ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ 2016

0
548

ನಮ್ಮ ಪ್ರತಿನಿಧಿ ವರದಿ
ಜೀವನ್ ಪ್ರಕಾಶನ, ಚಿಕ್ಕಬಳ್ಳಾಪುರ ಇವರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ ದಸರಾ ಕಾವ್ಯಯನ್ನು ಆಯೋಜಿಸಲಾಗಿದೆ. ಆಸಕ್ತಿಯುಳ್ಳವರು ತಮ್ಮ ಕವಿತೆಗಳು ಕಳುಹಿಸಬಹುದು. ನಿಯಮಗಳು ಈ ಕೆಳಗಿನಂತೆ ಇರುತ್ತವೆ.
 
 
* ಸ್ವರಚಿತ ಕವಿತೆಗಳು ಮಾತ್ರ ಕಳುಹಿಸಬೇಕು.
* ಒಬ್ಬರು ಒಂದು ಕವಿತೆ ಮಾತ್ರ ಕಳುಹಿಸಬೇಕು.
* ಕವಿತೆಯ ಜೊತೆಯಲ್ಲಿ ಕವಿಯ ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿರಬೇಕು ಮತ್ತು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಕಳುಹಿಸಬೇಕು.
*  ಯಾವುದೇ ರೀತಿಯ ಪ್ರವೇಶ ಧನ ಇರುವುದಿಲ್ಲ.
* ಇ-ಮೇಲ್ ಮೂಲಕ ಕವಿತೆಗಳನ್ನು ಕಳುಹಿಸುವವರು ನುಡಿ ಅಥವಾ ಯೂನಿಕೋಡ್ ತಂತ್ರಾಶದಲ್ಲಿ ಟೈಪಿಸಿ ಕಳುಹಿಸಬೇಕು.
* ಕವಿತೆ ಕಳುಹಿಸಿಕೊಡಲು ಕೊನೆಯ ದಿನಾಂಕ ಸೆಪ್ಟೆಂಬರ್ 20,2016
* ಅವಧಿ ಮೀರಿ ಬಂದ ಮತ್ತು ನಿಯಮ ಮೀರಿದ ಕವಿತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
* ಬಹುಮಾನ ಪಡೆದ ಮತ್ತು ಮೆಚ್ಚುಗೆ ಕವಿತೆಗಳನ್ನು ಸೇರಿಸಿ ಕವನ ಸಂಕಲನ ಹೊರತರಲಾಗುವುದು. (ಇದಕ್ಕೆ ಪ್ರಕಟಣಾ ವೆಚ್ಚ ಇರುವುದಿಲ್ಲ)
ಕವಿತೆಗಳು ಕಳುಹಿಸಿಕೊಡಬೇಕಾದ ವಿಳಾಸ:-
ರಾಜಹಂಸ, ಸಂಪಾದಕರು, ಜೀವನ್ ಪ್ರಕಾಶನ, ಅಂಚೆ ಪೆಟ್ಟಿಗೆ ಸಂಖ್ಯೆ 03, ಚಿಕ್ಕಬಳ್ಳಾಪುರ -562101
ಇ-ಮೇಲ್:- [email protected]
ಮಾಹಿತಿಗೆ +91 9901982195 ಕ್ಕೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here