ರಾಜೀನಾಮೆ ಪ್ರಶ‍್ನೆಯೇ ಇಲ್ಲ- ಸಿ.ಎಂ

0
350

ಬೆಂಗಳೂರು ಪ್ರತಿನಿಧಿ ವರದಿ
ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂಬುದನ್ನು ಸಿ.ಎಂ.ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಶಾಸಕಾಂಗ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಎಲ್ಲಾ ಕಾಂಗ್ರೆಸ್ ಶಾಸಕರು ಸಚಿವರು ನಮ್ಮ ನಿರ್ಧಾರಕ್ಕೆ ಬೆಂಬಲ ನೀಡಬೇಕೆಂದಿದ್ದಾರೆ. ಯಾವುದೇ ರೀತಿಯ ಸ್ಪಷ್ಟ ಸಾಕ್ಷಿಗಳು ಲಭ್ಯವಿಲ್ಲದಿದ್ದರೂ ರಾಜೀನಾಮೆಯನ್ನು ಪ್ರತಿಪಕ್ಷಗಳು ಕೇಳುತ್ತಿವೆ. ಪ್ರತಿಪಕ್ಷ ಹೇಳಿದ್ದಕ್ಕೆಲ್ಲಾ ನಾವು ಸೊಪ್ಪುಹಾಕಬೇಕೆಂದೇನಿಲ್ಲ. ಜಾರ್ಜ್ ಅವರನ್ನು ಉಳಿಸುವ ನಿರ್ಧಾರ ನಮ್ಮದು. ನಾವು ಪ್ರತಿಪಕ್ಷಗಳ ಪ್ರತಿಭಟನೆಯನ್ನು ಎದುರಿಸಬೇಕು ಎಂದು ಸಿ.ಎಂ ಹೇಳಿದ್ದಾರೆ. ಉಪಸ್ಥಿತರಿದ್ದ ಕಾಂಗ್ರೆಸ್ ಶಾಸಕರು ಸಮ್ಮತಿಸಿದ್ದರೆ.

LEAVE A REPLY

Please enter your comment!
Please enter your name here