ರಾಶಿ ಫಲ

0
350

ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… ( ಜುಲೈ26 ರಿಂದ ಆಗಸ್ಟ್ 1 ರವರೆಗೆ)
ಮೇಷ
ದೈವ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವದಿಲ್ಲ. ವಿರೋಧಿಗಳ ಬಗ್ಗೆ ಎಚ್ಚರವಿರಲಿ. ದೂರಪ್ರಯಾಣದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ನಿರೀಕ್ಷೆಗಿಂತ ಹಣದ ವೆಚ್ಚದಲ್ಲಿ ಏರಿಕೆಯಾಗಲಿದೆ.
 
 
ವೃಷಭ
ಈ ವಾರ ಎಲ್ಲ ಕಡೆಗಳಿಂದಲೂ ನಿಮಗೆ ಅನುಕೂಲವಾಗಲಿದೆ. ವ್ಯಾಪಾರಿಗಳಿಗೆ ಲಾಭದಲ್ಲಿ ಹೆಚ್ಚಳ. ಅಪರಿಚಿತರಿಂದ ದೂರವಿರುವುದು ಉಚಿತ. ದೈವಕಾರ್ಯಗಳಲ್ಲಿ ಆಸಕ್ತಿ.ಹಣಕಾಸಿನ ನೆರವು ದೊರೆಯಲಿದೆ.
 
 
 
ಮಿಥುನ
ವ್ಯಾಪಾರಿಗಳಿಗೆ ಉತ್ತಮ ಧನಲಾಭವಾಗಲಿದೆ. ಹಿರಿಯರಿಂದ ತೊಂದರೆಗಳು ಎದುರಾಗಲಿವೆ. ಸ್ವಲ್ಪ ಪ್ರಣಯಾಸಕ್ತಿ ಮತ್ತು ಒಲವಿನಿಂದ ನಿಮ್ಮನ್ನು ಉಲ್ಲಸಿತವಾಗಿಸಬಹುದು. ಕೌಟಂಬಿಕ ನೆಮ್ಮದಿಗೆ ಪ್ರಯತ್ನಿಸಿ.
 
 
ಕರ್ಕಾಟಕ
ಸುಖದಾಯಕ ಕೆಲಸಗಳನ್ನು ಮಾಡುವುದರಲ್ಲಿ ನೀವು ನಿರತರಾಗಲಿದ್ದೀರಿ. ಮನರಂಜನೆಗಾಗಿ ಯೋಚಿಸುವ ಸಮಯ ಇದು. ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ಸಂಗೀತ ಮತ್ತು ಸಾಹಿತ್ಯ ಸಭೆಗಳಲ್ಲಿ ಭಾಗವಹಿಸುತ್ತೀರಿ.ದೈನಂದಿನ ಕಾರ್ಯಗಳಲ್ಲಿ ಬದಲಾವಣೆ.
 
 
ಸಿಂಹ
ವಿರೋಧಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಆರೋಗ್ಯದಿಂದ ಸಮಸ್ಯೆಗಳುಂಟಾಗಬಹುದು. ನಿಮ್ಮ ಮಹತ್ವಾಕಾಂಕ್ಷೆ ಈಡೇರಿಸುವಲ್ಲಿ ಕೊನೆಗೂ ಸಫಲರಾಗುತ್ತೀರಿ. ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಪ್ರಗತಿ ಸಾಧಿಸುತ್ತೀರಿ.ಗೆಳೆಯರಿಗೆ ಹಣಕಾಸಿನ ನೆರುವು ನೀಡುವುದು ಸಲ್ಲದು.
 
ಕನ್ಯಾ
ನಿಮ್ಮ ಪ್ರಿಯತಮೆಗಾಗಿ ಹಾಗೂ ನಿಮ್ಮ ಮಕ್ಕಳಿಗಾಗಿ ಹೆಚ್ಚಿನ ಹಣವನ್ನು ವೆಚ್ಚ ಮಾಡುತ್ತೀರಿ. ಸರಕಾರಿ ನೌಕರರಿಗೆ ಬಡ್ತಿ ದೊರೆಯಲಿದೆ. ಪ್ರೇಮಿಯ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿ.
 
 
ತುಲಾ
ನಿಮ್ಮ ಆಸೆ ಮೇರುಮಟ್ಟಕ್ಕೇರುತ್ತದೆ. ಅಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಪ್ರಯಾಣ ನಿಗದಿತ ಅವಧಿಗೆ ಆರಂಭವಾಗುತ್ತವೆ. ವೈದ್ಯಕೀಯ, ಮೆಕಾನಿಕಲ್ ಕ್ಷೇತ್ರದವರಿಗೆ ಉತ್ತಮ ಧನಲಾಭವಿದೆ.ಮನೆಯಲ್ಲಿ ಸಂತಸದ ಸಂಭ್ರಮ.
 
