ರಾಜ್ಯದಲ್ಲಿ ಮಳೆಯ ವಾತಾವರಣ

0
307

ಹುಬ್ಬಳ್ಳಿಯಲ್ಲಿ ಏಕಾಏಕಿ ಸುರಿದ ಮಳೆ- ಕರಾವಳಿಯಲ್ಲೂ ಮಳೆಯ ಸಿಂಚನ
ನಮ್ಮ ಪ್ರತಿನಿಧಿ ವರದಿ
ಹವಾಮಾನ ವರದಿಯಂತೆ ಈ ಬಾರಿ ಮಳೆಗಾಲ ಪ್ರಾರಂಭ ಜೋರಾಗಿಯೇ ಕಾಣಿಸುತ್ತಿದೆ. ಸೋಮವಾರ ಬೆಳಗ್ಗಿನಿಂದಲೇ ಕರಾವಳಿಯ ಬಹುಭಾಗಗಳಲ್ಲಿ ಜೋರಾಗಿ ಮಳೆಯಾಗಿತ್ತು. ದಿನವಿಡೀ ಹಲವೆಡೆಗಳಲ್ಲಿ ಭರ್ಜರಿ ಮಳೆಯಾಗಿದೆ. ಇತ್ತ ಹುಬ್ಬಳ್ಳಿಯಲ್ಲೂ ಭರ್ಜರಿ ಮಳೆ ಬಿದ್ದಿದೆ. ಸೋಮವಾರ ಸಾಯಂಕಾಲದ ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಸಾಯಂಕಾಲ ದಿನದ ಕೆಲಸ ಮುಗಿಸಿ ಮರಳುತ್ತಿರುವವರು ಮಳೆಗೆ ತೋಯ್ದುಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಏಕಾಏಕಿ ಸುರಿದ ಮಳೆಯಿಂದಾಗಿ ಜನ ಕಂಗಾಲಾಗಿದ್ದಾರೆ.

LEAVE A REPLY

Please enter your comment!
Please enter your name here