ಪ್ರಮುಖ ಸುದ್ದಿರಾಜ್ಯವಾರ್ತೆ

ಹಾಡುಹಗಲೇ ರಾಜಧಾನಿಯಲ್ಲಿ ಶೂಟೌಟ್

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ ಹಾಡುಹಗಲೇ ಎಪಿಎಂಸಿ ಅಧ್ಯಕ್ಷನ ಮೇಲೆ ಗುಂಡಿನ ದಾಳಿ ನಡೆದಿದೆ. ನಗರದ ಕೋಗಿಲು ಕ್ರಾಸ್ ನಲ್ಲಿ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಅಲಿಯಾಸ್ ಡಾಬಾ ಸೀನಾ ಮೇಲೆ ಫೈರಿಂಗ್ ನಡೆದಿದೆ.
 
 
 
ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಕೋಗಿಲು ಕ್ರಾಸ್ ಸಿಗ್ನಲ್ ನಲ್ಲಿ ಕಾರಿನಲ್ಲಿ ಕುಳಿತಿದ್ದಾಗ ಈ ಕೃತ್ಯ ಎಸಗಿದ್ದಾರೆ.
 
ಘಟನೆಯಲ್ಲಿ ಶೀನಿವಾಸ ಕಡಬಗೆರೆ ಕಾರು ಚಾಲಕ ಮೂರ್ತಿಗೂ ಗಾಯಗಳಾಗಿದ್ದು, ಹೆಬ್ಬಾಳದ ಕೊಳಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೋಂಡಾ ಸಿಟಿ ಕಾರಿನ ಸಂಖ್ಯೆ-ಕೆಎ 04, ಎಂಎಸ್ 605 ಆಗಿದೆ.
 
 
 
ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಹರ್ಷ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯಲಹಂಕ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
 
ಶಂಕೆ:
ಈ ಪ್ರಕರಣಕ್ಕೆ ರಾಮನಗರದಲ್ಲಿ ನಡೆದಿದ್ದ ಎ ಟಿ ಬಾಬು ಕೊಲೆಯ ನಂಟು ಇದೆ ಎಂದು ಶಂಕಿಸಲಾಗಿದೆ. ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀವಾಸ್ ಅವರ ಸಹೋದರ ಪಾಯ್ಸನ್ ರಾಮ, ಎಟಿ ಬಾಬು ಪ್ರರಕಣದ ಆರೋಪಿಯಾಗಿದ್ದಾನೆ. ಪಾಯ್ಸನ್ ರಾಮ ಕೊಲೆ ಕೇಸ್ ನಲ್ಲಿ ಜೈಲಿಗೆ ಹೋಗಿದ್ದ. ಪ್ರಕರಣದ ಸಾಕ್ಷಿದಾರರ ಮೇಲೆಯೂ ದಾಳಿ ನಡೆದಿತ್ತು. ಅದೇ ದ್ವೇಷದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಹತ್ಯೆ ಸ್ಕೆಚ್ ಎಂದು ಶಂಕಿಸಲಾಗಿದೆ.
ಪಾಯ್ಸನ್ ರಾಮನ ವಿರುದ್ಧ 40ಕೇಸ್ ಗಳು ದಾಖಲಾಗಿದೆ. ಕೊಲೆ, ಕೊಲೆ ಯತ್ನ, ಬೆದರಿಕೆ, ಸುಲಿಗೆ ಸೇರಿ ಹಲವು ಕೇಸ್ ಗಳಿವೆ. 40 ಕೇಸ್ ಗಳಲ್ಲಿ 38 ಕೇಸ್ ಗಳು ಅಣ್ಣ ಶ್ರೀನಿವಾಸ್ ಮುರ್ತಿಗಾಗಿ ಮಾಡಿದ್ದು. ಪಾಯ್ಸನ್ ರಾಮ ಅಣ್ಣ ಶ್ರೀನಿವಾಸ್ ಮುರ್ತಿಗೆ ಬೆನ್ನುಲುಬಾಗಿ ನಿಂತಿದ್ದ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here