ರಾಶಿ ಫಲ…

0
441

 
ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… ( ಆಗಸ್ಟ್ 10 ರಿಂದ ಆಗಸ್ಟ್ 16 ರವರೆಗೆ)
ಮೇಷ
ಹಲವಾರು ಕಡೆಗಳಿಂದ ಹಣವು ಲಭಿಸುತ್ತದೆ. ಇತ್ಯಾದಿ ಶುಭಫಲಗಳನ್ನು ಅನುಭವಿಸುವಿರಿ . ಸ್ನೇಹಿತರ ಸಹವಾಸದಿಂದ ವಿನೋದದಲ್ಲಿ ಪಾಲ್ಗೊಳ್ಳುತ್ತೀರಿ. ಪ್ರವಾಸ ಯೋಗವಿದೆ.
 
 
ವೃಷಭ
ಇತರರೊಂದಿಗೆ ಸ್ನೇಹ ಮತ್ತು ಒಳ್ಳೆಯ ಕ್ಷಣಗಳನ್ನು ಹಂಚಿಕೊಳ್ಳಬಹುದಾಗಿದೆ. ನೆರೆಹೊರೆಯವರನ್ನು ನಂಬಲು ಹೋಗಬೇಡಿ. ನಿಮ್ಮ ಬಾಳಿಗೆ ಸಂತೋಷ ತುಂಬುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ. ನಿಮ್ಮ ಮಹತ್ವಾಕಾಂಕ್ಷೆ ಈಡೇರಿಸುವಲ್ಲಿ ಕೊನೆಗೂ ಸಫಲರಾಗುತ್ತೀರಿ.ರಾಜಕಾರಣಕ್ಕೆ ಪ್ರವೇಶಿಸಲು ಸೂಕ್ತ ಸಮಯ.
 
 
ಮಿಥುನ
ಭವಿಷ್ಯದಲ್ಲಿ ಒಳ್ಳೆಯ ಯೋಜನೆಗಳಿಗೆ ಅವಕಾಶ ಕಂಡುಬರುವುದು. ಅವಿವಾಹಿತರಿಗೆ ವಿವಾಹ ಯೋಗ, ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿ. ನಿಮ್ಮ ಎಲ್ಲ ಕಾರ್ಯಗಳಲ್ಲಿ ಜಯ ದೊರೆಯುತ್ತದೆ. ನಿಮ್ಮ ಬಯಕೆಗಳು ಈಡೇರಲಿವೆ. ಹಣವು ಎಲ್ಲ ಕಡೆಗಳಿಂದ ಹರಿದುಬರಲಿದೆ.
 
 
ಕರ್ಕಾಟಕ
ಕೆಲವರಿಗೆ ಆರ್ಥಿಕ ಪರಿಸ್ಥಿತಿ ಹಾಗೂ ಸಾಮಾಜಿಕ ಸ್ಥಾನ ಮಾನಗಳಿಗೆ ಧಕ್ಕೆ ಉಂಟಾಗಬಹುದು. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಕೆಲವರಿಗೆ ಆರ್ಥಿಕ ಪರಿಸ್ಥಿತಿ ಹಾಗೂ ಸಾಮಾಜಿಕ ಸ್ಥಾನ ಮಾನಗಳಿಗೆ ಧಕ್ಕೆ ಉಂಟಾಗಬಹುದು. ಅವಕಾಶಗಳ ಬಗ್ಗೆ ಗಮನವಿರಲಿ.
 
 
ಸಿಂಹ
ನಿಮ್ಮ ಧೈರ್ಯ ಸಾಹಸಗಳಿಂದ ಹೆಚ್ಚಿನ ಗೆಳೆಯರನ್ನು ಸಂಪಾದಿಸುತ್ತೀರಿ. ವಾಣಿಜ್ಯ ಕ್ಷೇತ್ರದವರಿಗೆ ಸಂಪೂರ್ಣ ತೃಪ್ತಿ ದೊರೆಯಲಿದೆ. ಹೊಸ ಸವಾಲುಗಳನ್ನು ಎದುರಿಸುತ್ತೀರಿ. ಕೈಗೊಂಡ ಕಾರ್ಯಗಳಲ್ಲಿ ದಿಟ್ಟತನ ತೋರುವುದರಿಂದ ಯಶಸ್ಸು.
 
