ರಾಶಿ ಫಲ…

0
379

ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… ( ಆಗಸ್ಟ್ 23 ರಿಂದ ಆಗಸ್ಟ್ 30 ರವರೆಗೆ)
ಮೇಷ
ಈ ವಾರದ ಆರಂಭದಲ್ಲಿ ಹಿನ್ನೆಡೆಯಾಗುವುದು .ಯಾವುದೇ ವಿಷಯದಲ್ಲಿ ಆಲೋಚಿಸಿ ನಿರ್ಣಯ ತೆಗೆದುಕೊಳ್ಳಿ ಖರ್ಚು ಹೆಚ್ಚಾಗಬಹುದು. ನಿಮ್ಮ ಬಾಳಿಗೆ ಸಂತೋಷ ತುಂಬುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ.
 
 
ವೃಷಭ
ನಿಮ್ಮ ಸ್ವಂತ ಪ್ರಯತ್ನದಿಂದ ಆಸ್ತಿ ಪಾಸ್ತಿ ಸಂಪಾದನೆ ಮಾಡುವಿರಿ. ನಿಮ್ಮ ಯೋಜನೆಗಳನ್ನು ಇತರರು ಸ್ವೀಕರಿಸುವಂತೆ ಮಾಡುವ ನಿಮ್ಮ ಸಾಮರ್ಥ್ಯ ಅದ್ಭುತ. ಇತರರೊಂದಿಗೆ ಸ್ನೇಹ ಮತ್ತು ಒಳ್ಳೆಯ ಕ್ಷಣಗಳನ್ನು ಹಂಚಿಕೊಳ್ಳಿ ಹಣದ ಅವ್ಯವಹಾರದಲ್ಲಿ ಭಾಗಿಯಾಗಬೇಡಿ.
 
 
ಮಿಥುನ
ಮನೆಯಲ್ಲಿ ಶಾಂತಿಯ ವಾತಾವರಣ. ನಿಮ್ಮ ಉನ್ನತಾಧಿಕಾರಿ ಅಥವಾ ಅಧಿಕಾರಿಗಳಿಂದ ಬೆಂಬಲ ಬರುತ್ತದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ. ಇಂದು ವಾಗ್ವಾದಕ್ಕಿಳಿಯಬೇಡಿ.ಕಚೇರಿಗಳಲ್ಲಿ ಸಹದ್ಯೋಗಿಗಳಿಂದ ಕಿರುಕುಳ.
 
 
ಕರ್ಕಾಟಕ
ನಿಮ್ಮ ಇಷ್ಟದ ಕಾರ್ಯಗಳು ಉತ್ತಮವಾಗಿ ಸಾಗಲಿವೆ. ಮಹಿಳೆಯರಿಂದ ದೂರವಿರಿ. ಕೌಟಂಬಿಕ ನೆಮ್ಮದಿ ದೊರೆಯಲಿದೆ. ದೂರಪ್ರಯಾಣದಲ್ಲಿ ಎಚ್ಚರವಿರಲಿ. ಮನೆಗೆ ಬಂಧುಗಳು ಆಗಮಿಸುವುದರಿಂದ ಉತ್ತಮ ವಾತಾವರಣ ಕಂಡುಬರಲಿದೆ.
 
ಸಿಂಹ
ಸಂಸಾರದಲ್ಲಿ ವಿರಸ ಉಂಟಾಗುತ್ತದೆ. ಕೆಲವರಿಗೆ ಆರ್ಥಿಕ ಪರಿಸ್ಥಿತಿ ಹಾಗೂ ಸಾಮಾಜಿಕ ಸ್ಥಾನ ಮಾನಗಳಿಗೆ ಧಕ್ಕೆ ಉಂಟಾಗಬಹುದು. ವ್ಯಾಪಾರವನ್ನು ಸಂಭಂಧಗಳೊಡನೆ ಸೇರಿಸುವುದರಿಂದ ನೀವು ನಷ್ಟ ಅನುಭವಿಸಲಿದ್ದೀರಿ.
 
 
ಕನ್ಯಾ
ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಆರ್ಥಿಕ ಒತ್ತಡಗಳು ಎದುರಾಗುವ ಸಾಧ್ಯತೆಗಳಿರುವುದರಿಂದ ಅನಗತ್ಯ ವೆಚ್ಚದಲ್ಲಿ ಕಡಿಮೆ ಮಾಡುವುದು ಸೂಕ್ತ. ಕೃಷಿ ಕ್ಷೇತ್ರದವರಿಗೆ ಉತ್ತಮ ಧನಲಾಭ. ಅವಿವಾಹಿತರಿಗೆ ವಿವಾಹ ಯೋಗವಿದೆ.
 
