ರಾಜಧಾನಿಯಲ್ಲಿ ಧರೆಗುರುಳಲಿವೆ ನೂರಾರು ಮರಗಳು

0
476
ಸಾಂದರ್ಭೀಕ ಚಿತ್ರ

ವರದಿ: ಲೇಖಾ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸ ಹೊಸ ಮಾರ್ಗೋಪಾಯಗಳು ಜಾರಿಗೆ ಬರುತ್ತಲೇ ಇವೆ. ಅದರೆ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಕ್ತಿ ಮಾತ್ರ ಸಿಕ್ಕಿಲ್ಲ. ಹೀಗಿರುವಾಗ ಸಂಚಾರ ದಟ್ಟಣೆ ತಡೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇನ್ನೊಂದು ಯೋಜನೆಯತ್ತ ಗಮನ ಹರಿಸಿದ್ದು, ಸ್ಟೀಲ್ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ.
 
 
 
ಹೆಚ್ಚು ಜನನಿಬಿಡ ರಸ್ತೆಗಳಾದ ಬಳ್ಳಾರಿ ರಸ್ತೆ, ಸ್ಯಾಂಕಿ ಕೆರೆ ರಸ್ತೆ, ಪ್ಯಾಲೆಸ್ ರಸ್ತೆ, ಮಿಲ್ಲರ್ಸ್ ರಸ್ತೆ ಭಾಗದಲ್ಲಿ ಸ್ಟೀಲ್ ಮೇಲ್ಸೇತುವೆ ನಿರ್ವಣಕ್ಕೆ ಮುಂದಾಗಿರುವ ಪ್ರಾಧಿಕಾರ, ಈ ಯೋಜನೆಗೆ ಸುಮಾರು 500 ಮರಗಳು ಧರೆಗುರುಳಲಿರುವ ಸಾಧ್ಯತೆ ಇದೆ ಎಂದು ತಿಳಿಸಿದೆ.
 
 
 
ಸ್ಥಳ ಪರಿಶೀಲನೆ ನಡೆಸಿರುವ ಬಿಡಿಎ ಅಧಿಕಾರಿಗಳು 400 ರಿಂದ 500 ಮರಗಳು ನಿರ್ನಾಮವಾಗುವ ಸೂಚನೆ ನೀಡಿದ್ದಾರೆ. ಈ ಕುರಿತು ಪಾಲಿಕೆಗೆ ಪತ್ರ ಕೂಡ ಬರೆದಿದ್ದಾರೆ. ಸಮೀಕ್ಷೆ ಮುಗಿದ ನಂತರ ಮರಗಳ ಕಟಾವು ಮಾಡಿ ನಂತರ ಭೂ ಕೆಲಸಕ್ಕೆ ಕೈಹಾಕುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
 
 
 
ಮರಗಳ ಸಂಖ್ಯೆಯೇ ಕಡಿಮೆಯಾಗಿರುವ ರಾಜಧಾನಿಯಲ್ಲಿ ಈಗಿರುವ ಮಗಳನ್ನೂ ಕಟಾವು ಮಾಡಿ, ಮೇಲ್ಸೇತುವೆ ನಿರ್ಮಾಣ ಮಾಡುವ ಉದ್ದೇಶ ಎಷ್ಟರಮಟ್ಟಿಗೆ ಸರಿ. ರಸ್ತೆ ಅಭಿವೃದ್ಧಿಗೆ ತೆರವುಗೊಳಿಸುವ ಮರಗಳ ಬದಲಿಗೆ ಬೇರೆ ಸ್ಥಳಗಳಲ್ಲಿ ಮರ ನೆಟ್ಟು ಬೆಳೆಸಬೇಕು ಎಂಬ ಹೈಕೋರ್ಟ್ ಆದೇಶವನ್ನೇ ಈಗ ಯಾರೂ ಪಾಲನೆ ಮಾಡುತ್ತಿಲ್ಲ. ಹೀಗಿರುವಾಗ ಸಂಚಾರ ದಟ್ಟಣೆ ನಿಯಂತ್ರಣದ ನೆಪದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಮರಗಳನ್ನು ಕಟಾವು ಮಾಡಲು ಹೊರಟಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಯಾವ ಕ್ರಮಕೈಗೊಳ್ಳಲಿದೆ ಎಂಬುದು ಪ್ರಶ್ನೆ.
 
 
 
ಭಾರಿ ಪ್ರಮಾಣದ ಮರ ಕತ್ತರಿಸುವ ಮೊದಲು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದು ಮತ್ತು ಕೋರ್ಟಿನಿಂದ ನೇಮಕವಾದ ಸಮಿತಿಗೆ ತಿಳಿಸಿ ನಂತರ ಮುಂದುವರೆಯಬೇಕೆಂಬ ಪರಿಸರವಾದಿಗಳ ಅಭಿಪ್ರಾಯ.
ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮೇಲ್ಸೇತುವೆ ನಿರ್ಮಾಣ ಮಾಡುವುದೇನೋ ಉತ್ತಮ ಕ್ರಮವೇ ಆದರೆ ಇರುವ ಮರಗಳನ್ನು ಧರೆಗುರುಳಿಸುವುದು ಯಾವ ನ್ಯಾಯ..?

LEAVE A REPLY

Please enter your comment!
Please enter your name here