ರಾಜ್ಯದ 3 ಶಿಕ್ಷಣ ಸಂಸ್ಥೆಗಳು ರಾಷ್ಟ್ರದಲ್ಲೇ ಪ್ರಥಮ

0
440

ರಾಷ್ಟ್ರೀಯ ಪ್ರತಿನಿಧಿ ವರದಿ
ದೇಶದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ), ನಿರ್ವಹಣ ಸಂಸ್ಥೆಗಳ ಪೈಕಿ ಬೆಂಗಳೂರು ಐಐಎಂ ಪ್ರಥಮ ಸ್ಥಾನದಲ್ಲಿ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
 
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮೊದಲ ಬಾರಿಗೆ ದೇಶದ ವಿವಿಧ 3500 ಶೈಕ್ಷಣಿಕ ಸಂಸ್ಥೆಗಳ ರ್ಯಾಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯದ ಮೂರು ಸಂಸ್ಥೆಗಳು ಮೊದಲ ಸ್ಥಾನ ಪಡೆದಿವೆ.
 
ಮ್ಯಾನೇಜ್ ಮೆಣಟ್ ಶಿಕ್ಷಣಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರು ಐಐಎಂ ಮೊದಲ ಸ್ಥಾನದಲ್ಲಿದ್ದರೆ, ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಎಸ್ ಸಿ ಗೆ ಪ್ರಥಮ ರ್ಯಾಂಕ್ ಪಡೆದುಕೊಂಡಿದೆ.
 
ಅಲ್ಲದೆ ದೇಶದಲ್ಲಿರುವ ಔಷಧಿ ವಿದ್ಯಾಲಯಗಳ ಪೈಕಿ ಕರ್ನಾಟಕದ ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಫಾರ್ಮಸಿ ಅಗ್ರಸ್ಥಾನಿ ಎನಿಸಿಕೊಂಡಿದೆ. ಮೈಸೂರಿನ ಜೆಎಸ್ಎಸ್ ಫಾರ್ಮಸಿ ಕಾಲೇಜು 10ನೇ ಸ್ಥಾನ ಪಡೆದುಕೊಂಡಿದ್ದು, ಕೊಚ್ಚಿಯ ಅಮೃತಾ ಫಾರ್ಮಸಿ ಕಾಲೇಜು 8ನೇ ಸ್ಥಾನ ಗಳಿಸಿದೆ.
 
 
ಪಟಿಯಲ್ಲಿನ 50 ಫಾರ್ಮಾ ಕಾಲೇಜುಗಳಲ್ಲಿ ರಾಜ್ಯದ 12 ಫಾರ್ಮಾ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿದೆ. ನೂರು ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳು ಮತ್ತು 100 ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನೂ ಹಾಗೂ 50 ಪ್ರಬಂಧಕ ಶಿಕ್ಷಣ ಸಂಸ್ಥೆಗಳನ್ನು ನ್ಯಾಷನಲ್ ಇನ್ಸ್ಟಿಟ್ಯೂಶನಲ್ ರ್ಯಾಂಕಿಂಗ್ ಫ್ರೇಂವರ್ಕ್ (ಎನ್ ಐ ಆರ್ ಎಫ್) ಪಟ್ಟಿ ಮಾಡಿದೆ.
 
ಪ್ರಬಂಧಕ ಸಂಸ್ಥೆಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಐ ಐ ಎಂ ಅಹಮದಾಬಾದ್ ಅನ್ನು ಐ ಐ ಎಂ ಬೆಂಗಳೂರು ಹಿಂದಿಕ್ಕಿರುವುದು ವಿಶೇಷ. ವಿಶ್ವವಿದ್ಯಾಲಯ ಪಟ್ಟಿಯಲ್ಲಿ ಜೆ ಎನ್ ಯು ಮತ್ತು ಹೈದರಾಬಾದ್ ವಿಶ್ವವಿದ್ಯಾಲಯ ಮೂರನೆ ಮತ್ತು ನಾಲ್ಕನೇ ಸ್ಥಾನಗಳಲಿವೆ.
 
ಅಲ್ಲದೆ ಮಣಿಪಾಲ್ ಉನ್ನತ ಶಿಕ್ಷಣ ಸಂಸ್ಥೆ, ಜೆ ಎಸ್ ಎಸ್ ವಿಶ್ವವಿದ್ಯಾಲಯ, ಎಂ ಎಸ್ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಪ್ಲೈಡ್ ಸೈನ್ಸಸ್ ಮತ್ತು ಪಿಇ ಎಸ್ ವಿಶ್ವವಿದ್ಯಾಲಯ ಕ್ರಮವಾಗಿ 32ನೇ, 35ನೇ, 90ನೇ ಮತ್ತು 98 ನೇ ಸ್ಥಾನ ಗಳಿಸಿವೆ

LEAVE A REPLY

Please enter your comment!
Please enter your name here