ರಾಜ್ಯಸಭಾ ಸ್ಥಾನಕ್ಕೆ ಸಿದ್ಧು ರಿಸೈನ್

0
586

ನವದೆಹಲಿ ಪ್ರತಿನಿಧಿ ವರದಿ
ರಾಜ್ಯಸಭಾ ಸದಸ್ಯತ್ವಕ್ಕೆ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ಧ ರಾಜೀನಾಮೆ ನೀಡಿದ್ದಾರೆ. ಸಿದ್ಧು ಅವರು ಏಪ್ರಿಲ್ ನಲ್ಲಿ ರಾಜ್ಯಸಭೆಗೆ ಬಿಜೆಪಿಯಿಂದ ನಾಮ ನಿರ್ದೇಶನಗೊಂಡಿದ್ದರು.
 
 
ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಕ್ರಿಕೆಟಿಗ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಇವರು ರಾಜ್ಯಸಭೆ ಪ್ರವೇಶಕ್ಕೆ ನಿರಾಸಕ್ತಿ ತೋರಿಸಿದ್ದರು. ಈಗ ಸಿದ್ಧು ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
 
 
ಈ ಹಿಂದೆ ಸಿದ್ಧು ಪಂಜಾಬ್ ಅಮೃತಸರದಿಂದ ಲೋಕಾಸಭೆಗೆ ಆರಿಸಿ ಬಂದಿದ್ದರು. ಹಿರಿಯರ ಒತ್ತಡಕ್ಕೆ ಮಣಿದು ಆ ಸ್ಥಾನವನ್ನು ಅರುಣ್ ಜೇಟ್ಲಿಗೆ ಬಿಟ್ಟುಕೊಟ್ಟಿದ್ದರು.
 
 
ಕೆಲವೇ ದಿನಗಳಲ್ಲಿ ಪಂಜಾಬ್ ನಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನವಜೋತ್ ಸಿಂಗ್ ಸಿದ್ಧು ನಡೆ ತೀವ್ರ ಕುತೂಹಲ ಕೆರಳಿಸಿದೆ. ರಾಜ್ಯಸಭಾ ಸ್ಥಾನಕ್ಕೆ ರಿಸೈಲ್ ಮಾಡಿದ ನವಜೋತ್ ಸಿಂಗ್ ಸಿದ್ಧು ಆಮ್ ಆದ್ಮಿ ಪಕ್ಕಕ್ಕೆ ಸೇರ್ತಾರೆ ಎಂಬ ವದಂತಿಯೂ ಹಬ್ಬಿದೆ.

LEAVE A REPLY

Please enter your comment!
Please enter your name here