ರಾಶಿ ಫಲ…

0
360

ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… ( ಜೂನ್ 14 ರಿಂದ ಜೂನ್20 ರವರೆಗೆ)
 
ಮೇಷ
ಹೊಸ ಗೆಳೆಯರೊಂದಿಗೆ ಗೆಳೆತನ ಆರಂಭವಾಗುತ್ತದೆ. ರಾಜಕೀಯ ವಿಷಯಗಳಲ್ಲಿ ನಿಮಗೆ ಪೂರಕ ವಾತಾವರಣವಿರುತ್ತದೆ. ಅತ್ಯುತ್ಸಾಹದಿಂದಿರುತ್ತೀರಿ ಮತ್ತು ಪೂರ್ಣ ಸಂತೋಷದಿಂದಿರುತ್ತೀರಿ. ನೀವು ಉಹಿಸಿದ ಖರ್ಚುಗಳು ಇನ್ನಷ್ಟು ಹೆಚ್ಚಾಗಲಿವೆ.
 
 
ವೃಷಭ
ಆರೋಗ್ಯದ ಬಗ್ಗೆ ಗಮನ ಹರಿಸಿ. ಅನಿರೀಕ್ಷಿತ ಧನಲಾಭ ದೊರೆಯುವ ಸಾಧ್ಯತೆ ಇದೆ. ನಿಮಗೆ ಒಳ್ಳೆಯ ಸುದ್ದಿ ಕಾದಿದೆ. ರಾಜಕೀಯ ವ್ಯಕ್ತಿಗಳು ಬಹು ನಿರೀಕ್ಷಿತ ಅವಕಾಶವೊಂದನ್ನು ಪಡೆಯುತ್ತಾರೆ. ಪತ್ನಿಯಿಂದ ಹೆಚ್ಚಿನ ಸಹಕಾರ ದೊರೆಯಲಿದೆ.
 
 
 
ಮಿಥುನ
ಆಕಸ್ಮಿಕ ಪ್ರಯಾಣಯೋಗ ಯುವಕರು ಪ್ರೇಮ ವ್ಯವಹಾರದಿಂದ ದೂರ ಇರುವುದು ಒಳಿತು. ಕುಟುಂಬದಲ್ಲಿ ಪರಸ್ಪರ ಅಸಹಕಾರ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ, ಗುರು ಹಿರಿಯರಿಂದ ಗೌರವ ದೊರೆಯಲಿದೆ.
 
 
 
ಕರ್ಕಾಟಕ
ನೀವು ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ನಿಮಗೆ ಗೌರವ ಪ್ರಾಪ್ತಿಯಾಗಲಿದೆ. ವಿದೇಶಿ ಪ್ರವಾಸ ಯೋಗವಿದೆ. ವಿಶಿಷ್ಟ, ಆಕರ್ಷಕ ಮತ್ತು ಉಲ್ಲಸಿತ ವ್ಯಕ್ತಿಯೊಬ್ಬರು ನಿಮಗೆ ಸಿಗಬಹುದು. ಆದಾಗ್ಯೂ, ಹಣಕಾಸು ವಿಷಯಗಳ ಸಂಬಂಧದಲ್ಲಿ ನಿಧಾನಗತಿ ಪ್ರಕ್ರಿಯೆ. ಮಾನಸಿಕ ನೆಮ್ಮದಿ ದೊರೆಯಲಿದೆ.
 
 
 
ಸಿಂಹ
ವಾಗ್ವಾದದಿಂದ ದೂರವಿರಿ. ಹಣಕಾಸಿನ ಬಗ್ಗೆ ಎಚ್ಚರವಿರಲಿ. ಮುಖ್ಯವಾದ ಕಾರ್ಯಗಳಲ್ಲಿ ಏಕಾಗ್ರತೆ ವಹಿಸದಿದ್ದಲ್ಲಿ ಇಕ್ಕಟ್ಟಿಗೆ ಸಿಲುಕುತ್ತೀರಿ. ಖರ್ಚುಗಳು ಹೆಚ್ಚಾದರು ಮಾನಸಿಕ ಶಾಂತಿ ದೊರೆಯುತ್ತದೆ.ನಿಮ್ಮ ಕಾರ್ಯಗಳಲ್ಲಿ ಜಯ ಲಭಿಸಲಿದೆ.
ಕನ್ಯಾ
ಮಹಿಳೆಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ. ವಿದೇಶಿ ವಸ್ತುಗಳ ಖರೀದಿಗೆ ಸಿದ್ದತೆ. ದೂರದ ಸಂಬಂಧಿಗಳಿಂದ ನೆರವು. ನಿಮ್ಮ ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುತ್ತದೆ.
 
 
ತುಲಾ
ನಿಮ್ಮ ಯೋಚನೆಗಳ ಬಗ್ಗೆ ಇತರರಿಗೆ ತಿಳಿಸದೇ ಮುಚ್ಚಿಡುವಂತಹ ಕೆಲಸ ಮಾಡಬೇಡಿ.ವಿರೋಧಿಗಳ ಹುನ್ನಾರ ಸಫಲವಾಗುವುದಿಲ್ಲ. ನಿಮ್ಮ ಸೃಜನಾತ್ಮಕತೆ ಮತ್ತು ಉತ್ಸಾಹಗಳ ಅಗತ್ಯವಿರುವ ಕೆಲಸಗಳಲ್ಲಿ ಯಶಸ್ಸು ಗಳಿಸುತ್ತೀರಿ. ನಿಮ್ಮ ಪ್ರಯತ್ನ ಸಫಲವಾಗಲಿದೆ.
 
