ರಾಜ್ಯದಲ್ಲೂ ಶೋಕಾಚರಣೆ

0
540

ಬೆಂಗಳೂರು ಪ್ರತಿನಿಧಿ ವರದಿ
ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ವಿಧಿವಶ ಹಿನ್ನೆಲೆಯಲ್ಲಿ ಕರ್ನಾಟದಲ್ಲೂ 1 ದಿನ ಶೋಕಾಚರಣೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಒಂದು ದಿನ ಶೋಕಾಚರಣೆ ನಡೆಸುವಂತೆ ಸರ್ಕಾರ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜೆ ಜಯಲಲಿತಾ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ. ಇಂದು ಚೆನ್ನೈಗೆ ತೆರಳಲಿದ್ದಾರೆ.
 
 
ಸಿಎಂ ಸಿದ್ದರಾಮಯ್ಯ ಅವರು ಜಯಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ. ಇದರಿಂದ ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಚೆನ್ನೈಗೆ ತೆರಳಲಿದ್ದಾರೆ. ಬೆಂಗಳೂರಿನ ಹೆಚ್ ಎಎಲ್ ಏರ್ ಪೋರ್ಟ್ ನಿಂದ ಚೆನ್ನೈಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳಸಲಿದ್ದಾರೆ.
 
 

LEAVE A REPLY

Please enter your comment!
Please enter your name here