ರಾಖಿ ಹಬ್ಬಕ್ಕೆ ಉಡುಗೊರೆ

0
326

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ರಕ್ಷಾಬಂಧನದ ಉಡುಗೊರೆಯಾಗಿ ಭಾರತಕ್ಕೆ ರಿಯೋ ಡೀ ಜನೈರೋ ಒಲಿಂಪಿಕ್ಸ್ ನಲ್ಲಿ ಚೊಚ್ಚಲ ಪದಕ ದೊರಕಿದೆ. ಹರಿಯಾಣ ಪ್ರತಿಭಾನ್ವಿತ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಡುವ ಮೂಲಕ ರಾಖಿ ಹಬ್ಬಕ್ಕೆ ಸಾಕ್ಟಿಯಾಗಿದ್ದಾರೆ.
 
 
58 ಕಿಲೋ ವಿಭಾಗದ ರಿಪಚೇಜ್ ಸ್ಪರ್ಧೆಯಲ್ಲಿ ಕಿರ್ಗಿಸ್ತಾನದ ಐಸುಲು ಟೈನಿಬೋಕೋವಾ ಅವರನ್ನು ಸಾಕ್ಷಿ 8-5 ಅಂಕಗಳಿಂದ ಸೋಲಿಸಿ ಕಂಚಿನ ಪದಕ ಜಯಿಸಿದರು.
 
 
ದಕ ಗೆದ್ದ ಮೊಟ್ಟಮೊದಲ ಮಹಿಳಾ ಕುಸ್ತಿಪಟು
ಒಲಿಂಪಿಕ್ಸ್’ನಲ್ಲಿ ಕುಸ್ತಿಯಲ್ಲಿ ಪದಕ ಗೆದ್ದಿರುವ ಮೊಟ್ಟಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಗೂ ಸಾಕ್ಷಿ ಮಲಿಕ್ ಪಾತ್ರವಾಗಿದ್ದಾರೆ. ಹಾಗು, ಪದಕದ ಪೋಡಿಯಂ ಏರಿದ ನಾಲ್ಕನೇ ಮಹಿಳಾ ಕ್ರೀಡಾಪಟು ಎಂಬ ಗೌರವಕ್ಕೂ ಪಾತ್ರವಾಗಿದ್ದಾರೆ. ಜತೆಗೆ ಒಲಿಂಪಿಕ್ಸ್’ನಲ್ಲಿ ಪದಕದ ಸಾಧನೆ ಮಾಡಿದ ಭಾರತದ ನಾಲ್ಕನೇ ಮಹಿಳೆ ಎಂಬ ಗೌರವಕ್ಕೆ ಸಾಕ್ಷಿ ಪಾತ್ರರಾಗಿದ್ದಾರೆ

LEAVE A REPLY

Please enter your comment!
Please enter your name here