ರಾಜ್ಯ ಕಂಡ ದುರ್ಬಲ ಸಚೇತಕ ಐವನ್

0
489

ಮಂಗಳೂರು ಪ್ರತಿನಿಧಿ ವರದಿ
ವಿಧಾನ ಪರಿಷತ್ ನ ಮುಖ್ಯ ಸಚೇತಕರಾಗಿ ಐವನ್ ಡಿ. ಸೋಜಾರವರು ,ದೇಶದ ಪ್ರಧಾನಿಗಳ ಕುರಿತ ನೀಡಿರುವ ಹೇಳಿಕೆ ಅವರ ಅಜ್ಞಾನವನ್ನು ಎತ್ತಿ ತೋರಿಸುತ್ತದೆ. ಒಬ್ಬ ಸಚೇತಕರ ಸ್ಥಾನದಲ್ಲಿರುವ ರಾಜಕಾರಣಿ ಈ ರೀತಿ ಹೇಳಿಕೆ ನೀಡಿರುವುದು ಇಡೀ ರಾಜ್ಯವೇ ತಲೆತಗ್ಗಿಸುವಂತೆ ಮಾಡಿದೆ.
 
 
 
 
ನೋಟು ರದ್ದತಿಯ (ಅಪನಗದೀಕರಣ)ದ ನಿರ್ಧಾರವು ಸಮರ್ಪಕವಾಗಿ ಅನುಷ್ಟಾನ ಗೊಳಿಸುವಲ್ಲಿ ಪ್ರಧಾನಿಯವರು ಸಂಪೂರ್ಣ ವಿಫಲರಾಗಿದ್ದಾರೆ ಎಂಬ ಹೇಳಿಕೆಯನ್ನು ಭಾರತೀಯ ಜನತಾ ಪಾರ್ಟಿಯು ವಿರೋಧಿಸುತ್ತದೆ. ಯಾಕೆಂದರೆ ಇಡೀ ದೇಶದ ಜನ ಯಾವುದೇ ವಿರೋಧ ವ್ಯಕ್ತಪಡಿಸದೇ ಈ ಯೋಜನೆಯನ್ನು ರಾಷ್ಟ್ರದ ಅಭ್ಯುದ್ಯಯಕ್ಕೋಸ್ಕರ ಸ್ವೀಕಾರ ಮಾಡಿದ್ದಾರೆ ಮತ್ತು ಸಣ್ಣ ಪುಟ್ಟ ಸಮಸ್ಯೆಗಳನ್ನು ಸಹಿಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿರುವಾಗ ಕೆಲವೊಂದು ಭ್ರಷ್ಟಾಚಾರಿಗಳನ್ನು ಕಾಳಧನಿಕರನ್ನು ಬೆಂಬಲಿಸುವ ಐವನ್ ಡಿ ಸೋಜಾರಂತಹ ವಿರೋದ ಪಕ್ಷದ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡಿರುವುದು ಕೇವಲ ಪ್ರಚಾರದ ದೃಷ್ಟಿಯಿಂದ ಹೊರತು ಯಾವುದೇ ಜನರ ಬಗ್ಗೆ ಕಾಳಜಿಯಿಂದಲ್ಲ.
 
 
 
ಭಾ.ಜ ಪಾ. ಸರಕಾರವನ್ನು ಮತ್ತು ದೇಶದ ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೀಳುಮಟ್ಟದ ಹೇಳಿಕೆಯನ್ನು ನೀಡುವುದರ ಬದಲು ಕಳೆದ 10 ವರ್ಷಗಳಲ್ಲಿ ಸರಕಾರ ನೀಡಿರುವ ತಮ್ಮದೇ ಪಕ್ಷ ದ ಪ್ರಧಾನಿ ಮನಮೋಹನ ಸಿಂಗ್ ಬಗ್ಗೆ ತಿಳಿಯುವುದು ಉತ್ತಮ ಕಳೆದ ಯು.ಪಿ.ಎ ಸರಕಾರದಲ್ಲಿ 2ಜಿ ಮತ್ತು 3ಜಿ ಸೆಕ್ಟ್ಂ ಕಾಮನ್ವೆಲ್ತ್ , ಆದರ್ಶ ಹಗರಣ, ಕೋಲ್ ಹಗರಣ ಮುಂತಾದ ಅನೇಕ ಹಗರಣಗಳ ಮುಖಾಂತರ ದೇಶದ ತೆರಿಗೆಯ ಲಕ್ಷಾಂತರ ಕೋಟಿ ಹಣವನ್ನು ಲೂಟಿ ಮಾಡಿದಾಗ ಬಾಯಿಬಿಡದ ತಮ್ಮ ಪ್ರಧಾನಿಯ ಬಗ್ಗೆ ನಿಮಗೆ ಏನೂ ತಿಳಿದಿಲ್ಲವೇ ? ಆ ಬಗ್ಗೆ ಹೇಳಿಕೆಯನ್ನು ನೀಡಲು ತಾಕತಿಲ್ಲದೇ ಐವನ್ ಡಿ ಸೋಜಾರವರಿಗೆ ಇಡೀ ಜಗತ್ತೇ ಕೊಂಡಾಡುವ ಮತ್ತು ದೇಶದ ಅಭಿವೃದ್ದಿಗೋಸ್ಕರ ಕಳೆದ ಎರಡುವರೆ ವರುಷಗಳಲ್ಲಿ ನಿರಂತರವಾಗಿ ಯಾವುದೇ ವಿಶ್ರಾಂತಿಯನ್ನು ಪಡೆಯದೇ ದಿನದ 18 ಗಂಟೆಗಳ ಕಾಲ ಕೆಲಸ ಮಾಡುತ್ತಿರುವ ಮತ್ತು ದೇಶದ ಜನ ನೀರಿಕ್ಷೆ ಇಟ್ಟಿರುವ ಪ್ರಧಾನಿಗಳ ಬಗ್ಗೆ ಮಾತನಾಡುವ ನ್ಯೆತಿಕ ಹಕ್ಕು ನಿಮಗಿಲ್ಲ.
 
