ರಾಜ್ಯಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಗ್ರೀನ್ ಸಿಗ್ನಲ್

0
326

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ಗೆ ಮೆಟ್ರೋ ಸಂಪರ್ಕ ವಿಚಾರದಲ್ಲಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಜತೆ ಇಂದು ಸಭೆ ನಡೆದಿದೆ. ರಾಜ್ಯಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
 
 
 
ವಿಧಾನಸೌಧದಲ್ಲಿ ಸಭೆ ಬಳಿಕ ಈ ಬಗ್ಗೆ ಮಾತನಾಡಿದ ಸಚಿವ ಕೆ.ಜೆ ಜಾರ್ಜ್, 6 ಸಾವಿರ ಕೋಟಿ ವೆಚ್ಚದ ಯೋಜನೆಯ ಅನುಮತಿಗೆ ಕೇಂದ್ರ ಸಚಿವರ ಜಯಂತ್ ಸಿನ್ಹಾ ಅವರು ಸಭೆಯಲ್ಲಿ ಭರವಸೆ ನೀಡಿದ್ದಾರೆ.ರಾಜ್ಯ, ಕೇಂದ್ರ ಸರ್ಕಾರ ಜಂಟಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗಿದೆ. 30ಕಿ.ಮೀ. ರೈಲು ಸಂಪರ್ಕಕ್ಕೆ ಮಾರ್ಗ ಗುರುತಿಸಲಾಗಿದೆ. ಒಟ್ಟು 9 ಮಾರ್ಗಗಳನ್ನು ಈಗಾಗಲೇ ಗುರುತಿಸಲಾಗಿದೆ. ಇದನ್ನು ಸಾರ್ವಜನಿಕರ ಸಲಹೆಗಾಗಿ ಬಿಡಲಾಗಿದೆ. ಒಂದು ಮಾರ್ಗವನ್ನು ಅಂತಿಮ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here