ರಾಜ್ಯದಲ್ಲಿ 4.000 ಅಂಗನವಾಡಿ ಕಟ್ಟಡಗಳ ನಿರ್ಮಾಣ

0
298

 
ಬೆಂಗಳೂರು ಪ್ರತಿನಿಧಿ ವರದಿ
2016-17ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 4.000 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು. 1.000 ಕಟ್ಟಡಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ 3.000 ಕಟ್ಟಡಗಳನ್ನು ಕೇಂದ್ರದ ನೆರವಿನಿಂದ ನಿರ್ಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.
 
 
 
ಅವರು ಬುಧವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಲಾಖೆಯ ಉಪನಿರ್ದೇಶಕರು ಹಾಗೂ ಸಿಡಿಪಿಓ ಗಳ ಒಂದು ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಶಾಸಕರ ಉಪಯೋಗಕ್ಕಾಗಿ ಹೊರತಂದಿರುವ ಇಲಾಖೆಯ ವಿವಿಧ ಯೋಜನೆಗಳನ್ನು ಒಳಗೊಂಡ ಕೈಪಿಡಿಯನ್ನು ಹಾಗೂ ಇಲಾಖೆಯ 03 ವರ್ಷಗಳ ಸಾಧನೆಯ ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
 
 
 
ರಾಜ್ಯದಲ್ಲಿ 3.000 ಅಂಗನವಾಡಿ ಕಟ್ಟಡಗಳನ್ನು ತಲಾ 8.00 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದರಲ್ಲಿ ನರೇಗಾ ವತಿಯಿಂದ 5.00 ಲಕ್ಷ ಕೇಂದ್ರ ಸರ್ಕಾರದ ಐ.ಸಿ.ಡಿ.ಎಸ್ ಯೋಜನೆಯಡಿ 2.00 ಲಕ್ಷ ಹಾಗೂ ರಾಜ್ಯ ಸರ್ಕಾರದ ವತಿಯಿಂದ 1.00 ಲಕ್ಷ ಆರ್ಥಿಕ ನೆರವಿನಡಿ ಈ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗುವುದು ಇದನ್ನು ಹೊರತುಪಡಿಸಿ ಇನ್ನೂ 1.000 ಅಂಗನವಾಡಿ ಕೇಂದ್ರಗಳನ್ನು ಇಲಾಖಾ ವತಿಯಿಂದ ನಿರ್ಮಿಸಲಾಗುತ್ತದೆ ಎಂದು ಅವರು ತಿಳಿಸಿದರು.
 
 
 
ಚಿಕಿತ್ಸಾ ಆಹಾರ ವೆಚ್ಚ ಹೆಚ್ಚಳ:-ಅಪೌಷ್ಠಿಕ ಮಕ್ಕಳಿಗೆ ಪ್ರಸ್ತುತ ನೀಡುತ್ತಿರುವ ಚಿಕಿತ್ಸಾ ಆಹಾರ ವೆಚ್ಚವನ್ನು 750 ರೂಗಳಿಂದ 2.000 ರೂಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಅಂಗನವಾಡಿ ಕೇಂದ್ರಗಳಲ್ಲಿ ಇದುವರೆಗೂ ವಾರಕ್ಕೆ ಮೂರು ದಿನ ಕೆನೆ ರಹಿತ ಹಾಲನ್ನು ನೀಡಲಾಗುತ್ತಿದ್ದು, ಇನ್ನು ಮುಂದೆ ವಾರಕ್ಕೆ 03 ದಿನ ಕೆನೆ ಸಹಿತ ಹಾಲನ್ನು ನೀಡಲಾಗುವುದು ಎಂದು ಸಚಿವೆ ಉಮಾಶ್ರೀ ತಿಳಿಸಿದರು.

LEAVE A REPLY

Please enter your comment!
Please enter your name here