ರಾಜ್ಯಕ್ಕೆ ಲಾಕ್‌ ಒಂದೇ ಪರಿಹಾರ?

0
1949

ಬೆಂಗಳೂರು ವಿಶೇಷ ಪ್ರತಿನಿಧಿ ವರದಿ

ರಾಜ್ಯಕ್ಕೆ ಮತ್ತೊಮ್ಮೆ ಲಾಕ್‌ ಡೌನ್‌ ಒಂದೇ ಪರಿಹಾರವೇ? ಈ ಅಂಶ ಇದೀಗ ಬಲವಾಗಿದೆ. ಇದಕ್ಕೆ ಉತ್ತರ ಹೌದು ಎಂದೇ ಕೇಳಿ ಬರುತ್ತಿದೆ. ನೈಟ್‌ ಕರ್ಪ್ಯೂ, ಕಠಿಣ ಸೂತ್ರಗಳೆಲ್ಲವೂ ಯಾವೊಂದು ರೀತಿಯಲ್ಲೂ ಪರಿಣಾಮ ಬೀರದ ಹಿನ್ನಲೆಯಲ್ಲಿ ಲಾಕ್‌ ಡೌನ್‌ ಮತ್ತೊಮ್ಮೆ ಅನಿವಾರ್ಯ ಎಂಬುದು ಸರ್ವಪಕ್ಷ ಸಭೆಯಲ್ಲೂ ಕೂಡಾ ಕೇಳಿ ಬಂದಿದೆ.
ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಲಾಕ್‌ ಡೌನ್‌ ವಿಚಾರವನ್ನು ಮೊಟ್ಟ ಮೊದಲನೆಯದಾಗಿ ಸಭೆಯಲ್ಲಿ ಹೇಳಿದರು. ಇದಕ್ಕೆ ಹಲವು ಮಂದಿಯ ಅನುಮೋದನೆಯೂ ಲಭಿಸಿದೆ. ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ನೋಡಿದರೆ ಈಗಾಗಲೇ ಈ ಬಗ್ಗೆ ಸರಕಾರ ಬದ್ಧವಾದಂತಿದೆ.
ದಿನಂಪ್ರತಿ ಹೆಚ್ಚುತ್ತಿರುವ ಕೊರೊನಾ ಕೇಸುಗಳ ಸಂಖ್ಯೆಯನ್ನು ನೋಡುವಾಗ ಲಾಕ್‌ ಡೌನ್‌ ಮಾಡಿ ಕಠಿಣ ಸೂತ್ರ ಅಳವಡಿಸಿ, ಕೊರೊನಾ ʻಚೈನ್‌ʼ ಬ್ರೇಕ್‌ ಮಾಡುವ ಮೂಲಕ ರೋಗ ನಿಯಂತ್ರಣ ಮಾಡುವ ಚಿಂತನೆಯನ್ನು ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here