ಜ್ಯೋತಿಷ್ಯವಾರ್ತೆ

ರಾಶಿ ಫಲ

ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… (ಒ.19ರಿಂದ ಒ.25ರವರೆಗೆ)
ಮೇಷ
ನಿಮ್ಮ ಯೋಜನೆಗಳಿಗೆ ನಿಮ್ಮ ಸಹೋದ್ಯೋಗಿಗಳ ಬೆಂಬಲ ಗಳಿಸುವುದು ಕಷ್ಟವಾಗಬಹುದು.ಸರಕು ಸಾಗಾಣಿಕೆದಾರರಿಗೆ, ಟ್ರಾವೇಲ್ಸ್ ಮಾಲೀಕರಿಗೆ ಉತ್ತಮ ಲಾಭವಾಗಲಿದೆ. ಹಣಕಾಸು ವಿಷಯಗಳಲ್ಲಿ ಮುಂಜಾಗ್ರತೆ ವಹಿಸಿ. ದುಂದುವೆಚ್ಚದ ಸಾಧ್ಯತೆಗಳಿವೆ. ಪಿತೃ ಸಮಸ್ಯೆ ಪರಿಹಾರದಲ್ಲಿ ಕೊಂಚ ವಿಳಂಬ.
ವೃಷಭ
ಅದು ಭವಿಷ್ಯದಲ್ಲಿ ನಿಮಗೆ ಯಶಸ್ಸು ಇದೆ. ವಿರೋಧಿಗಳ ಸಂಚು ವಿಫಲವಾಗಲಿದೆ. ಶುಭ ವಾರ್ತೆ ಕೇಳುವಿರಿ. ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳುವುದು. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಮಿಶ್ರ ಫಲ ಲಭಿಸುತ್ತದೆ.
 
ಮಿಥುನ
ಭವಿಷ್ಯದಲ್ಲಿ ಒಳ್ಳೆಯ ಯೋಜನೆಗಳಿಗೆ ಅವಕಾಶ ಕಂಡುಬರುವುದು. ಅವಿವಾಹಿತರಿಗೆ ವಿವಾಹ ಯೋಗ, ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿ. ಬಂಧು ಭಾಂಧವರಿಂದ ಕಷ್ಟದ ಕಾಲದಲ್ಲಿ ಸಹಾಯ, ನಿಮ್ಮ ಎಲ್ಲ ಕಾರ್ಯಗಳಲ್ಲಿ ಜಯ ದೊರೆಯುತ್ತದೆ.
 
ಕರ್ಕಾಟಕ
ಕೆಲವರಿಗೆ ಆರ್ಥಿಕ ಪರಿಸ್ಥಿತಿ ಹಾಗೂ ಸಾಮಾಜಿಕ ಸ್ಥಾನ ಮಾನಗಳಿಗೆ ಧಕ್ಕೆ ಉಂಟಾಗಬಹುದು. ಬಂಧು ಮಿತ್ರರೊಡನೆ ಕಲಹ, ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ದೈಹಿಕ ಅನಾರೋಗ್ಯ ಕಾಡುವುದು, ಅವಕಾಶಗಳ ಬಗ್ಗೆ ಗಮನವಿರಲಿ.
 
 
ಸಿಂಹ
ನಿಮ್ಮ ಧೈರ್ಯ ಸಾಹಸಗಳಿಂದ ಹೆಚ್ಚಿನ ಗೆಳೆಯರನ್ನು ಸಂಪಾದಿಸುತ್ತೀರಿ. ವಾಣಿಜ್ಯ ಕ್ಷೇತ್ರದವರಿಗೆ ಸಂಪೂರ್ಣ ತೃಪ್ತಿ ದೊರೆಯಲಿದೆ.ಮತ್ತು ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ. ಕೈಗೊಂಡ ಕಾರ್ಯಗಳಲ್ಲಿ ದಿಟ್ಟತನ ತೋರುವುದರಿಂದ ಯಶಸ್ಸು.
 
 
ಕನ್ಯಾ
ಭರವಸೆಯ ವ್ಯವಹಾರ ಅವಕಾಶವೊಂದರಿಂದ ನೀವು ಉತ್ತೇಜಿತರಾಗುತ್ತೀರಿ. ಭಾವಾವೇಶಗಳಿಗೆ ನಿಮ್ಮ ಮನಸ್ಸು ಮಣಿಯಲು ಅವಕಾಶ ನೀಡಬೇಡಿ. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.
 