ವೃಶ್ಚಿಕ
ವಹಿವಾಟಿನಲ್ಲಿ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಭಾವಾವೇಶಗಳು ಹಾನಿ ಉಂಟುಮಾಡಬಲ್ಲುವು. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ ಮತ್ತು ಸಹೋದ್ಯೋಗಿಗಳೊಂದಿಗೆ ವಾಗ್ವಾದ ಮಾಡುವುದರಿಂದ ದೂರವಿರಿ.ಯೋಗ ಶಿಕ್ಷಣ ಪಡೆಯುವುದು ಉತ್ತಮ.
 
 
ಧನು
ಪ್ರೀತಿಸುವವರೊಂದಿಗೆ ಸ್ವಲ್ಪ ಸಮಯ ಕಳೆಯುವುದರಿಂದ ತೃಪ್ತಿಕರ ಮತ್ತು ಶಮನ ಹೊಂದುವಿರಿ. ಕುಟುಂಬದಲ್ಲಿ ಆನಂದ ಹೆಚ್ಚಾಗಲಿದೆ.ನಿಮ್ಮ ಬಯಕೆಗಳು ಈಡೇರಲಿವೆ. ಹಣವು ಎಲ್ಲ ಕಡೆಗಳಿಂದ ಹರಿದುಬರಲಿದೆ. ಪ್ರಯಾಣದಲ್ಲಿ ಎಚ್ಚರಿಕೆಯಿಂದಿರುವುದು ಸೂಕ್ತ. ದೂರದ ಪ್ರಯಾಣದಲ್ಲಿ ಜಯ ಲಭಿಸುತ್ತದೆ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ. ಪತ್ರಿಕೆ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ವರ್ಗಾವಣೆ.
 
 
ಮಕರ
ನಿಮ್ಮ ಸ್ವಂತ ಕೆಲಸವನ್ನು ನೀವು ಜರೂರಾಗಿ ಮಾಡಬೇಕಾಗುತ್ತದೆ. ಅನಿರೀಕ್ಷಿತ ಪ್ರಯಾಣ ಕೈಗೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಅಸಾಮಾನ್ಯ ವ್ಯಕ್ತಿಗಳು ನಿಮ್ಮಲ್ಲಿಗೆ ಬಂದು ಸಲಹೆ ಕೇಳುವರು. ದೇವರ ದರ್ಶನದಿಂದ ಮನಶ್ಶಾಂತಿ ನಿಮ್ಮ ಸೃಜನಾತ್ಮಕ ಕಲ್ಪನೆಯನ್ನು ಸೂಕ್ತ ಹಾದಿಯಲ್ಲಿ ಬಳಸಿ. ನಿಮ್ಮ ಬಯಕೆಗಳು ಈಡೇರಲಿವೆ. ಹಣವು ಎಲ್ಲ ಕಡೆಗಳಿಂದ ಹರಿದುಬರಲಿದೆ.
 
 
ಕುಂಭ
ವಿಶಿಷ್ಟ, ಆಕರ್ಷಕ ಮತ್ತು ಉಲ್ಲಸಿತ ವ್ಯಕ್ತಿಯೊಬ್ಬರು ನಿಮಗೆ ಸಿಗಬಹುದು. ನೀವು ಪ್ರೀತಿಸಿದವರೊಂದಿಗೆ ನಿಮ್ಮ ವಿವಾಹವು ನಡೆಯುವುದು. ವ್ಯಾಪಾರಿಗಳಿಗೆ ಉತ್ತಮ ಲಾಭ, ಕೃಷಿಕರಿಗೆ ಉತ್ತಮ ಆದಾಯ ಬರುತ್ತದೆ. ಸರಕು ಸಾಗಾಣಿಕೆದಾರರಿಗೆ, ಟ್ರಾವೇಲ್ಸ್ ಮಾಲೀಕರಿಗೆ ಉತ್ತಮ ಲಾಭವಾಗಲಿದೆ.
 
 
ಮೀನ
ನಿರುದ್ಯೋಗಿಗಳು ತಮ್ಮ ಪ್ರಯತ್ನದಲ್ಲಿ ಸಫಲರಾಗುತ್ತಾರೆ. ಸಂಬಂಧಗಳು ವೃದ್ಧಿಯಾಗುತ್ತವೆ. ಪತ್ರಿಕೆ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ವರ್ಗಾವಣೆ ಸಂಭವ. ನಿಮ್ಮ ತಾಳ್ಮೆ ಹಾಗೂ ಅರ್ಥಮಾಡಿಕೊಳ್ಳುವಿಕೆಯಿಂದ ಮಗುವಿನ ಬಗ್ಗೆ ಚಿಂತೆ ಅಥವಾ ಪ್ರಣಯದ ಬಗ್ಗೆ ಆಸಕ್ತಿಯನ್ನು ಪರಿಹರಿಸಬಹುದು.

LEAVE A REPLY

Please enter your comment!
Please enter your name here