ರಾಶಿ ಫಲ…

0
316

ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… ( ಆಗಸ್ಟ್ 17 ರಿಂದ ಆಗಸ್ಟ್ 22 ರವರೆಗೆ)
ಮೇಷ
ನಿಮ್ಮ ಕ್ರಿಯಾಶೀಲ ಯೋಚನೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಭವಿಷ್ಯದಲ್ಲಿ ಯಶಸ್ಸು. ನಿಮ್ಮ ಬಯಕೆಗಳು ಈಡೇರಲಿವೆ. ಹಣವು ಎಲ್ಲ ಕಡೆಗಳಿಂದ ಹರಿದುಬರಲಿದೆ. ವಿಶ್ವಾಸದ ಹುಮ್ಮಸ್ಸಿನಲ್ಲಿರುತ್ತೀರಿ ಹಾಗೂ ಸ್ಪರ್ಧಾತ್ಮಕ ಪ್ರಯತ್ನಗಳಲ್ಲಿ ಯಶಸ್ಸನ್ನು ಕಾಣುವಿರಿ.ನಿಮ್ಮ ಸ್ವಂತ ಪ್ರಯತ್ನದಿಂದ ಆಸ್ತಿ ಪಾಸ್ತಿ ಸಂಪಾದನೆ ಮಾಡುವಿರಿ.
 
 
ವೃಷಭ
ಆರೋಗ್ಯದ ಬಗ್ಗೆ ಗಮನ ಹರಿಸಿ. ಅನಿರೀಕ್ಷಿತ ಧನಲಾಭ ದೊರೆಯುವ ಸಾಧ್ಯತೆ ಇದೆ . ಆರೋಗ್ಯ ಸಂತುಲಿತವಾಗಿರುತ್ತದೆ. ನಿಮಗೆ ಒಳ್ಳೆಯ ಸುದ್ದಿ ಕಾದಿದೆ. ಪತ್ನಿಯಿಂದ ಹೆಚ್ಚಿನ ಸಹಕಾರ ದೊರೆಯಲಿದೆ.
ಮಿಥುನ
ಯುವಕರು ಪ್ರೇಮ ವ್ಯವಹಾರದಿಂದ ದೂರ ಇರುವುದು ಒಳಿತು. ಕುಟುಂಬದಲ್ಲಿ ಪರಸ್ಪರ ಅಸಹಕಾರ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಗುರು ಹಿರಿಯರಿಂದ ಗೌರವ ದೊರೆಯಲಿದೆ.
ಕರ್ಕಾಟಕ
ಸದಾ ಇತರರನ್ನು ಹಳಿಯಬೇಡಿ. ನಿಮ್ಮ ಎಳಿಗೆಯತ್ತ ಗಮನಹರಿಸಿ. ನೀವು ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ನಿಮಗೆ ಗೌರವ ಪ್ರಾಪ್ತಿಯಾಗಲಿದೆ. ವಿದೇಶಿ ಪ್ರವಾಸ ಯೋಗವಿದೆ. ಮಾನಸಿಕ ನೆಮ್ಮದಿ ದೊರೆಯಲಿದೆ.
ಸಿಂಹ
ವಾಗ್ವಾದದಿಂದ ದೂರವಿರಿ. ಹಣಕಾಸಿನ ಬಗ್ಗೆ ಎಚ್ಚರವಿರಲಿ. ಮುಖ್ಯವಾದ ಕಾರ್ಯಗಳಲ್ಲಿ ಏಕಾಗ್ರತೆ ವಹಿಸದಿದ್ದಲ್ಲಿ ಇಕ್ಕಟ್ಟಿಗೆ ಸಿಲುಕುತ್ತೀರಿ. ಖರ್ಚುಗಳು ಹೆಚ್ಚಾದರು ಮಾನಸಿಕ ಶಾಂತಿ ದೊರೆಯುತ್ತದೆ. ನಿಮ್ಮ ಕಾರ್ಯಗಳಲ್ಲಿ ಜಯ ಲಭಿಸಲಿದೆ.
ಕನ್ಯಾ
ಮಹಿಳೆಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ. ವಿದೇಶಿ ವಸ್ತುಗಳ ಖರೀದಿಗೆ ಸಿದ್ದತೆ. ದೂರದ ಸಂಬಂಧಿಗಳಿಂದ ನೆರವು. ಖರೀದಿ ಸಂತಸದಾಯಕವಾಗಿರುತ್ತದೆ.
 