 
ಕನ್ಯಾ
ವಿರೋಧಿಗಳ ಸಂಚು ವಿಫಲವಾಗಲಿದೆ. ಶುಭ ವಾರ್ತೆ ಕೇಳುವಿರಿ. ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳುವುದು. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಮಿಶ್ರ ಫಲ ಲಭಿಸುತ್ತದೆ. ಸಂತಸದ ಕ್ಷಣಗಳು ನಿಮ್ಮನ್ನು ಉಲ್ಲಸಿತರನ್ನಾಗಿ ಮಾಡಲಿವೆ.
 
 
ತುಲಾ
ನಿಮ್ಮ ಹಣಕಾಸು ವಿಷಯಗಳಲ್ಲಿ ಮುಂದುವರಿಯುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ಸಿನೆಮಾ ರಂಗದಲ್ಲಿ ಮನ್ನಣೆ. ಹಿರಿಯರ ನಿರ್ಧಾರಗಳಿಂದ ನಿಮಗೆ ನೋವಾಗಲಿದೆ. ವಾಹನಚಾಲಕರಿಗೆ ಟೀಕೆಗಳು ತಪ್ಪವು. ಹಣಕಾಸಿನ ವ್ಯವಹಾರ ಉತ್ತಮವಾಗಿರಲಿದೆ.
 
 
ವೃಶ್ಚಿಕ
ಶಾಸ್ತ್ರ, ಸಂಗೀತ ಕಲಾವಿದರಿಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ. ವಿದ್ಯಾರ್ಥಿಗಳು ಅವಸರದಲ್ಲಿ ತೆಗೆದುಕೊಂಡ ನಿರ್ಣಯಗಳು ಸಮಸ್ಯೆಗಳನ್ನು ತರಲಿವೆ. ಹಣವನ್ನು ಮನಬಂದಂತೆ ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ.
 
 
ಧನು
ನಿಮ್ಮ ಸಾಮಾಜಿಕ ಸಂಪರ್ಕಗಳ ಮೂಲಕ ಒದಗುವ ವ್ಯವಹಾರ ಅವಕಾಶವೊಂದರ ಬಗ್ಗೆ ಇಂದು ನೀವು ಸಂತಸ ಹೊಂದುವಿರಿ. ವಿರೋಧಿಗಳ ಹುನ್ನಾರ. ನಿಮ್ಮ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗುವಿರಿ. ವೈವಾಹಿಕ ಮಾತುಕತೆಗಳು ಫಲಪ್ರದವಾಗಲಿವೆ.ನಿಮ್ಮ ಬಾಳಿಗೆ ಸಂತೋಷ ತುಂಬುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ.
 
 
ಮಕರ
ನಿಮ್ಮ ಕೆಲಸಗಳು ನಿಧಾನವಾಗಿ ಸಾಗಿದರೂ ಸಫಲವಾಗಲಿವೆ. ವಿದೇಶಿ ಪ್ರವಾಸ ಯೋಗವಿದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಆತ್ಮವಿಶ್ವಾಸದೊಂದಿಗೆ ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದೀರಿ. ಮನೆಯಲ್ಲಿ ಸಂತಸದ ವಾತಾವರಣ.
 
 
ಕುಂಭ
ಪ್ರಯಾಣದಿಂದ ಅನುಕೂಲ. ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ ದೊರೆಯಲಿದೆ. ಮನೆಯಲ್ಲಿ ಹಿರಿಯರನ್ನು ಗೌರವಿಸಿ. ನಿಮ್ಮ ವಿಚಾರಗಳು ನಡೆಗಳು ಗುಪ್ತವಾಗಿ ಇಡುವುದು ಸೂಕ್ತ. ಕೌಟಂಬಿಕ ಕಲಹಗಳಾಗುವ ಸಾಧ್ಯತೆಗಳಿವೆ.
 
 
ಮೀನ
ವ್ಯಾಪಾರೋದ್ಯಮ ಭೆಳವಣಿಗೆಗಾಗಿ ಶ್ರಮಿಸುತ್ತೀರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಅಸಾಮಾನ್ಯ ವ್ಯಕ್ತಿಗಳು ನಿಮ್ಮಲ್ಲಿಗೆ ಬಂದು ಸಲಹೆ ಕೇಳುವರು. ದೇವರ ದರ್ಶನದಿಂದ ಮನಶಾಂತಿ ಇರುತ್ತದೆ.

LEAVE A REPLY

Please enter your comment!
Please enter your name here