ತುಲಾ
ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ಪ್ರೇಮ ಮತ್ತು ಪ್ರಣಯ ಸಲ್ಲಾಪದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.ಸಂತಸದ ಕ್ಷಣಗಳು ಎದುರಾಗಲಿವೆ.
 
 
ವೃಶ್ಚಿಕ
ಕ್ರೀಡಾಪಟುಗಳಿಗೆ ಪ್ರತಿಭೆಯನ್ನು ಮೆರೆಯಲು ಸಕಾಲವಾಗಿದೆ. ನಿಮ್ಮಿಂದ ದೂರವಾದವರು ಹತ್ತಿರವಾಗುತ್ತಾರೆ. ಪ್ರತಿಯೊಂದು ವಿಷಯದಲ್ಲಿ ಅವಸರ ಸಲ್ಲದು. ಗುರುಗಳನ್ನು ಗೌರವಿಸಿದಲ್ಲಿ ನಿಮಗೆ ಸೂಕ್ತ ಲಾಭ. ಕೃಷಿ ಉದ್ಯೋಗಿಗಳಿಗೆ ಉತ್ತಮ ಲಾಭ. ಸರಕಾರದ ಯೋಜನೆಯ ಲಾಭ ಪಡೆಯುವಿರಿ.
 
 
ಧನು
ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ. ಹೊಸ ಯೋಜನೆಗಳು ಮತ್ತು ಯೋಚನೆಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಮಾನಸಿಕ ನೆಮ್ಮದಿ ದೊರೆಯಲಿದೆ. ವೈವಾಹಿಕ ಜೀವನವು ಸಿಹಿ ಅನುಭವ ನೀಡುತ್ತದೆ.
 
ಮಕರ
ಮಿತ್ರರ ಸಹಕಾರದಿಂದ ವ್ಯಾಪಾರದಲ್ಲಿ ಪ್ರಗತಿ, ಸಜ್ಜನರ ಸಹವಾಸ ಲಭಿಸುತ್ತದೆ. ಎಲ್ಲರಿಂದಲೂ ಆದರ ಗೌರವಗಳನ್ನು ಪಡೆಯುತ್ತಾರೆ. ಸಂತಾನ ಪ್ರಾಪ್ತಿ. ಮನೆಯಲ್ಲಿನ ಅಸಹಕಾರದಿಂದ ಮಾನಸಿಕ ಅಶಾಂತಿ. ಮನರಂಜನೆಗಾಗಿ ಯೋಚಿಸುವ ಸಮಯ ಇದು. ಆರೋಗ್ಯ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ಬಡ್ಡಿ ಅವಕಾಶ.
 
 
ಕುಂಭ
ಬಂಧು ಮಿತ್ರರೊಡನೆ ಜಾಗೃತೆಯಿಂದ ಮಾತನಾಡಬೇಕಾಗುತ್ತದೆ. ಇಲ್ಲವಾದಲ್ಲಿ ಮನಸ್ಥಾಪವಾಗುವ ಸಾಧ್ಯತೆಗಳು ಎದುರಾಗುತ್ತವೆ. ಪ್ರೇಮ ವ್ಯವಹಾರಗಳಲ್ಲಿ ಧನಾತ್ಮಕ ಪ್ರತಿಕ್ರಿಯೆ ಕಂಡುಬರಲಿದೆ. ಹಿರಿಯ ಅಧಿಕಾರಿಗಳಿಂದ ಕಿರುಕುಳ.
 
 
ಮೀನ
ಬಡ್ತಿ ದೊರೆಯುವ ಸಂಭವವಿದೆ. ಕೆಲವರು ನಿಮ್ಮಿಂದ ಧನಸಹಾಯವನ್ನು ಬಯಸುತ್ತಾರೆ. ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ.ಮಹಿಳೆಯರು ತಮ್ಮ ವಾಕ್ಚಾತುರ್ಯದಿಂದ ಇತರರ ಗಮನ ಸೆಳೆಯುತ್ತಾರೆ.

LEAVE A REPLY

Please enter your comment!
Please enter your name here