ರಾಜ್ಯದಲ್ಲಿ ಹಕ್ಕಿಜ್ವರ ಭೀತಿ!

0
387

ಬೀದರ್ ಪ್ರತಿನಿಧಿ ವರದಿ
ರಾಜ್ಯದಲ್ಲಿ ಮತ್ತೆ ಹಕ್ಕಿ ಜ್ವರ ಭೀತಿ ಎದುರಾಗಿದೆ. ಬೀದರ್ ಜಿಲ್ಲೆಯ ಮೊಳಕೆರದಲ್ಲಿ ನಿನ್ನೆಯಷ್ಟೇ ಹಕ್ಕಿಜ್ವರದ ಸೋಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಕೋಳಿಗಳನ್ನು ನಾಶ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
 
 
 
ಹಕ್ಕಿಜ್ವರದ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕೋಳಿ ಫಾರಂಗೆ ಇಂದು ತಜ್ಞರ ತಂಡ ಭೇಟಿ ನೀಡಲಿದ್ದು, ಸೋಂಕು ಪೀಡಿತ ಸುಮಾರು 1.5 ಲಕ್ಷ ಹಕ್ಕಿಗಳನ್ನು ವೈಜ್ಞಾನಿಕ ಪ್ರಕ್ರಿಯೆ ಮೂಲಕ ಕೊಲ್ಲಲು ನಿರ್ಧರಿಸಲಾಗಿದೆ.
 
 
ಮೂಲಗಳ ಪ್ರಕಾರ ಬೀದರ್ ನ ಹುಮ್ನಾಬಾದ್ ನಲ್ಲಿರುವ ಮೆಳಕೇರಾ ಗ್ರಾಮದಲ್ಲಿನ ರಮೇಶ್‌ ಗುಪ್ತಾ ಅವರ ಕೋಳಿ ಫಾರಂನಲ್ಲಿ ಹಕ್ಕಿ ಜ್ವರದಿಂದಾಗಿ 20 ದಿನಗಳಲ್ಲಿ 35 ಸಾವಿರ ಕೋಳಿಗಳು ಸಾವಿಗೀಡಾಗಿವೆ. ಹೀಗಾಗಿ ಈ ಫಾರಂನಲ್ಲಿರುವ 1.5 ಲಕ್ಷ ಕೋಳಿಗಳನ್ನು ಹಾಗೂ ಆಸುಪಾಸಿನ 1 ಕಿ. ಮೀ ವ್ಯಾಪ್ತಿಯ ಫಾರಂಗಳಲ್ಲಿರುವ ಕೋಳಿಗಳನ್ನು ನಾಶಪಡಿಸುವಂತೆ ಪಶುಸಂಗೋಪನಾ ಇಲಾಖೆ ಸೂಚಿಸಿದೆ. ರಮೇಶ್ ಗುಪ್ತಾ ಅವರ ಕೋಳಿ ಫಾರಂನಲ್ಲಿನ ಸುಮಾರು 23 ಸಾವಿರ ಕೋಳಿಗಳು ಸೋಂಕಿನಿಂದ ನರಳುತ್ತಿವೆ. ಹೀಗಾಗಿ ಸೋಂಕು ಇತರೆ ಕೋಳಿಗಳಿಗೂ ಹರಡಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಕೋಳಿ ಫಾರಂ ಸುತ್ತಮುತ್ತಲಿನ ಸುಮಾರು 1.ಕಿ. ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿಗಳನ್ನು ನಾಶಪಡಿಸುವಂತೆ ಸೂಚನೆ ನೀಡಲಾಗಿದೆ.

LEAVE A REPLY

Please enter your comment!
Please enter your name here