾಹನವೊಂದನ್ನು ಪಡೆಯಬಹುದು. ನಿಮ್ಮ ಮಹತ್ವಾಕಾಂಕ್ಷೆ ಈಡೇರಿಸುವಲ್ಲಿ ಕೊನೆಗೂ ಸಫಲರಾಗುತ್ತೀರಿ. ಭರವಸೆಯ ವ್ಯವಹಾರ ಅವಕಾಶವೊಂದರಿಂದ ನೀವು ಉತ್ತೇಜಿತಾಗುತ್ತೀರಿ. ಆದರೆ ನಿಮ್ಮ ಅದೃಷ್ಟವನ್ನು ಮುಂದೆತಳ್ಳಲು ಇದು ಒಳ್ಳೆಯ ವಾರವಲ್ಲ. ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳು ತಾನಾಗಿ ಪರಿಹಾರವಾಗಲಿವೆ.
 
 
ಧನು
ಬಂಧುಗಳ ಮಧ್ಯೆ ವಿರಸ ಹೆಚ್ಚಾಗುತ್ತದೆ. ರಾಜಕೀಯ ರಂಗದವರಿಗೆ ಅವಕಾಶಗಳು ಹೆಚ್ಚಾಗುತ್ತವೆ.ಪತ್ರಿಕೆ ಮತ್ತು ಖಾಸಗಿ ಸಂಸ್ಥೆ ಉದ್ಯೋಗಿಗಳಿಗೆ ತಮ್ಮ ಅಭಿಲಾಷೆ ಈಡೇರುವುದಿಲ್ಲ. ನೀವು ಕಾರ್ಯಕ್ರಮವನ್ನು ಸರಿಯಾಗಿ ರೂಪಿಸಬೇಕಾಗಿದೆ. ಸ್ತ್ರೀಯರ ವಿಷಯಗಳಲ್ಲಿ ಎಚ್ಚರಿಕೆಯಿಂದಿರುವುದು ಸೂಕ್ತ.
 
 
ಮಕರ
ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಎಲ್ಲ ಕಡೆಗಳಿಂದ ಹಣದ ಹರಿವು ಹೆಚ್ಚಾಗುವುದು. ಖರ್ಚುವೆಚ್ಚಗಳು ಹೆಚ್ಚಾಗುತ್ತವೆ.ನೀವು ಮಾಡಿದ ಕಾರ್ಯಗಳನ್ನು ಪೂರ್ಣಗೊಳಿಸಿ. ಮಿತ್ರರು ಕಷ್ಟ ಕಾಲದಲ್ಲಿ ನೆರವಾಗಲಿದ್ದಾರೆ.
 
 
ಕುಂಭ
ನೋವನ್ನುಂಟು ಮಾಡುವಂತಹ ಸನ್ನಿವೇಶವಿದ್ದರೂ, ಆನಂದವಾಗಿರಲು ಪ್ರಯತ್ನಿಸಿ. ಮನಸ್ಸಿಗೆ ಕಿರಿಕಿರಿ ಉಂಟು ಮಾಡುವ ಸನ್ನಿವೇಶ ಎದುರಾದೀತು. ವಾಹನ ಚಾಲನೆಯಲ್ಲಿ ಎಚ್ಚರಿಕೆ ತೋರುವುದು ಅಗತ್ಯವಾಗಿದೆ. ಶುಭ ವಾರ್ತೆ ಕೇಳುವಿರಿ. ಹಿರಿಯರನ್ನು ಗೌರವದಿಂದ ಕಾಣುವುದು ಅಗತ್ಯ.
 
 
ಮೀನ
ಹಣಕಾಸಿನ ವಿಷಯಗಳಲ್ಲಿ ಯಾರನ್ನು ನಂಬಲು ಹೋಗಬೇಡಿ. ನಿಮ್ಮ ಯೋಚನೆಗಳಿಗೆ ಒಂಟಿಯಾಗಿರಲು ದೈನಂದಿನ ಚಟುವಟಿಕೆಗಳಿಂದ ನೀವು ದೂರವಿರಬಹುದು. ಕೆಲವು ವಂಚಕರು ನಿಮ್ಮ ದಾಹವನ್ನು ಕದಿಯಬಹುದು.

LEAVE A REPLY

Please enter your comment!
Please enter your name here