ರಾಜೀನಾಮೆಗೆ ಒತ್ತಾಯ

0
264

 
ದ.ಕ. ಪ್ರತಿನಿಧಿ ವರದಿ
ಆರೋಗ್ಯ ಇಲಾಖೆಯಲ್ಲಿ ಕಳಪೆ ಜೌಷಧಿ ಖರೀದಿ ಹಾಗೂ ಕಡಿಮೆ ಬೆಲೆಯ ಔಷಧಿಗಳಿಗೆ ದುಬಾರಿ ಬಿಲ್ಲು ಮಾಡಿ ಮಾರುವ ಅಪಾದನೆ ಒಳಗಾಗಿರುವ ಖಾದರ್ರವರು ರೂ.1250 ಕೋಟಿ ಭ್ರಷ್ಟಾಚಾರದ ವಿಚಾರ ಇದೀಗ ಬಹಿರಂಗಗೊಂಡಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ತನ್ನ ಇಲಾಖೆಯಲ್ಲಿ ಮುಂದುವರಿಯಲು ಅನರ್ಹವಾಗಿರುತ್ತಾರೆ. ಅವರು ನೈತಿಕ ಹೊಣೆ ಹೊತ್ತು ತನ್ನ ಶಾಸಕ ಮತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿ ಆಗ್ರಹಿಸಿದ್ದಾರೆ.
 
 
 
ಉಳ್ಳಾಲ ಕ್ಷೇತ್ರದ ಇತಿಹಾಸದಲ್ಲಿ ಪ್ರಪಥಮ ಬಾರಿಗೆ ಮಂತ್ರಿಯಾಗುವ ಅವಕಾಶ ಖಾದರ್ ಅವರಿಗೆ ಸಿಕ್ಕಿದ್ದು, ತನ್ನ ಸ್ಥಾನವನ್ನು ದುರುಪಯೋಗಪಡಿಸಿ ಭ್ರಷ್ಟಾಚಾರ ಎಸಗಿರುವುದರಿಂದ ಕ್ಷೇತ್ರದ ಜನತೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿ ಆಪಾದಿಸಿದ್ದಾರೆ.

LEAVE A REPLY

Please enter your comment!
Please enter your name here