ತುಲಾ
ನಿಮ್ಮ ಹಣಕಾಸು ವಿಷಯಗಳಲ್ಲಿ ಮುಂದುವರಿಯುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ನಿಮ್ಮ ಆಕ್ರಮಣಶೀಲ ಮನೋಭಾವದಿಂದ ಯಾರನ್ನೂ ಅವಮಾನಿಸಲು ಹೋಗದಿರಿ. ಸಿನೆಮಾ ರಂಗದಲ್ಲಿ ಮನ್ನಣೆ. ಹಿರಿಯರ ನಿರ್ಧಾರಗಳಿಂದ ನಿಮಗೆ ನೋವಾಗಲಿದೆ.
 
 
ವೃಶ್ಚಿಕ
ಶಾಸ್ತ್ರ, ಸಂಗೀತ ಕಲಾವಿದರಿಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ. ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಸ್ತ್ರೀಯರಿಂದ ದೂರವಿರಿ. ಇಲ್ಲವಾದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ.ವಿವಾದಗಳಿಂದ ದೂರವಿರಲು ಪ್ರಯತ್ನಿಸಿ.
 
 
ಧನು
ನಿಮ್ಮ ಸಾಮಾಜಿಕ ಸಂಪರ್ಕಗಳ ಮೂಲಕ ಒದಗುವ ವ್ಯವಹಾರ ಅವಕಾಶವೊಂದರ ಬಗ್ಗೆ ನೀವು ಸಂತಸ ಹೊಂದುವಿರಿ. ವಿರೋಧಿಗಳ ಹುನ್ನಾರ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯ ಲಭ್ಯವಾಗುವುದಿಲ್ಲ. ನಿಮ್ಮ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಬಾಳಿಗೆ ಸಂತೋಷ ತುಂಬುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ.
 
 
ಮಕರ
ವಿದ್ಯಾರ್ಥಿಗಳು ಕ್ರೀಡೆ, ಕ್ವಿಜ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುತ್ತಾರೆ. ನಿಮ್ಮ ಕೆಲಸಗಳು ನಿಧಾನವಾಗಿ ಸಾಗಿದರೂ ಸಫಲವಾಗಲಿವೆ. ವಿದೇಶಿ ಪ್ರವಾಸ ಯೋಗವಿದೆ. ಮನೆಯಲ್ಲಿ ಸಂತಸದ ವಾತಾವರಣ.
 
 
ಕುಂಭ
ಪ್ರಯಾಣದಿಂದ ಅನುಕೂಲ. ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ ದೊರೆಯಲಿದೆ. ಕೃಷಿ ಮತ್ತು ತೋಟಗಾರಿಕೆಯಲ್ಲಿ ಲಾಭ. ಮನೆಯಲ್ಲಿ ಹಿರಿಯರನ್ನು ಗೌರವಿಸಿ. ನಿಮ್ಮ ವಿಚಾರಗಳು ನಡೆಗಳು ಗುಪ್ತವಾಗಿ ಇಡುವುದು ಸೂಕ್ತ. ಕೌಟಂಬಿಕ ಕಲಹಗಳಾಗುವ ಸಾಧ್ಯತೆಗಳಿವೆ.
 
 
ಮೀನ
ವ್ಯಾಪಾರೋದ್ಯಮ ಭೆಳವಣಿಗೆಗಾಗಿ ಶ್ರಮಿಸುತ್ತೀರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಮನೆಯಲ್ಲಿ ಕೆಲವು ಕೆಲಸಗಳ ನಿಮಿತ್ತ ಮನೆಯಲ್ಲಿರಬೇಕಾದ ಸಂದರ್ಭ. ಅಸಾಮಾನ್ಯ ವ್ಯಕ್ತಿಗಳು ನಿಮ್ಮಲ್ಲಿಗೆ ಬಂದು ಸಲಹೆ ಕೇಳುವರು. ದೇವರ ದರ್ಶನದಿಂದ ಮನಶ್ಶಾಂತಿ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here