ದೇಶಪ್ರಮುಖ ಸುದ್ದಿರಾಜ್ಯವಾರ್ತೆ

ರಾಜ್ಯದ ಸಲಹೆಗೆ ಒಪ್ಪದ ತಮಿಳು

ರಾಷ್ಟ್ರೀಯ ಪ್ರತಿನಿಧಿ ವರದಿ
ಕಾವೇರಿ ವಿವಾದ ಸಂಬಂಧ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆದ ಸಭೆ ಮುಕ್ತಾಯವಾಗಿದೆ. ಕೇಂದ್ರ ಸಚಿವೆ ಉಮಾಭಾರತಿ ಜತೆ ಸಿಎಂ ಸಿದ್ದರಾಮಯ್ಯ ಸಭೆ ಮುಕ್ತಾಯವಾಗಿದೆ. ಈ ಸಭೆಯಲ್ಲಿ ಯಾವುದೇ ರೀತಿಯ ನಿರ್ಣಯಕ ತೀರ್ಮಾನ ಕೈಗೊಳ್ಳಲಿಲ್ಲ. ಇಂದಿನ ಸಂಧಾನ ಸಭೆ ಅಪೂರ್ಣವಾಗಿದೆ.
 
ಸಭೆ ನಂತರ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಗೋಷ್ಟಿಯಲ್ಲಿ ಮಾತನಾಡಿದ ಸಚಿವೆ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದ ಅಭಿಪ್ರಾಯ ಕೇಳಿದ್ದೇವೆ. ಸುಪ್ರೀಂಕೋರ್ಟ್ ಸಲಹೆಯಂತೆ ಸಂಧಾನ ನಡೆಸಿದ್ದೇವೆ. ನಾವು ಚರ್ಚೆಯ ಮಾಹಿತಿಯನ್ನು ಸುಪ್ರೀಂಕೋರ್ಟ್ ಗೆ ತಲುಪಿಸುತ್ತೇವೆ ಎಂದಿದ್ದಾರೆ.
 
 
ಸಭೆಯಲ್ಲಿ ತಮಿಳುನಾಡು, ಕರ್ನಾಟಕ ಸರ್ಕಾರದ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಕೋರ್ಟ್ ನಿಂದ ಹೊರಗಡೆ ಸಂಧಾನದ ಪ್ರಯತ್ನ ನಡೆದಿದೆ. ರಾಜ್ಯಗಳ ಜನರ ಹಿತದೃಷ್ಠಿಯಿಂದ ಸಮಸ್ಯೆ ಬಗೆಹರಿಸಬೇಕು. ನೀರಿನ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ. ಎರಡು ರಾಜ್ಯಗಳ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅಟಾರ್ನಿ ಜನರಲ್ ಮೂಲಕ ಸಭೆಯ ಮಾಹಿತಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಸಮಸ್ಯೆ ಬಗೆಹರಿಸಬೇಕಿದೆ. ಯಾವುದೇ ರಾಜ್ಯದಲ್ಲಿ ಅಹಿತಕರ ಘಟನೆ ನಡೆದ್ರೆ ಉಪವಾಸ ಕೈಗೊಳ್ಳುವೆ. ಉಪವಾಸ ಬೆದರಿಕೆ ತಂತ್ರವಲ್ಲ, ಇದೊಂದು ಮನವಿ ಎಂದು ಸಭೆ ಬಳಿಕ ಉಮಾ ಭಾರತಿ ಹೇಳಿದ್ದಾರೆ.
 
ಕರ್ನಾಟಕದ ಸಲಹೆಗೆ ತಮಿಳುನಾಡು ಒಪ್ಪಿಗೆ ನೀಡಿಲ್ಲ. ಕರ್ನಾಟಕ, ತಮಿಳುನಾಡಿಗೆ ತಜ್ಞರ ತಂಡ ಕಳುಹಿಸಲು ಕರ್ನಾಟಕ ಮನವಿ ಮಾಡಿದೆ. ಆದರೆ ತಜ್ಞರ ತಂಡ ಕಳುಹಿಸುವ ಸಲಹಗೆ ತಮಿಳುನಾಡು ಒಪ್ಪಿಲ್ಲ ಎಂದು ಕೇಂದ್ರ ಸಚಿವೆ ವಿವರಿಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here