 
 
ಅಪನಗದೀಕರಣ 50 ದಿನಗಳ ನಂತರ ದೇಶದ ಯಾವುದೇ ದುರ್ಬಲ ಜನರಿಗೆ ಯಾವುದೇ ರೀತಿಯ ತೊಂದರೆಗಳಿಲ್ಲ ಎಂಬುದನ್ನು ಮಾದ್ಯಮಗಳ ಮುಖಾಂತರ ಜನರೇ ತಿಳಿಸುತ್ತಿದ್ದಾರೆ. ತಮ್ಮ ದ್ಯೆನಂದಿನ ಚಟುವಟಿಕೆಗಳಿಗೆ ನಗದಿನ ಯಾವುದೇ ಸಮಸ್ಯೆಗಳು ಆಗಿರುವ ಒಂದೇ ಒಂದು ಉದಾಹರಣೆಗಳು ಕಂಡುಬಂದಿಲ್ಲ.
 
 
 
ನೋಟು ರದ್ದತಿಯಿಂದ ಯಾರ ಹಣ ಎಷ್ಟ್ತು ಜಮೆಯಾಗಿದೆ ಮತ್ತು ಒಟ್ಟು ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಮಾಹಿತಿ ಹಕ್ಕು ಮುಖಾಂತರ ಪಡೆಯಬಹುದು ಎಂಬ ಸಾಮಾನ್ಯ ಜ್ಞಾನವು ನಿಮಗಿಲ್ಲವೇ.? ದೇಶದ ಶೇ 12 ಮಾತ್ರ ಸ್ಮಾರ್ಟ್ ಫೋನ್ ಉಪಯೋಗಿಸುತ್ತಿರುವುದು ಮತ್ತು ಶೇ 25 ಮಂದಿ ಮಾತ್ರ ಬ್ಯಾಂಕ್ ಖಾತೆ ಹೊಂದಿರುವುದು, ಕಾಂಗ್ರೆಸ್ಸಿನ 55 ವರ್ಷಗಳ ಆಳ್ವಿಕೆಯ ದುಸ್ಥಿತಿಗೆ ಹಿಡಿದ ಕ್ಯೆಗನ್ನಡಿಯಾಗಿದೆ.
 
 
ನೋಟು ರದ್ದತಿಯ ವಿರುದ್ದ ಕುರಿತು ಕೇಂದ್ರ ಸರಕಾರದ ವಿರುದ್ದ ಕಾಂಗ್ರ್ರೆಸು ಹಮ್ಮಿಕೊಂಡಿರುವ ಪ್ರಚಾರ ಆಂದೂಲನ , ಪ್ರಜಾಪ್ರಭುತ್ವದ ವಿರುದ್ದ ನಡೆಸುವ ಹೋರಾಟ ಮತ್ತು ಕಾಂಗ್ರೆಸ್ ಪಕ್ಷದ ಕೀಳುಮಟ್ಟದ ರಾಜಕಾರಣವಾಗಿದೆ. ಆದ್ದರಿಂದ ಐವನ್ ಡಿ ಸೋಜಾರು ನೀಡಿರುವ ಈ ರೀತಿಯ ಕೀಳುಮಟ್ಟದ ಹೇಳಿಕೆ ಅವರೊಬ್ಬ ರಾಜ್ಯ ಕಂಡ ವಿಧಾನ ಪರಿಷತ್ನ ದುರ್ಬಲ ಮುಖ್ಯ ಸಚೇತಕರು ಎಂಬುದನ್ನು ಎತ್ತಿ ತೋರಿಸಿರುತ್ತಾರೆ ಎಂಬುದಾಗಿ ಭಾ.ಜ.ಪಾ ವಕ್ತಾರ ಜಿತೇಂದ್ರ ಕೊಟ್ಟಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here