ರಾಜ್ಯದಲ್ಲಿ 20,000 ಸ್ಟಾರ್ಟ್ ಅಪ್ ಆರಂಭಿಸುವ ಗುರಿ

0
457

 
ವರದಿ: ಲೇಖಾ
ರಾಜ್ಯದಲ್ಲಿ 20,000 ಸ್ಟಾರ್ಟ್ ಅಪ್(ನವೋದ್ಯಮ) ಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
 
 
 
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಟಾರ್ಟ್ ಅಪ್ (ನವೋದ್ಯಮ) ನೀತಿ 2015-20 ರ ಅನ್ವಯ ಉದ್ದಿಮೆಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಘಟಕವನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದರು. ಆಸಕ್ತ ಉದ್ಧಿಮೆದಾರರು ತಮ್ಮ ಉದ್ದಿಮೆಗಳನ್ನು ಪ್ರಾರಂಭಿಸಲು ಸ್ಟಾರ್ಟ್ ಅಪ್ ಅಂತರ್ಜಾಲದ ಮೂಲಕ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
 
 
 
ಸರ್ಕಾರ ಈ ಯೋಜನೆಗೆ ತಂತ್ರಜ್ಞಾನ, ಹಣಕಾಸಿನ ನೆರವು ಸೇರಿದಂತೆ ಹಲವು ಬಗೆಯ ಪ್ರೋತ್ಸಾಹಗಳನ್ನು ಒಂದೇ ಸೂರಿನಡಿ ಕಲ್ಪಿಸಲಿದೆ. ಸ್ಟಾರ್ಟ್ ಅಪ್ ಉದ್ದಿಮೆಗಳ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ಪೂರಕ ನೆರವು ನೀಡಲಿದೆ ಎಂದರು.
 
 
 
ಸೂಕ್ತ ಮತ್ತು ಉದ್ದಿಮೆಗಳನ್ನು ಆರಂಭಿಸಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದಲ್ಲದೆ ಉದ್ದಿಮೆದಾರರೊಂದಿಗೆ ತಿಂಗಳಿಗೊಮ್ಮೆ ಚರ್ಚಿಸಿ ಸಮಸ್ಯೆಗಳಿದ್ದಲ್ಲಿ ಬಗೆಹರಿಸಲಾಗುವುದು. ಅಲ್ಲದೇ ರಾಷ್ಟ್ರದಲ್ಲೇ ರಾಜ್ಯ ಸ್ಟಾರ್ಟ್ ಅಪ್ ಬೆಳವಣಿಗೆಯಲ್ಲಿ ಮಂಚೂಣಿಯಲ್ಲಿರುವ ರಾಜ್ಯವಾಗಿದೆ ಎಂದು ತಿಳಿಸಿದರು.
 
 
 
ಸ್ಟಾರ್ಟ್ ಅಪ್ ಉದ್ದಿಮೆಗಳ ಅನುಕೂಲಕ್ಕಾಗಿ ಹಾಗೂ ಅಗತ್ಯ ತಂತ್ರಜ್ಞಾನದ ನೆರವು ಕಲ್ಪಿಸಲು ಬಿ.ಎಸ್.ಎನ್.ಎಲ್. ಐ.ಬಿ.ಎಂ. ಅಮೇಜಾನ್ ಸಂಸ್ಥೆಗಳು ಸೇರಿದಂತೆ ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಂತರ್ಜಾಲದ ಮೂಲಕ ತಂತ್ರಜ್ಞಾನ ಒದಗಿಸಲಾಗುತ್ತಿದೆ. ಆಗಸ್ಟ್ 16 ರಂದು ಮೊದಲ ಓಪನ್‍ಹೌಸ್ ಸಭೆಯನ್ನು ಸರ್ಕಾರ ಹಾಗೂ ನಾಸ್ಕಾಂ ನಡುವೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
 
 
ಹತ್ತುಸಾವಿರ ಸ್ಟಾರ್ಟ್ ಅಪ್ ಗೋಧಾಮುಗಳನ್ನು ಬೆಂಗಳೂರಿನಲ್ಲಿ ಆರಂಭಿಸಲು ಚಿಂತಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.

LEAVE A REPLY

Please enter your comment!
Please enter your name here