ರಾಜ್ಯದ 6 ಜಿಲ್ಲೆಗಳಿಗೆ ಸ್ಥಾನ

0
183

ರಾಷ್ಟ್ರೀಯ ಪ್ರತಿನಿಧಿ ವರದಿ
ಕೇಂದ್ರ ಸರಕಾರ ಗ್ರಾಮೀಣ ಸ್ವಚ್ಛತಾ ರ್ಯಾಂಕಿಂಗ್ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿನ ಟಾಪ್ 53 ಜಿಲ್ಲೆಗಳಲ್ಲಿ (ಸಮತಟ್ಟು ಪ್ರದೇಶ) ರಾಜ್ಯದ ಆರು ಜಿಲ್ಲೆಗಳು ಸ್ಥಾನ ಪಡೆದುಕೊಂಡಿವೆ.
 
 
 
ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆ ‘ಸ್ವಚ್ಛ ಸರ್ವೇಕ್ಷಣ್ 2016-ಗ್ರಾಮೀಣ್’ ವರದಿಯ ಪ್ರಕಾರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಮುಖವಾಗಿ ನಾಲ್ಕು ಮಾನದಂಡಗಳನ್ನು ಆಧರಿಸಿ, ಗರಿಷ್ಠ ಅಂಕದನ್ವಯ ಕೇಂದ್ರ ಈ ಪಟ್ಟಿಯನ್ನು ಅಂತಿಮಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿನ ಸ್ವಚ್ಛತೆ, ಶೌಚಗೃಹ ಹೊಂದಿರುವ ಮನೆಗಳು, ಮನೆಸುತ್ತಮುತ್ತಲಿನ ಕಲುಷಿತ ವಾತಾವರಣ ಮತ್ತು ನೀರು ನಿಲ್ಲದ ಮನೆಗಳು, ಕಸ ಸಂಗ್ರಹಣೆ. ಈ ನಾಲ್ಕು ಅಂಶಗಳನ್ನು ಮಾನದಂಡವನ್ನಾಗಿಸಿ ಈ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.
 
 
 
ರ್ಯಾಂಕಿಂಗ್ ಪಟ್ಟಿ ವಿವರ:
1. ಸಿಂಧುದುರ್ಗ – ಮಹಾರಾಷ್ಟ್ರ (96.8)
2. ನಡಿಯಾ – ಪ.ಬಂಗಾಳ (95)
3. ಸತಾರಾ – ಮಹಾರಾಷ್ಟ್ರ (92.9)
4. ಮಿಡ್ನಾಪುರ ಪೂರ್ವ – ಪ.ಬಂಗಾಳ (92.6)
5. ಕೊಲ್ಹಾಪುರ – ಮಹಾರಾಷ್ಟ್ರ (91.6)
6. ಹೂಗ್ಲಿ – ಪ.ಬಂಗಾಳ (91.5)
7. ಉಡುಪಿ – ಕರ್ನಾಟಕ (91)
8. ರತ್ನಗಿರಿ – ಮಹಾರಾಷ್ಟ್ರ(90.9)
9. ಥಾಣೆ -ಮಹಾರಾಷ್ಟ್ರ (88.7)
10. ಚುರು – ರಾಜಸ್ಥಾನ (88.4)
11. ಕೊಡಗು – ಕರ್ನಾಟಕ (88)
12. ಧಾಂತರಿ -ಛತ್ತೀಸಗಢ (87.4)
13. ಇಂದೋರ್ – ಮ.ಪ್ರದೇಶ (87)
14. 24 ಪರಗಣ ಉತ್ತರ – ಪ.ಬಂಗಾಳ (86.7)
15. ಜುಂಜುನು – ರಾಜಸ್ಥಾನ (86.6)
16. ಕನ್ಯಾಕುಮಾರಿ – ತಮಿಳುನಾಡು (85)
17. ಬೆಂಗಳೂರು ಗ್ರಾಮಾಂತರ – ಕರ್ನಾಟಕ (84.4)
18. ಗಾಂಧಿನಗರ – ಗುಜರಾತ್ (82.9)
19. ನಾಮಕ್ಕಲ್ – ತಮಿಳುನಾಡು (81.7)
20. ಮಹೇಸನ – ಗುಜರಾತ್ (81.3)
21. ಖೇಡಾ – ಗುಜರಾತ್ (81.1)
22. ಜರ್ಸುಗುಢ – ಒರಿಸ್ಸಾ (81.1)
23. ರಾಮನಗರ – ಕರ್ನಾಟಕ (80.9)
24. ನವ್ಸಾರಿ – ಗುಜರಾತ್ (80.2)
25. ಶಿಕರ್ – ರಾಜಸ್ಥಾನ (79.9)
26. ಮಂಡ್ಯ – ಕರ್ನಾಟಕ (79.8)
27. ಪಠಾಣ್ – ಗುಜರಾತ್ (79)
28. ಸೂರತ್ – ಗುಜರಾತ್ (79)
29. ಭರೂಚ್ – ಗುಜರಾತ್ (78.8)
30. ಕೊಯಂಬತ್ತೂರು – ತ.ನಾಡು(78.5)
31. ವಲ್ಸದ್ – ಗುಜರಾತ್ (78.5)
32. ರಜ್ನಾಡ್ ಗಾಂವ್ – ಛತ್ತೀಸಗಢ (78.4)
33. ಯಮುನಾಗರ – ಹರ್ಯಾಣ (78.3)
34. ದೇಭಾಗರ್ – ಒರಿಸ್ಸಾ (78)
35. ನರ್ಮದಾ – ಗುಜರಾತ್ (78)
36. ಗಂಗಾನಗರ – ರಾಜಸ್ಥಾನ(77.9)
37. ನರಸಿಂಗಪುರ – ಮ.ಪ್ರದೇಶ (77.7)
38. ಸೆಹೋರ್ – ಮ.ಪ್ರದೇಶ(76.9)
39. ತೂತುಕುಡಿ – ತ.ನಾಡು (76.7)
40. ಗುರಗಾಂ – ಹರ್ಯಾಣ (75.4)
41. ಗಜಪತಿ – ಒರಿಸ್ಸಾ (75.1)
42. ಥಪಿ – ಗುಜರಾತ್ (74.9)
43. ಕೊರಿಯಾ – ಛತ್ತೀಸಗಢ (72)
44. ಬಿಕ್ನೀರ್ – ರಾಜಸ್ಥಾನ (71.9)
45. ಆನಂದ್ – ಗುಜರಾತ್ (71.6)
46. ಅಹಮದಾಬಾದ್ – ಗುಜರಾತ್ (71.5)
47. ಸಿರ್ಸಾ – ಹರ್ಯಾಣ (69.9)
48. ಪೆರಂಬಲೂರು – ತ.ನಾಡು (67.4)
49. ಅಜ್ಮೀರ್ – ರಾಜಸ್ಥಾನ(67)
50. ಗದಗ – ಕರ್ನಾಟಕ (64.7)
51. ಪಾಲಿ – ರಾಜಸ್ಥಾನ (64.5)
52. ಪಂಚಮಹಲ್ – ಗುಜರಾತ್ (64.1)
53. ದುಂಗಾರ್ಪುರ್ – ರಾಜಸ್ಥಾನ (62.4)

LEAVE A REPLY

Please enter your comment!
Please enter your name here