ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ

0
282

 
ವರದಿ: ಲೇಖಾ
ಯುವಜನ ಸಬಲೀಕರಣ ಮತ್ತು ಕ್ರೀಡಾ ಹಾಗೂ ಮೀನುಗಾರಿಕೆ ಖಾತೆ ರಾಜ್ಯ ಸಚಿವ ಪ್ರಮೋದ್ ಮದ್ವರಾಜ್ ಅವರು 2016 ರ ರಿಯೋ ಒಲಂಪಿಕ್ಸ್‍ಗೆ ಅರ್ಹತೆ ಪಡೆದ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ 2.00 ಲಕ್ಷ ರೂಪಾಯಿಗಳ ಪ್ರೋತ್ಸಾಹಧನವನ್ನು ಪ್ರಕಟಿಸಿದ್ದಾರೆ.
 
 
ಈ ಪ್ರೋತ್ಸಾಹಧನ ಪಡೆದ ರಾಜ್ಯದ ಕ್ರೀಡಾಪಟುಗಳೆಂದರೆ ಹಾಕಿ ಪಂದ್ಯದ ಎಸ್. ವಿ. ಸುನೀಲ್, ವಿ. ಆರ್. ರಘುನಾಥ್, ಎಸ್. ಕೆ. ಉತ್ತಪ್ಪ, ನಿಖಿನ್ ತಿಮ್ಮಯ್ಯ, ಅಥ್ಲೆಟಿಕ್ಸ್‍ನ ವಿಕಾಸ್‍ಗೌಡ ಮತ್ತು ಎಂ. ಆರ್. ಪೂವಮ್ಮ, ಟೆನ್ನಿಸ್‍ನ ರೋಹನ್ ಬೋಪಣ್ಣ, ಬ್ಯಾಡ್ಮಿಟಂನ್‍ನ ಅಶ್ವಿನಿ ಪೊನ್ನಪ್ಪ, ಶೂಟಿಂಗ್‍ನ ಪಿ. ಎನ್. ಪ್ರಕಾಶ್ ಹಾಗೂ ಗಾಲ್ಫ್‍ನ ಅದಿತಿ ಅಶೋಕ್ ಸೇರಿದ್ದಾರೆ.
 
 
ರಿಯೋ ಒಲಂಪಿಕ್ಸ್‍ನಲ್ಲಿ ಭಾಗವಹಿಸಲು ದೇಶವನ್ನು ಪ್ರತಿನಿಧಿಸಲು ಅರ್ಹತೆ ಪಡೆದ ರಾಜ್ಯದ ಎಲ್ಲ ಕ್ರೀಡಾಪಟುಗಳನ್ನು ಸಚಿವರು ಅಭಿನಂದಿಸಿದ್ದು ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಲೆಂದು ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here