 
 
ವೃಶ್ಚಿಕ
ನಿಮ್ಮ ಸುತ್ತಲ ವಾತಾವರಣವು ಸಂತಸದಾಯಕವಾಗಿರುತ್ತದೆ. ಕುಟುಂಬದವರ ನೆರವು ಪ್ರಾಪ್ತವಾಗುತ್ತದೆ. ಹೊಸ ವಾಹನ ಖರೀದಿಸಲು ನೀವು ಯೋಚಿಸಬಹುದು. ಕಷ್ಟಕರ ಕಾಲದಲ್ಲಿ ಆರ್ಥಿಕ ನೆರವು. ನಿಮ್ಮ ಪ್ರಯತ್ನಗಳಲ್ಲಿ ಸಾವಧಾನವಾಗಿರಿ.
ಧನು
ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇತರರು ನಿಮ್ಮ ಸಮಯವನ್ನು ಯಾಚಿಸುತ್ತಿರುವುದರಿಂದ ನಿಮ್ಮ ಸ್ವಂತ ಇಚ್ಛೆಗಳಿಗಾಗಿ ಕಾಯಬೇಕಾಗಬಹುದು. ಮನೆಯಲ್ಲಿ ಸಂಭ್ರಮದ ವಾತಾವರಣ. ನೆರೆಹೊರೆಯವರಿಂದ ನೆರವು.
 
 
ಮಕರ
ನಿಮ್ಮ ಕ್ರಿಯಾಶೀಲ ಯೋಚನೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಭವಿಷ್ಯದಲ್ಲಿ ಯಶಸ್ಸು. ಚಾಣಕ್ಷತನದಿಂದ ಸತ್ಕಾರ್ಯ ಸಾಧನೆ. ನಿಮ್ಮ ಬಯಕೆಗಳು ಈಡೇರಲಿವೆ. ಹಣವು ಎಲ್ಲ ಕಡೆಗಳಿಂದ ಹರಿದುಬರಲಿದೆ. ವಿಶ್ವಾಸದ ಹುಮ್ಮಸ್ಸಿನಲ್ಲಿರುತ್ತೀರಿ ಹಾಗೂ ಸ್ಪರ್ಧಾತ್ಮಕ ಪ್ರಯತ್ನಗಳಲ್ಲಿ ಯಶಸ್ಸನ್ನು ಕಾಣುವಿರಿ. ಧನಾಗಮನದ ಸೂಚನೆಯಿದೆ. ನಿಮ್ಮ ಸ್ವಂತ ಪ್ರಯತ್ನದಿಂದ ಆಸ್ತಿ ಪಾಸ್ತಿ ಸಂಪಾದನೆ ಮಾಡುವಿರಿ. ಹಿಂದುಳಿದಿದ್ದ ಎಲ್ಲ ಕಾರ್ಯಗಳಲ್ಲಿ ಆಸಕ್ತಿ.
 
 
ಕುಂಭ
ಕಳೆದ ಕೆಲ ಕಾಲಗಳಿಂದ ಭಾಧಿಸುತ್ತಿರುವ ಸಮಸ್ಯೆಗಳು ನಿವಾರಣೆಯಾಗಿ ಮಾನಸಿಕವಾಗಿ ನೆಮ್ಮದಿಯನ್ನು ಕಾಣುತ್ತೀರಿ. ಆರೋಗ್ಯದ ಬಗ್ಗೆ ಗಮನ ಹರಿಸಿ. ಅನಿರೀಕ್ಷಿತ ಧನಲಾಭ ದೊರೆಯುವ ಸಾಧ್ಯತೆ ಇದೆ. ವಿವಾದಗಳಲ್ಲಿ ತಲೆಹಾಕಬೇಡಿ, ಅನಗತ್ಯ ತೊಂದರೆ ಎದುರಾಗಲಿವೆ.
 
 
ಮೀನ
ವಾರ ಆರಂಭವಾಗುತ್ತಿರುವಂತೆಯೇ ನಿಮ್ಮ ತೀಕ್ಷ್ಣ ಬುದ್ದಿವಂತಿಕೆ ಬೆಳಕಿಗೆ ಬರುತ್ತದೆ. ಹಿರಿಯರ ಆರೋಗ್ಯದ ಕಾಳಜಿ ವಹಿಸಿ. ಎಲ್ಲರಿಗೂ ಆತ್ಮೀಯರಾಗಿ ಮತ್ತು ಉತ್ಸಾಹಕರಾಗಿರುವಂತಿರಲು ಪ್ರಯತ್ನಿಸಿ, ಒಂದು ಪ್ರಣಯದ ಸಂಜೆ ನಿಮಗೆ ಉತ್ಸಾಹ ಮತ್ತು ಆನಂದವನ್ನು ನೀಡಲಿದೆ. ನಿಗದಿತ ಅವಧಿಯಲ್ಲಿ ಕಾರ್ಯಗಳನ್ನು ಪೂರ್ಣಗೊಳಿಸಿ.

LEAVE A REPLY

Please enter your comment!
Please enter your name here