 
ತುಲಾ
ನಿಮ್ಮ ಯೋಚನೆಗಳ ಬಗ್ಗೆ ಇತರರಿಗೆ ತಿಳಿಸದೇ ಮುಚ್ಚಿಡುವಂತಹ ಕೆಲಸ ಮಾಡಬೇಡಿ. ವಿರೋಧಿಗಳ ಹುನ್ನಾರ ಸಫಲವಾಗುವುದಿಲ್ಲ. ನಿಮ್ಮ ಸೃಜನಾತ್ಮಕತೆ ಮತ್ತು ಉತ್ಸಾಹಗಳ ಅಗತ್ಯವಿರುವ ಕೆಲಸಗಳಲ್ಲಿ ಯಶಸ್ಸು ಗಳಿಸುತ್ತೀರಿ. ನಿಮ್ಮ ಪ್ರಯತ್ನ ಸಫಲವಾಗಲಿದೆ.
ವೃಶ್ಚಿಕ
ನಿಮ್ಮ ಸುತ್ತಲ ವಾತಾವರಣವು ಸಂತಸದಾಯಕವಾಗಿರುತ್ತದೆ. ಕುಟುಂಬದವರ ನೆರವು ಪ್ರಾಪ್ತವಾಗುತ್ತದೆ. ಹೊಸ ವಾಹನ ಖರೀದಿಸಲು ನೀವು ಯೋಚಿಸಬಹುದು. ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸಿ.
ಧನು
ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇತರರು ನಿಮ್ಮ ಸಮಯವನ್ನು ಯಾಚಿಸುತ್ತಿರುವುದರಿಂದ ನಿಮ್ಮ ಸ್ವಂತ ಇಚ್ಛೆಗಳಿಗಾಗಿ ಕಾಯಬೇಕಾಗಬಹುದು. ಮನೆಯಲ್ಲಿ ಸಂಭ್ರಮದ ವಾತಾವರಣ. ನಿಮ್ಮ ಅಗತ್ಯ ಮತ್ತು ಇಚ್ಛೆಗಳನ್ನು ವ್ಯಕ್ತಪಡಿಸಲು ಹಾಗೂ ನಿಮಗೆ ನಿಜವಾಗಿಯೂ ಏನು ಬೇಕು ಎಂಬುದನ್ನು ಇತರರಿಗೆ ತಿಳಿಸಲು ಇದು ಸೂಕ್ತ ಸಮಯ. ನೆರೆಹೊರೆಯವರಿಂದ ನೆರವು.
ಮಕರ
ದಿನ ಆರಂಭವಾಗುತ್ತಿರುವಂತೆಯೇ ನಿಮ್ಮ ತೀಕ್ಷ್ಣ ಬುದ್ದಿವಂತಿಕೆ ಬೆಳಕಿಗೆ ಬರುತ್ತದೆ. ಆದಾಗ್ಯೂ, ಮೀನ ಮೇಷ ಎಣಿಸುವ ಗೊಂದಲವನ್ನು ತಪ್ಪಿಸಿ. ಹಿರಿಯರ ಆರೋಗ್ಯದ ಕಾಳಜಿ ವಹಿಸಿ. ಒಂದು ಪ್ರಣಯದ ಸಂಜೆ ನಿಮಗೆ ಉತ್ಸಾಹ ಮತ್ತು ಆನಂದವನ್ನು ನೀಡಲಿದೆ. ನಿಗದಿತ ಅವಧಿಯಲ್ಲಿ ಕಾರ್ಯಗಳನ್ನು ಪೂರ್ಣಗೊಳಿಸಿ.
ಕುಂಭ
ಈ ವಾರ ಆಶಾಜನಕವಾಗಿದೆ. ರಾಜಕಾರಣಿಗಳಿಗೆ ಉತ್ತಮ ಯೋಗವಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ. ಅನಿರೀಕ್ಷಿತ ಧನಲಾಭ ದೊರೆಯುವ ಸಾಧ್ಯತೆ ಇದೆ. ವಿವಾದಗಳಲ್ಲಿ ತಲೆಹಾಕಬೇಡಿ, ಅನಗತ್ಯ ತೊಂದರೆ ಎದುರಾಗಲಿವೆ.
ಮೀನ
ದೈಹಿಕ ಅನಾರೋಗ್ಯ ಕಾಡುವುದು,. ಸರಕಾರಿ ನೌಕರರಿಗೆ ಉತ್ತಮ ಧನಲಾಭ. ಮಹಿಳೆಯರು ತಮ್ಮ ವಾಕ್ಚಾತುರ್ಯದಿಂದ ಇತರರ ಗಮನ ಸೆಳೆಯುತ್ತಾರೆ. ಒಂದು ಪ್ರಣಯದ ಸಂಜೆ ಉತ್ಸಾಹ ಮತ್ತು ಆನಂದವನ್ನು ನೀಡಲಿದೆ. ಏಜೆನ್ಸಿಯವರಿಗೆ ಕಂಟ್ರಾಕ್ಟದಾರರಿಗೆ ಒಳ್ಳೆಯ ಅವಕಾಶ. ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಕಾರ್ಯ ಸಿದ್ದಿ.

LEAVE A REPLY

Please enter your comment!
Please enter your name here