ರಾಗಿ ಹಾಲ್ಬಾಯ್

0
571

 
ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
4 ಗಂಟೆಗಳ ಕಾಲ ನೆನೆಸಿ ಬಸಿದ ರಾಗಿ ಹಿಟ್ಟು 1 ಕಪ್, ಗೇರುಬೀಜ 25, ತೆಂಗಿನ ತುರಿ 3 ಕಪ್, ಒಂದೂವರೆ ಕಪ್ ಸಕ್ಕರೆ ಅಥವಾ ಬೆಲ್ಲಪುಡಿ, 2 ಕಪ್ ಹಾಲು, ಒಂದು ಚಮಚ ಏಲಕ್ಕಿ, ಅರ್ಧ ಕಪ್ ತುಪ್ಪ.
 
 
 
ತಯಾರಿಸುವ ವಿಧಾನ:
ಗೇರುಬೀಜವನ್ನು ಎರಡು ಗಂಟೆಗಳ ಕಾಲ ಹಾಲಿನಲ್ಲಿ ನೆನೆಸಿಡಿ. ತೆಂಗಿನತುರಿ, ಏಲಕ್ಕಿ, ಗೋಡಂಬಿಗಳನ್ನು ನೈಸಾಗಿ ತಕ್ಕಷ್ಟು ಹಾಲಿನೊಡನೆ ಮಿಕ್ಸಿ ಮಾಡಿ. ರಾಗಿ ಹಿಟ್ಟು ರುಬ್ಬಿದ ಮಿಶ್ರಣ ಸಕ್ಕರೆ, ಹಾಲು, ತುಪ್ಪ ಬೆರೆಸಿ ಒಲೆಯ ಮೇಲಿನ ಬಾಣಲೆಗೆ ಹಾಕಿ ಕೆದಕುತ್ತಿರಿ. ಮಿಶ್ರಣ ಪಾತ್ರೆಯ ಅಂಚು ಬಿಟ್ಟು ಮುದ್ದೆಯಂತಾದಾಗ ಗ್ರೀಸ್ ಮಾಡಿ ತಟ್ಟೆಗೆ ಸುರಿಯಿರಿ. ಆರದಿ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.ಸವಿಯಿರಿ.
 

LEAVE A REPLY

Please enter your comment!
Please enter your name here