ನಾಳೆಯಿಂದಲೇ ಜ್ಯಾರಿ… ಇನ್ನಷ್ಟು ಜಿಲ್ಲೆ ಲಾಕ್ ಡೌನ್ ಸಾಧ್ಯತೆ
ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಹತೋಟಿಗೆ ತರುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕೊರೊನ ಸೋಂಕ ಕಂಡು ಬಂದ ೯ಜಿಲ್ಲೆ ಲಾಕ್ ಡೌನ್ ಆಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ಬೆಂಗಳೂರು,ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ ಮೈಸೂರು ಕೊಡಗು ,ಬೆಳಗವಾವಿ ಧಾರವಾಡ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿದ್ದು ಮಾಚ್ ೩೧ರ ತನಕ ತುರ್ತು ಸೇವೆ ಮಾತ್ರ ಲಭ್ಯ.
ದಿನಸಿ ವೈದ್ಯಕೀಯ ಸೇವೆ ಹೊರತು ಪಡಿಸಿ ಎಲ್ಲವೂ ಬಂದ್ ಆಗಲಿದೆ. ಕೊರೊನಾ ಹೆಚ್ಚದಂತೆ ಲಾಕ್ ಔಟ್ ಜಿಲ್ಲೆ ಸಂಪರ್ಕಿಸುವ ಎಲ್ಲಾ ರಸ್ತೆ ಸೇವೆಗಳನ್ನು ಬಂದ್ ಮಾಡಲಾಗುತ್ತದೆ. ಕೊರನಾ ತಡೆಗೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿದ್ದು ಇನ್ನಷ್ಟು ಜಿಲ್ಲೆಗಳು ಲಾಕ್ ಡೌನ್ ಆಗುವ ಸಾಧ್ಯತೆಗಳು ನಿಚ್ಚಳವಾಗಿದೆ.