ರಾಜ್ಯದಲ್ಲಿ ವಾಡಿಕೆ ಮಳೆ: 49.39 ಲಕ್ಷ ಹೆಕ್ಟೇರ್‍ನಲ್ಲಿ ಭಿತ್ತನೆ

0
525

ವರದಿ: ಲೇಖಾ
ರಾಜ್ಯದ ಬಹುತೇಕ ಭಾಗಗಳಲ್ಲಿ ಈವರೆಗೆ ವಾಡಿಕೆಗಿಂತ ಉತ್ತಮ ಮಳೆಯಾಗಿದ್ದು ಪ್ರಸಕ್ತ ಸಾಲಿನಲ್ಲಿ 49.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭಿತ್ತನೆ ಕಾರ್ಯ ನಡೆದಿದ್ದು ಕಳೆದ 5 ವರ್ಷಗಳಿಗೆ ಹೋಲಿಸಿದರೆ ಭಿತ್ತನೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದರು.
 
 
 
ವಿಕಾಸ ಸೌಧದಲ್ಲಿ ಮಾತನಾಡಿದ ಸಚಿವರು ಮುಂಗಾರು ಹಂಗಾಮಿನಲ್ಲಿ 3 ಲಕ್ಷ ಟನ್ ಗುರಿ ಹೊಂದಲಾಗಿದೆ. ಇದೇ ರೀತಿ ಉತ್ತಮ ಮಳೆಯಾದರೆ ನಿರ್ಧಿಷ್ಟಗುರಿಗಿಂತ ಹೆಚ್ಚು ಇಳುವರಿ ಬರುವ ನಿರೀಕ್ಷೆಯಿದೆ ಎಂದರು.
 
 
 
ಈ ಬಾರಿ ಸುಮಾರು 37.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭಿತ್ತನೆ ಕಾರ್ಯ ನಡೆಯಬೇಕಿದ್ದು ಆದರೆ ವಾಡಿಕೆಗಿಂತ ಶೇ. 150 ರಷ್ಟು ಹೆಚ್ಚು ಭಿತ್ತನೆ ಕಾರ್ಯ ನಡೆದಿದೆ. ರಾಜ್ಯದಲ್ಲಿ ರಸಗೊಬ್ಬರ ಹಾಗೂ ಭಿತ್ತನೆ ಬೀಜಗಳನ್ನು ಸಕಾಲದಲ್ಲಿ ಒದಗಿಸಲಾಗುತ್ತಿದೆ. ಈವರೆಗೆ ರಾಜ್ಯದಲ್ಲಿ 12.95 ಲಕ್ಷ ಟನ್ ರಸಗೊಬ್ಬರವನ್ನು ರೈತರಿಗೆ ಒದಗಿಸಲಾಗಿದೆ. ಜುಲೈ 25 ರವರೆಗೆ 3.46 ಲಕ್ಷ ಕ್ವಿಂಟಾಲ್ ಭಿತ್ತನೆ ಬೀಜ ಸರಬರಾಜು ಮಾಡಲಾಗಿದೆ ಎಂದು ಹೇಳಿದರು.
 
 
 
ಕಳೆದ ವರ್ಷ 175 ಕೃಷಿ ಯಂತ್ರ ಸರಬರಾಜು ಕೇಂದ್ರಗಳನ್ನು ತೆರೆಯುವ ಮೂಲಕ ಕಡಿಮೆ ಬಾಡಿಗೆ ದರದಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣ ಒದಗಿಸಲಾಗಿತ್ತು. ಈ ಬಾರಿ 325 ಕೃಷಿ ಯಂತ್ರ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಕೇಂದ್ರ 70.00 ಲಕ್ಷ ರೂ. ಮೌಲ್ಯದ ಯಂತ್ರೋಪಕರಣ ಇಡಲಾಗುವುದು.
 
 
 
ಬೆಳೆ ವಿಮೆ ಹಣ ಪಡೆಯಲು ಹೆಸರು ನೋಂದಾಯಿಸಿಕೊಳ್ಳುವ ಅವಧಿಯನ್ನು ವಿಸ್ತರಣೆ ಮಾಡದಂತೆ ಕೇಂದ್ರ ಸರ್ಕಾರ ಸ್ವಷ್ಟ ನಿರ್ದೇಶನ ನೀಡಿದ್ದು ಅರ್ಹ ಫಲಾನುಭವಿ ರೈತರು ಜುಲೈ 30 ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಈವರೆಗೆ 4.26 ಲಕ್ಷ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ 693 ಕೋಟಿ ರೂ. ಮುಂಗಾರು ಬೆಳೆ ಪರಿಹಾರ ಹಣ ಬಂದಿದು ಹಿಂಗಾರಿನ ರೂ. 200 ಕೋಟಿ ಕೇಂದ್ರ ಸರ್ಕಾರದಿಂದ ಬರಬೇಕಿದೆ. ರಾಜ್ಯ ಸರ್ಕಾರ 2150 ಕೋಟಿ ರೂ.ಗಳನ್ನು ಪರಿಹಾರ ರೂಪದಲ್ಲಿ ನೀಡಿದೆ. ಕಳೆದ ಸಾಲಿನಲ್ಲಿ ಸುಮಾರು 300 ಕೋಟಿ ರೂ. ಹೆಚ್ಚು ಹಣವನ್ನು ರೈತರಿಗೆ ಬೆಳೆವಿಮೆ ರೂಪದಲ್ಲಿ ನೀಡಲಾಗಿದೆ ಎಂದು ಸಚಿವರು ಹೇಳಿದರು.

LEAVE A REPLY

Please enter your comment!
Please enter your name here